ಬೆಳಗಾವಿ-ಕೃಷ್ಣ, ಕಾವೇರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ
ನ್ಯಾಯಾಧೀಕರಣ ಮುಂದೆ ವಾದ ಮಂಡಿಸಲು ವಕೀಲರ ಕೋಟಿ ಕೋಟಿ ಹಣ ಖರ್ಚಾಗಿದೆ ಎಂದು
ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದಾಖಲೆ ಬಿಡುಗಡೆ ಮಾಡಿದ್ದಾರೆ
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು
ಕಾವೇರಿ ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಲು ವಕೀಲರಿಗೆ 36.52 ಕೋಟಿ ಹಣವನ್ನು ಸಕರ್ಕಾರ ಖರ್ಚು ಮಾಡಿದೆ
2014ರಿಂದ 2016ರ ವರೆಗೆ ರಾಜ್ಯದ ಪರ ವಕೀಲರಿಗೆ ಸರ್ಕಾರದಿಂದ ಇಷ್ಟೊಂದು ಹಣ ಖರ್ಚಾದರೂ ಯಾವುದೇ ಪ್ರಯೋಜನವಾಗಿಲ್ಲ ೆಂದು ಭಿಮಪ್ಪ ಗಡಾದ ಅಸಮಾಧಾನ ವ್ಯಡಕ್ತಪಡಿಸಿದ್ದಾರೆ
ಕೃಷ ನ್ಯಾಯಧೀಕರಣ ವಾದ ಮಂಡಿಸಲು 39.69 ಕೋಟಿ ಹಣ ಖರ್ಚಾಗಿದೆ
2004ರಲ್ಲಿ ರಚನೆಯಾದ ಕೃಷ್ಣಾ ನ್ಯಾಯಾಧೀಕರಣ ಮುಂದೆ ವಾದ ಮಂಡಿಸಲು
ಹಿರಿಯ ವಕೀಲ ಪಾಲಿ ನಾರಿಮನ್- 14.76 ಕೋಟಿ ಫೀಸ್
ವಕೀಲ ಅನಿಲ್ ಬಿ ದಿವಾನ್- 26.24 ಕೋಟಿ ಫೀಸ್
ವಕೀಲ ಶರತ್ ಜವಳಿ- 9.40 ಕೋಟಿ ಫೀಸ್
ವಕೀಲ ಮೋಹನ್ ಕಾತರಕಿ- 7.85 ಕೋಟಿ ಫೀಸ್
ವಕೀಲ ಬ್ರೀಜೆಶ್ ಕಾಳಪ್ಪ – 3.89 ಕೋಟಿ ಫೀಸ್
ವಕೀಲ ಎಸ್.ಪಿ. ಸಿಂಗ್- 2.53 ಕೋಟಿ ಫೀಸ್
ವಕೀಲ ರಣವೀರ್ ಸಿಂಗ್ – 1.5 ಕೋಟಿ ಫೀಸ್
ವಕೀಲ ಎಸ್.ಸಿ ಶರ್ಮಾ- 1.46 ಕೋಟಿ ಫೀಸ್
ವಕೀಲ ಆರ್.ಎಸ್. ಪಾಪು- 1.20 ಕೋಟಿ ಫೀಸ್
ವಕೀಲ ಬಸಪ್ರಭು ಎಸ್. ಪಾಟೀಲ್- 1.8 ಕೋಟಿ ಫೀಸ್
ಸರ್ಕಾರದ ಬೊಕ್ಕಸದಿಂದ ವಕೀಲರಿಗೆ ಕೋಟಿ ಕೋಟಿ ಹಣ ಫೀಸ್ ನೀಡಿದೆ
ಆದರೇ ರಾಜ್ಯದ ರೈತರಿಗೆ ಸಿಗಬೇಕಾದ ನ್ಯಾಯ ಸಿಗುವಲ್ಲಿ ವಿಫಲವಾಗಿದೆ ಎಂದು ಭಿಮಪ್ಪ ಗಡಾದ ಆರೋಪಿಸಿದ್ದಾರೆ
ಬೆಳಗಾವಿಯಲ್ಲಿ ಅವರು ಇದಕ್ಕೆ ಸಮಂದಿಸಿದ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ