ಬೆಳಗಾವಿ- ಸೀಜರೀನ್ ಸಂಧರ್ಭದಲ್ಲಿ ಮಗು ಸಾವನ್ನೊಪ್ಪಿದ್ದು, ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ.
ಹೆರಿಗೆಗಾಗಿ ಎಂಟು ದಿನದ ಹಿಂದೆಯೇ ಮಹಿಳೆಯನ್ನು ಅಡ್ಮಿಟ್ ಮಾಡಲಾಗಿತ್ತು, ನಾರ್ಮಲ್ ಡಿಲೇವರಿ ಆಗುತ್ತೆ ಅಂತಾ ವೈದ್ಯರು ಹೇಳಿದ್ರು,ಆದ್ರೆ ಇವತ್ತು ಬೆಳಗ್ಗೆ ಸೀಜರೀನ್ ಮಾಡುವಾಗ,ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ನಮಗೆ ನ್ಯಾಯ ಬೇಕು,ಎಂದು ಮಹಿಳೆಯ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ,ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿ ಅಮಲನ್ ಆದಿತ್ಯ ಬಿಸ್ವಾಸ್ ಅವರ ವರ್ಗಾವಣೆಯಾದ ವಾರದಲ್ಲೇ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ವ್ಯವಸ್ಥೆ ಹಳ್ಳ ಹಿಡಿದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ