ಬೆಳಗಾವಿ -ಹಲವಾರು ವರ್ಷಗಳಿಂದ ಕರವೇ ಕಾರ್ಯಕರ್ತರಾಗಿ ನಾಡುನುಡಿ ಹಿತಕ್ಕಾಗಿ ಕನ್ನಡ ನೆಲ,ಜಲ,ಭಾಷೆಯ ರಕ್ಷಣೆಗಾಗಿ ಹೋರಾಟ ಮಾಡುವದರ ಜೊತೆಗೆ ಸಮಾಜ ಸೇವೆಯಲ್ಲೂ ಸಕ್ರೀಯವಾಗಿರುವ ಭೂಪಾಲ ಅತ್ತು ಅವರನ್ನು ಬೆಳಗಾವಿ ಮಹಾನಗರದ ಕರವೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬೆಳಗಾವಿ ಜಿಲ್ಲಾ ಕರವೇ ಅಧ್ಯಕ್ಷ ದೀಪಕ ಗುಡಗನಟ್ಟಿ ಅವರು ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಕರವೇ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ನೇಮಕದ ಆದೇಶ ಪ್ರತಿಯನ್ನು ಹಸ್ತಾಂತರಿಸಿ ಬೆಳಗಾವಿ ಮಹಾನಗರದ ವ್ಯಾಪ್ತಿಯಲ್ಲಿ ಕರವೇ ಸಂಘಟನೆಯನ್ನು ಬಲಪಡಿಸುವಂತೆ ಸೂಚನೆ ನೀಡಿದರು.
ಕರವೇ ಮುಖಂಡರಾದ ಸುರೇಶ್ ಗವಣ್ಣವರ ,ಬಾಳು ಜಡಗಿ ಗಣೇಶ್ ರೋಕಡೆ, ಹೊಳೆಪ್ಪಾ ಸುಲದಾಳ ದಶರಥ ಬನೋಶಿ ಬೆಳಗಾವಿ ಜಿಲ್ಲೆಯ ಕರವೇ ಸೇನಾನಿಗಳು ಉಪಸ್ಥಿತರಿದ್ದರು.