ಬೆಳಗಾವಿ- ಬೆಳಗಾವಿಯ ಭೂತರಾಮಟ್ಟಿಯಲ್ಲಿರುವ ಅರಣ್ಯ ಇಲಾಖೆಯ ಪಾರ್ಕ್ ನಲ್ಲಿ ಟೈಗರ್ ಸಫಾರಿ ಆರಂಭವಾಗುವದು ನಿಶ್ಚಿತವಾಗಿದೆ
ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಬೆಳಗಾವಿ ಮಹಾನಗರ ಪಾಲಿಕೆ ಭೂತರಾಮಟ್ಟಿಯ ಪಾರ್ಕ ಅಭಿವೃದ್ಧಿ ಪಡಿಸಿ ಅಲ್ಲಿ ಡೈಗರ್ ಸಫಾರಿ ಆರಂಭಿಸಲು ಪಾಲಿಕೆ ನಿರ್ಧರಿಸಿದೆ
ಭೂತರಾಮಟ್ಟಿಯ ಪ್ರಾಣಿ ಸಂಗ್ರಹಾಲಯ ದ ಅಭಿವೃದ್ಧಿಗಾಗಿ ಮೂರನೇ ಕಂತಿನ 100 ಕೋಟಿ ಅನುದಾನದಲ್ಲಿ ಎರಡು ಕೋಟಿ ರೂ ಅನುದಾನ ಮೀಸಲಿಟ್ಟಿದ್ದು ಈ ಅನುದಾನ ಟೈಗರ್ ಸಫಾರಿ ಆರಂಬಿಸಲು ಬಳಕೆಯಾಗಲಿದೆ
ಪಾಲಿಕೆ ಆಯುಕ್ತ ಶಶಿಧರ ಕುರೇರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಭೂತರಾಮಟ್ಟಿಯ ಪಾರ್ಕ್ ಗೆ ಭೇಟಿ ನೀಡಿ ಪರಶೀಲಿಸಿದರು ಭೂತರಾಮಟ್ಟಿಯ ಪಾರ್ಕ ಐದು ಸಾವಿರ ಎಕರೆ ವಿಶಾಲ ಪ್ರದೇಶ ಹೊಂದಿದ್ದು ಈ ಪ್ರದೇಶದ ಸುತ್ತಲು ಅಂದಾಜು 1.8 ಕಿ ಮೀ ಕಂಪೌಡ ಗೋಡೆ ನಿರ್ಮಿಸಬೇಕು ಕಂಪೌಂಡ್ ಗೋಡೆಯ ಎತ್ತರ ಎಂಟು ಅಡಿ ಇರಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲಿಕೆ ಆಯುಕ್ತರಿಗೆ ತಿಳಿಸಿದರು
ಅರಣ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದ ಪಾಲಿಕೆ ಆಯುಕ್ತರು ಪ್ರಾಣಿ ಸಂಗ್ರಹಾಲಯ ದ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ಇದೆ ಈ ಅನುದಾನದಲ್ಲಿ ಕಂಪೌಂಡ್ ಗೋಡೆ ನಿರ್ಮಿಸುತ್ತೇವೆ ನಂತರ ಪಾರ್ಕಿನಲ್ಲಿ ರುವ ಕೆರೆ ಅಭಿವೃದ್ಧಿ ಪಡಿಸುತ್ತೇವೆ ಟೈಗರ್ ಸಫಾರಿಗೆ ಅಗತ್ಯವಿರುವ ಸವಲತ್ತುಗಳನ್ನು ಕಲ್ಪಿಸಿಕೊಡುತ್ತೇವೆ ಅರಣ್ಯ ಇಲಾಖೆ ಕೂಡಲೇ ಜ್ಯು ಡೆವಲಪ್ಮೆಂಟ್ ಅಥಾರ್ಟಿಗೆ ಸಂಪರ್ಕಿಸಿ ಟೈಗರ್ ಸಫಾರಿಯ ಕಾಮಗಾರಿ ಆರಂಭಿಸಬೇಕು ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು
ಭೂತರಾಮಟ್ಟಿಯ ಪಾರ್ಕ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ವಿಶಾಲವಾದ ಪಾರ್ಕ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಆಯುಕ್ತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭರವಸೆ ನೀಡಿದ್ರು
ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಭೂತರಾಮಟ್ಟಿಯ ಪಾರ್ಕ್ ನಲ್ಲಿ ಎಂಟು ರೆಸಾರ್ಟ್ ಗಳನ್ನು ನಿರ್ಮಿದಲಾಗಿದ್ದು ಇನ್ನೆರಡು ತಿಂಗಳಲ್ಲಿ ರೆಸಾರ್ಟ್ ಗಳು ಆರಂಭವಾಗಲಿವೆ ಎನ್ನುವ ಮಾಹಿತಿಯನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಿದರು
ಪಾಲಿಕೆಯ ಮುಖ್ಯ ಇಂಜನೀಯರ್ ಆರ್ ಎಸ್ ನಾಯಕ ಸೇರದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು
ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಮಹತ್ವದ ಯೋಜನೆ ಇದಾಗಿದ್ದು ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಭೂತರಾಮಟ್ಟಿ ಪಾರ್ಕ್ ಪಿಕ್ ನಿಕ್ ಪಾಯಿಂಟ್ ಆಗೋದ್ರಲ್ಲಿ ಸಂದೇಹವೇ ಇಲ್ಲ