Breaking News

ಬೀಟ್ ಕ್ವಾಯಿನ್… ಮಾಯಾಜಾಲದಲ್ಲಿ ಬೆಳಗಾವಿಯ ಶ್ರೀಮಂತರು…..!!!!!

ಬೆಳಗಾವಿ- ಜಪಾನ ಲೈಫ್ ಎಂಬ ಅನಾಮಿಕ ಸಂಸ್ಥೆ ಬೆಳಗಾವಿ ಜಿಲ್ಲೆಯ ಪ್ರಜ್ಞಾವಂತರಿಗೆ ಮರಳು ಮಾಡಿ ಕೋಟ್ಯಾಂತರ ರೂಪಾಯಿಯ ಟೋಪಿ ಹಾಕಿದ ಹಾಗೆ ಈಗ ಬಿಟ್ ಕ್ವಾಯಿನ್ ಎಂಬ ಆನ್ ಲೈನ್ ಕರೆನ್ಸಿ ಉಳ್ಳವರ ತಲೆಕೆಡಿಸಿದೆ

2009 ರ ಜನೇವರಿ ತಿಂಗಳಲ್ಲಿ ಸತೋಷಿ ನಾಕೋಮೋಟೋ ಎಂಬ ವ್ಯೆಕ್ತಿ ಆನ್ ಲೈನ್ ನಲ್ಲಿ ಬಿಟ್ ಕ್ವಾಯಿನ್ ಕರೆನ್ಸಿ ಯನ್ನು ಪರಿಚಯಿಸಿದ ಆಗ ಒಂದು ಬಿಟ್ ಕ್ವಾಯಿನ್ ಬೆಲೆ ಹತ್ತರಿಂದ ಇಪ್ಪತ್ತು ರೂಪಾಯಿ ಇತ್ತು ಆದರೆ ಇವತ್ತು ಒಂದು ಬಿಟ್ ಕ್ವಾಯಿನ ಬೆಲೆ ಬರೊಬ್ಬರಿ ಹನ್ನೆರಡು ಲಕ್ಷ ರೂ ತಲುಪಿದೆ

ಬಿಟ್ ಕ್ವಾಯಿನ್ ಆನ್ ಲೈನ್ ನಲ್ಲಿ ಖರೀಧಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಂತೆ ಬಿಟ್ ಕ್ವಾಯಿನ್ ಬೆಲೆ ಕೂಡ ಗಗನಕ್ಕೇರುತ್ತಿದೆ

ಬಿಟ್ ಕ್ವಾಯಿನ್ ಖರೀಧಿಸಿ ಇದರಲ್ಲಿ ಹಣ ಹೂಡಿದರೆ ಹಣ ದುಪ್ಪಟ್ಟು ಆಗೋದು ಎಂಬ ನಂಬಿಕೆ ಹೂಡಿಕೆದಾರ ರಲ್ಲಿ ಬಂದುಬಿಟ್ಟಿದೆ ಹೀಗಾಗಿ ಜನ ಹಿಂದೆ ಮುಂದೆ ವಿಚಾರಿಸದೇ ಬಿಟ್ ಕ್ವಾಯಿನ್ ಖರೀಧಿಸಲು ಜನ ಮುಗಿಬಿದ್ದಿದ್ದಾರೆ

ಬಿಟ್ ಕ್ವಾಯಿನ್ ಪರಿಚಿಯಿಸಿದ ಸತೋಷಿ ನಾಕೋಮೋಟೋ ಯಾವ ದೇಶದ ವ್ಯೆಕ್ತಿ? ಬಿಟ್ ಕ್ವಾಯಿನ್ ಖರೀಧಿ ಮಾಡಿ ಹಣ ಹೂಡಿದರೆ ಅದಕ್ಕೆ ಭದ್ರತೆ ಏನು ? ಅನ್ನೋದು ಯಾರಿಗೂ ಗೊತ್ತಿಲ್ಲ ಭಾರತದಲ್ಲಿ ಅನೇಕ ಜನ ನೂರಾರು ಕೋಟಿ ರೂ ಹಣ ಹೂಡಿದ್ದು ಈ ಅನಾಮಿಕ ಬಿಟ್ ಕ್ವಾಯಿನ್ ಖರೀಧಿಸುವ ಹುಚ್ಚು ಈಗ ಬೆಳಗಾವಿಗೂ ವ್ಯಾಪಿಸಿದೆ

ಬಿಟ್ ಕ್ವಾಯಿನ್ ಬೆಲೆ ಈಗ ಸಸ್ಯಕ್ಕೆ ಹನ್ನೆರಡು ಲಕ್ಷ ಇದರ ಬೆಲೆ ಇನ್ನೊಂದು ವರ್ಷದಲ್ಲಿ ಇಪ್ಪತ್ತರಿಂದ ಮೂವತ್ತು ಲಕ್ಷ ಆಗಲಿದೆ ಎಂದು ಈ ಬಿಟ್ ಕ್ವಾಯಿನ್ ಸಂಸ್ಥೆಯವರು ಆನ್ ಲೈನ್ ನಲ್ಲಿ ವ್ಯೆವಸ್ಥಿತವಾಗಿ ಪ್ರಚಾರ ಮಾಡುತ್ತಿದ್ದಾರೆ

ಒಂದು ಮೂಲದ ಪ್ರಕಾರ ನೂರಾರು ಜನ ಬೆಳಗಾವಿಯ ಕುಬೇರರು ಈ ಬಿಟ್ ಕ್ವಾಯಿನ್ ಖರೀಧಿಸಿ ಕೋಟ್ಯಾಂತರ ರೂ ಹಣ ಹೂಡಿದ್ದಾರೆ ನೆಲೆ ಇಲ್ಲದ ಅನಾಮಿಕ ಆನ್ ಲೈನ್ ಮಾಯಾಜಾಲಕ್ಕೆ ಮೋಸ ಹೋಗುತ್ತಿದ್ದಾರೆ ಯಾವ ರೀತಿ ಜಪಾನ್ ಲೈಫ್ ಎಂಬ ಅನಾಮಿಕ ಸಂಸ್ಥೆ ಬೆಳಗಾವಿ ಜಿಲ್ಲೆಯ ಅಮಾಯಕರಿಗೆ ಟೋಪಿ ಹಾಕಿತೋ ಅದೇ ರೀತಿ ಈ ಬಿಟ್ ಕ್ವಾಯಿನ್ ಹಣ ಹೂಡಿದವರ ಹಾರ್ಟ್ ಬೀಟ್ಸ ಹೆಚ್ಚಿಸಿ ಮಕ್ಮಲ್ ಟೋಪಿ ಹಾಕುವ ದರಲ್ಲಿ ಸಂದೇಹವೇ ಇಲ್ಲ

ಬೆಳಗಾವಿಯ ಹಣವಂತರೆ ಅನಾಮಿಕ ಬಿಟ್ ಕ್ವಾಯಿನ್ ಖರೀಧಿಯಲ್ಲಿ ಹಣ ಹೂಡಬೇಡಿ ನಿಮ್ಮ ಹಣಕ್ಕೆ ಯಾರ ಭದ್ರತೆಯೂ ಇಲ್ಲ ಇದಕ್ಕೆ ಯಾರ ಗ್ಯಾರಂಟಿ ಕೂಡಾ ಇಲ್ಲ ಎಚ್ಚರ..ಎಚ್ಚರ..ಎಚ್ಚರ!!!!!

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *