*ಬೆಳಗಾವಿ ಪರಿಷತ್ ಫಲಿತಾಂಶ : ಹೊಸ ದಾಖಲೆಯೊಂದಿಗೆ ತಕ್ಕ ಸಂದೇಶ ರವಾನಿಸಿದ ಮತದಾರ ಪ್ರಭು*
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರ ಪ್ರಭು ತಕ್ಕುದಾದ ನಿರ್ಧಾರ ತೆಗೆದುಕೊಳ್ಳವ ಅಧಿಕಾರ ಪಡೆದಿರುವುದಕ್ಕೆ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ನ ದ್ವಿಸದಸ್ಯ ಸ್ಥಾನಗಳಿಗೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮತದಾರ ನೀಡಿದ ತೀರ್ಪು ಅನೇಕ ಸಂದೇಶಗಳನ್ನು, ನೀಡುವದರ ಜೊತೆಗೆ
ಪ್ರತಿಷ್ಠಿತ ಜಾರಕಿಹೊಳಿ ಕುಟುಂಬದ ನಾಲ್ಕಜನ ಸದಸ್ಯರು ಏಕಕಾಲದಲ್ಲಿ ವಿಧಾನಸೌಧಕ್ಕೆ ತೆರಳಲು ಮತದಾರರು ಅನುಮತಿ ಕಲ್ಪಿಸಿಕೊಟ್ಟಿದ್ದಾರೆ.
ರಮೇಶ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಜೊತೆಗೆ ಇದೀಗ ಲಖನ್ ಜಾರಕಿಹೊಳಿ ಕೂಡ ವಿಧಾನಸೌಧದ ಮೆಟ್ಟಿಲು ತುಳಿಯಲಿದ್ದಾರೆ. ಮೂವರು ವಿಧಾನಸಭೆಯ ಸದಸ್ಯರಾದರೆ ಲಖನ್ ವಿಧಾನ ಪರಿಷತ್ ಪ್ರವೇಶ ಪಡೆಯುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಕೂಡ ಆರಂಭದಲ್ಲಿ ವಿಧಾನ ಪರಿಷತ್ ಮೂಲಕವೇ ವಿಧಾನಸೌಧಕ್ಕೆ ಎಂಟ್ರಿ ಹೊಡೆದ ವಿಧಾನಸಭೆಗೆ ಆಯ್ಕೆಯಾದವರು.
ಬಹುಶಃ ಇಡೀ ದೇಶದಲ್ಲಿ ಬೇರೆಲ್ಲೂ ಈ ರೀತಿ ಏಕಕಾಲಕ್ಕೆ ನಾಲ್ಕು ಜನ ಸಹೋದರರು ಶಾಸಕರಾಗಿ ಅಯ್ಕೆಯಾಗಿರುವುದು. ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಮೂಲಕ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.
ಬೆಳಗಾವಿ ಬಿಜೆಯಯ ಭದ್ರ ಕೋಟೆ. ಮೋದಿ ಅಲೆಯಲ್ಲಿ ಇಲ್ಲಿಯ ಬಹುತೇಕ ಶಾಸಕರು ಹಾಗೂ ಸಂಸದರು ಚುನಾಯಿತರಾದವರು. ಪ್ರಸ್ತುತ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಿ ರಾಜಕಾರಣಿ ಸೋಲು ಅನುಭವಿಸಿದ್ದಾರೆ. ಅಲ್ಲಿ ಹಟ್ಟಿಹೊಳಿ,ಇಲ್ಲಿ ಜಾರಕಿಹೊಳಿ,ಬಿಜೆಪಿಗೆ ನಿಂಬೆ ಹುಳಿ ಎನ್ನುವಂತಾಗಿದೆ ಪರಿಷತ್ತಿನ ಫಲಿತಾಂಶ.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಿಂದೆ ರಾಜಕೀಯ ಪ್ರಾವೀಣ್ಯತೆಯ ಸತೀಶ ಜಾರಕಿಹೊಳಿ ಅವರ ಶ್ರಮ ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರ ನಿರಂತರ ಶ್ರಮ, ತಾಳ್ಮೆ ಪ್ರಮುಖ ಕಾರಣವಾಗಿದೆಯಾದರೂ ಜಾತಿ ಲೆಕ್ಕಾಚಾರ ತಳ್ಳಿ ಹಾಕುವಂತಿಲ್ಲ.
ಏನೇಯಾದರೂ ಪರಿಷತ್ ಫಲಿತಾಂಶ ಕಾಂಗ್ರೆಸ್ ನಲ್ಲಿ ಹೊಸ ಚೈತನ್ಯ ಮೂಡಿಸಿರುವುದಂತೂ ಸತ್ಯ.