ಬೆಳಗಾವಿಯ- ರಾಜಕೀಯ ವಲಯದಲ್ಲಿ ಅಂದುಕೊಂತೆ ಯಾವುದು ನಡೆಯುವುದಿಲ್ಲ ಬಯಸಿದ್ದು ಸಿಗೋದಿಲ್ಲ ಅನ್ನೋದಕ್ಕೆ ಅನೀಲ ಬೆನಕೆ ಅವರೇ ಅದಕ್ಕೆ ಸಾಕ್ಷಿಯಾಗಿದ್ದಾರೆ ಬಿಜೆಪಿಯಲ್ಲಿ ಅನೀಲ ಬೆನಕೆ ಪ್ರಶ್ನೆಗಳಿಗೆ ”ಉತ್ತರ” ಸಿಗದೇ ನಿರುತ್ತರರಾಗಿರುವ ಅನೀಲ ಬೆನಕೆ ಅವರ ಮುಂದಿನ ರಾಜಕೀಯ ನಡೆ ಯಾವ ಕಡೆ ಅನ್ನೋದು ಎಲ್ಲರಲ್ಲಿ ಕುತೂಹಲ ಕೆರಳಿಸಿದೆ
ಅನೀಲ ಬೆನಕೆ ಬಿಜೆಪಿಯ ನಗರಾಧ್ಯಕ್ಷರಾಗಿದ್ದರು ಬಿಜೆಪಿಯಲ್ಲಿ ನಡೆದ ಚದುರಂಗದ ಆಟದಲ್ಲಿ ಬೆನಕೆ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡರು ಬೆಳಗಾವಿ ಉತ್ತರದಲ್ಲಿ ಬಿಜೆಪಿ ಟಿಕೆಟ್ ಬೆನಕೆ ಹಾಲಿನಷ್ಟು ಅನೀಲ ಬೆನಕೆಗೆ ಗಟ್ಟಿಯಾಗಿತ್ತು ಅದಕ್ಕಾಗಿ ಅನೀಲ ಬೆನಕೆ ಪೂರ್ವ ತಯಾರಿ ಮಾಡಿಕೊಂಡಿದ್ದರು
ಅನೀಲ ಬೆನಕೆ ಅವರು ಬೆಳಗಾವಿ ಉತ್ತರದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿಂದ ವಂಚಿತರಾಗಿದ್ದ ಅನೀಲ ಬೆನಕೆ ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ತಮ್ಮ ಸಾಮ್ರಾಜ್ಯವನ್ನು ಇನ್ನಷ್ಠು ಬಲಿಷ್ಠಗೊಳಿಸಿದ್ದರು
ಆದರೆ ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ಅನೀಲ ಬೆನಕೆ ಅವರಿಗೆ ಬೆಳಗಾವಿ ಉತ್ತರದಿಂದ ಬಿಜೆಪಿ ಟಿಕೆಟ್ ಸಿಗೋದು ಕಷ್ಟ ಹೀಗಾಗಿ ಅವರು ಪಕ್ಷಾಂತರ ಮಾಡಬಹುದು ಎಂಈಎಸ್ ಸೇರಿಕೊಂಡು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಎಂಈಎಸ್ ನಿಂದಲೇ ಸ್ಪರ್ದೆ ಮಾಡಬಹುದು ಎನ್ನುವ ಚರ್ಚೆಗಳು ಆರಂಭವಾಗಿವೆ
ಬೆಳಗಾವಿ ಉತ್ತರದಿಂದ ಬಿಜೆಪಿ ಟಿಕೆಟ್ ಗಾಗಿ ಬಹಳಷ್ಟು ಜನ ಬಿಜೆಪಿ ನಾಯಕರು ಈಗಿನಿಂದಲೇ ಲಾಭಿ ಆರಂಭಿಸಿದ್ದಾರೆ ಎಂ ಬಿ ಝಿರಲಿ,ಕಿರಣ ಜಾಧವ ರವಿ ಪಾಟೀಲ ವೀರೇಶ ಕಿವಡಸಣ್ಣವರ,ರಾಜು ಟೋಪಣ್ಣವರ ಸೇರಿದಂತೆ ಹಲವಾರು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಆದರೆ ಯಾರಿಗೆ ಟಿಕೆಟ್ ಎನ್ನುವುದು ಬಿಜೆಪಿಯಲ್ಲಿ ಯಕ್ಷ ಪ್ರಶ್ನೆಯಾಗಿದೆ
ಟೆಕೆಟ್ ಗಾಗಿ ಬಿಜೆಪಿಯಲ್ಲಿ ದಶಕದ ಹೋರಾಟ ಮಾಡಿ ಟಿಕೆಟ್ ಪಡೆಯುವಲ್ಲಿ ಅನೀಲ ಬೆನಕೆ ವಿಫಲರಾಗಿದ್ದು ಬಿಜೆಪಿಯಲ್ಲಿ ಇದ್ದುಕೊಂಡೇ ಅವರು ಹೋರಾಟ ಮುಂದುವರೆಸುತ್ತಾರೆಯೋ ಅಥವಾ ಎಂಈಎಸ್ ಗೆ ಪಕ್ಷಾಂತರ ಮಾಡುತ್ತಾರೆಯೋ ಅನ್ನೋದನ್ನು ಕಾಯ್ದುನೋಡಬೇಕಾಗಿದೆ