Breaking News
Home / Breaking News / ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿ ಆಕಳ ಕರುಗೆ ಗಾಯ

ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿ ಆಕಳ ಕರುಗೆ ಗಾಯ

ಬೆಳಗಾವಿ- ಆಕಸ್ಮಿಕವಾಗಿ ಮೂರು ಹುಲ್ಲಿನ ಬನವೆಗಳು ಬೆಂಕಿಗಾಹುತಿಯಾಗಿ ಆಕಳ ಕರುವೊಂದು ಬೆಂಕಿಯ ಝಳಕ್ಕೆ ಗಾಯಗೊಂಡಿದೆ

ಆಕಸ್ಮಿಕ ಅಗ್ನಿ ಅವಘಟದಿಂದ ಮೂರು ಹುಲ್ಲಿನ ಬನವೆಗಳು ಸುಟ್ಟು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಹೊರವಲಯದಲ್ಲಿ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತ ತಪ್ಪಿದೆ.

ಗದ್ದಿಕರವಿನಕೊಪ್ಪ ಗ್ರಾಮದ
ಶಿವಪ್ಪ ಮುಂಡೊಳಿ ಹಾಗೂ ವೀರಭದ್ರ ಮುಂಡೊಳಿ ಗೆ ಸೇರಿದ ಬನವೆಗಳು ಎಂದು ತಿಳಿದು ಬಂದಿದೆ.ಇನ್ನು ಬನವೆ ಪಕ್ಕದಲ್ಲಿ ಕಟ್ಟಿದ್ದ ಜಾನುವಾರುಗಳನ್ನು ಬಿಚ್ಚಿ ರಕ್ಷಿಸಿದ ಸ್ಥಳೀಯರು ಮುಂದಾದರೂ ಒಂದು ಆಕಳ ಕರು ಸಣ್ಣ ಪ್ರಮಾಣದ ಸುಟ್ಟು ಗಾಯವಾಗಿದೆ. ವಿಷಯ ತಿಳಿದ ತಕ್ಷಣವಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸದಲ್ಲಿ ಕಾರ್ಯ ನಿರತರಾದರು.ಇನ್ನು ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ..

Check Also

Banking & SSC Competitive Exam Coaching New Batch*

*Banking & SSC Competitive Exam Coaching New Batch* IBPS (Institute for Banking personal selection) has …

Leave a Reply

Your email address will not be published. Required fields are marked *