ಬೆಳಗಾವಿ- ಬೆಳಗಾವಿ ನಗರದ ಬಿ ಕೆ ಮಾಡೆಲ್ ಹೈಸ್ಕೂಲಿನ ಎಂಟನೇಯ ತರಗತಿಯ ವಿಧ್ಯಾರ್ಥಿಯೊಬ್ಬ ಶಾಲೆ ಬಿಟ್ಟ ನಂತರ ನಿಗೂಢವಾಗಿ ಸಾವನ್ನೊಪ್ಪಿದ್ದು ಆತನ ಶವ ಶಾಲೆಯ ಆವರಣದಲ್ಲಿ ಸಂಜೆ ಆರು ಘಂಟೆಗೆ ಪತ್ತೆಯಾಗಿದೆ
ಬಿ ಕೆ ಮಾಡೆಲ್ ಹೈಸ್ಕೂಲಿನ ವಿಧ್ಯಾರ್ಥಿ ಪ್ರಶಾಂತ ಹುಲಮನಿ ಎಂಬ ವಿಧ್ಯಾರ್ಥಿ ಮೃತ ಪಟ್ಟಿದ್ದಾನೆ ಶಾಲೆ ಬಿಟ್ಟ ನಂತರ ಸಂಜೆ ಆರು ಘಂಟೆಗೆ ಈತ ಶಾಲೆಯ ಮೈದಾನದಲ್ಲಿ ಬಿದ್ದಿರುವದನ್ನು ಗಮನಿಸಿರುವ ಕೆಲವರು ಆತನನ್ನು ಕಾಂಟೋನ್ಮೆಂಟ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿರುವದಾಗಿ ವೈದ್ಯರು ಖಚಿತ ಪಡಿಸಿದ್ದಾರೆ
ವಿಧ್ಯಾರ್ಥಿಗಳ ನಡುವೆ ನಡೆದ ಬಡೆದಾಟಕ್ಕೆ ಈತ ಬಲಿಯಾದನೋ ಅಥವಾ ಅನಾರೋಗ್ಯದಿಂದ ಆಕಸ್ಮಿಕವಾಗಿ ಮೃತಪಟ್ಟನೋ ಅನ್ನೋದರ ಬಗ್ಗೆ ಪೋಲಿಸರು ತನಿಖೆ ನಡೆಸಿದ್ದಾರೆ