ಸಣ್ಣಪುಟ್ಟ ಜಗಳದಲ್ಲಿ ಚಿಕ್ಕ,ಚಿಕ್ಕ ಮಕ್ಕಳು ಚಾಕು, ಚೂರಿ, ತಲವಾರ್ ಗಳಿಂದ ವಾರ್, ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಲವಾರ್ ಗಳಿಂದ ವಾರ್ ಮಾಡುವದು ಬೆಳಗಾವಿಯಲ್ಲಿ ಫ್ಯಾಶನ್ ಆಗಿದೆ. ಇದಕ್ಕೆ ಲಗಾಮು ಹಾಕಲು ಪೋಲೀಸರು ಆಪರೇಷನ್ ತಲವಾರ್ ಕಾರ್ಯಾಚರಣೆ ನಡೆಸಿ ತಲವಾರ್ ಚಾಕು,ಚೂರಿ ಹಾವಳಿಗೆ ಬ್ರೇಕ್ ಹಾಕುವುದು ಅಗತ್ಯವಾಗಿದೆ.
ಬೆಳಗಾವಿ-ಇಲ್ಲಿನ ಖಡೇಬಜಾರ್‌ನಲ್ಲಿ ಕವಡಿಪೀರ್ ಮೆರವಣಿಗೆ ವೇಳೆ ಸೌಂಡ್‌ಬಾಕ್ಸ್ ಹಚ್ಚಿ ಡ್ಯಾನ್ಸ್ ಮಾಡುತ್ತಿದ್ದವೇಳೆ ಕಾಲು ತಾಗಿದ್ದರಿಂದ ಬಾಲಕನೋರ್ವನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಿದ್ದಾರೆ.
ನ್ಯೂ ಗಾಂಧಿ ನಗರದ ನಿವಾಸಿ ರೆಹಾನ್ ಅಸ್ಲಮ್ ಮುಜಾವರ ಹಲ್ಲೆಗೊಳಗಾದ ಬಾಲಕ. ಮೆರವಣಿಗೆ ವೇಳೆ ಕಾಲು ತಾಗಿದ್ದರಿಂದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಕಸಾಯಿ ಗಲ್ಲಿಯಲ್ಲಿ ರೆಹಾನ್ ಮೇಲೆ ತಲ್ವಾರದಿಂದ ಹಲ್ಲೆ ನಡೆಸಿದರು. ಆತನ ತಲೆ, ಬೆನ್ನಿಗೆ ಹೊಡೆದು ಕೊಲೆಗೆ ಯತ್ನಿಸಿದ್ದರು. ಈ ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೊಳಗಾದ ಮೂವರು ಬಾಲಕರನ್ನುಬಂಧಿಸಿ, ಬಾಲ ನ್ಯಾಯಮಂಡಳಿ ಅಧ್ಯಕ್ಷರ ಎದುರು ಹಾಜರುಪಡಿಸಲಾಗಿದೆ.
ಗಾಯಗೊಂಡ ಬಾಲಕನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಡಿಸಿಪಿ ನಾರಾಯಣ ಬರಮನಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.