ಬೆಳಗಾವಿ- ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಇತ್ತೀಚಿಗೆ ಬೆಳಗಾವಿಯ ಬಟ್ಟೆ ಅಂಗಡಿಯಲ್ಲಿ ಸೀರೆ ಕದ್ದು ಪರಾರಿಯಾಗಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ.
ಬೆಳಗಾವಿಯ ಖಡೇಬಝಾರ್ ನಲ್ಲಿರುವ ವಿರೂಪಾಕ್ಷ ಬಟ್ಟೆ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರು ಸುಮಾರು ಎರಡು ಲಕ್ಷ ರೂ ಬೆಲೆಬಾಳುವ ಕಾಂಚಿವರಂ ಸೀರೆಗಳನ್ನು ಕದ್ದು ಪರಾರಿಯಾಗಿದ್ದರು.
ಖಡೇಬಝಾರ್ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ,ಆಂದ್ರ ಪ್ರದೇಶದ ಗುಂಟೂರಿನ ಕಳ್ಳರ ಗ್ಯಾಂಗ್ ಪತ್ತೆ ಮಾಡಿ ಮಹಾರಾಷ್ಟ್ರದ ಶಿರಡಿಯಲ್ಲಿ ಈ ಗ್ಯಾಂಗ್ ಅರೆಸ್ಟ್ ಮಾಡಿ ಬೆಳಗಾವಿಗೆ ತಂದಿದ್ದಾರೆ.
ಸೀರೆ ದೋಚಿದ್ದ ಆರು ಜನ ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬೆಳಗಾವಿಯ ಖಡೇಬಝಾರ್ ಪೋಲೀಸರು ಅರೆಸ್ಟ್ ಮಾಡಿದ್ದು ಕಳ್ಳತನದ ಈ ಪ್ರಕರಣವನ್ನು ಅಲ್ಪಾವಧಿ ಯಲ್ಲಿ ಭೇದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ