Breaking News

ಅಂತರಂಗದ ಸೌಂದರ್ಯಕ್ಕೆ ಸೋತು ಒಂದಾದ ಮನಸ್ಸುಗಳು

ಅಂಧರಿಗಾಗಿ ವಧು ವರರ ಸಮ್ಮೇಳನ.

ಬೆಳಗಾವಿ- ಹೊರಜಗತ್ತನ್ನು ಕಣ್ಣಾರೆ ಕಾಣುವವರು ತಮ್ಮ ಬಾಳಸಂಗಾತಿಯ ಚೆಲ್ವಿಕೆಗೆ ಒಪ್ಪಿ‌ ಮದುವೆಯಾಗುವುದು ಸಾಮಾನ್ಯ. ಆದರೆ, ಹೊರಜಗತ್ತಿನ್ನು ಕಣ್ತೆಗೆದು ನೋಡುಭಾಗ್ಯ ಕಳೆದುಕೊಂಡವರು ಬಾಳಗೀತೆ ಹಾಡಲು ಸಂಗಾತಿಯ ಆಯ್ಕೆಗೆ ಮುಂದಾದಾಗ ಅವರಿಗೆ ಕಾಣುವುದು ಅಂತರಂಗದ ಚೆಲ್ವಿಕೆ. ಅವರಿಗೆ ಪಾಲಿಗೆ ಅಮೂರ್ತ ರೂಪದ ಆ ಚೆಲ್ವಿಕೆ ಒಪ್ಪಿಗೆ ಮನಸ್ಸುಗಳನ್ನು ಪರಸ್ಪರ ಸಾಕ್ಷಿಗೊಳಿಸಿ ಬಾಳಗೀತೆ ಹಾಡಲು ಮುಂದಾದ ಅಪರೂಪದ ಸಂದರ್ಭ ಸನ್ನಿವೇಶವೊಂದು ಇಂದು ಬೆಳಗಾವಿಯಲ್ಲಿ ನಡೆಯಿತು.

ಬೆಳಗಾವಿ ಜಿಲ್ಲೆಯ ನಾನಾ ಭಾಗದಿಂದ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಕೂಡಿದ ಅಂಧಯುವ ಗಂಡು ಹೆಣ್ಣು ಜೋಡಿಗಳು ತಮ್ಮ ಅಂತರಂಗದ ಅಂದಕ್ಕೆ‌ಮನಸೋತು‌ ಬಾಳಲ್ಲಿ ಒಂದಾಗಿ ಬದುಕುಲು ಹಿರಿಯರ ಸ್ನೇಹಿತರ ಸಮ್ಮುಖದಲ್ಲಿ ಒಪ್ಪಿಗೆ ಸೋಚಿಸಿದ್ದಾರೆ.

ಕೈಕಾಲು ಕಳೆದುಕೊಂಡವರು ಮದುವೆಯಾಗಲು ಮುಂದಾಬಹುದು. ಆದರೆ, ಕಣ್ಣು ಕಳೆದುಕೊಂಡವರು ಬದುಕು ಕಳೆದುಕೊಂಡ ನಿರಾಶಾಭಾವ ಆವರಿಸಿರುತ್ತದೆ. ಆ ಭಾವವನ್ನು ಸರಿಸಿ ಜೀವನದ ಉದ್ದಕ್ಕೂ ಬಾಳಸಂಗಾತಿಯನ್ನು ಅವಲಂಬಿಸಿ ಬದುಕಿನ ಸೌಂದರ್ಯ ಅನುಭವಿಸುವ ಅವಕಾಶ ಇಲ್ಲಿ ಕಲ್ಪಿಸಿಕೊಡಲಾಗಿತ್ತು.

ಸಮನ್ವಯ ಅಂಧರ ಸಂಸ್ಥೆಯಿಂದ ಗುರುಶಾಂತ ವಧು ವರರ ಸಮ್ಮೇಳನ ಈ ವ್ಯವಸ್ಥೆಯನ್ನು ಮಾಡಿತ್ತು.ನಗರದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ನಡೆದ ಸಮ್ಮೇಳನದಲ್ಲಿ ಮನಸ್ಸುಗಳು ಒಂದಾಗುವ ವಿಶಿಷ್ಠವಾದ ಸನ್ನಿವೇಶ ನಿರ್ಮಾಣವಾಗಿತ್ತು.

ಸಮ್ಮೇಳನದಲ್ಲಿ ಹುಕ್ಕೇರಿ ಮಠದ ಶ್ರೀಚಂದ್ರಶೇಖರ ಸ್ವಾಮೀಜಿಯವರು ಸಾನಿಧ್ಯ ಕಾರಣವಾಗಿತ್ತು. ಹೃದಯವಂತ ಚಲನಚಿತ್ರ ನಟ ರವಿಶಂಕರ್ ಅಪರೂಪದ ಈ ಗಂಡು ಹೆಣ್ಣಿನ ಈ ಸಮ್ಮೇಳನಕ್ಕೆ ಚಾಲನೆ ನೀಡಿದರು. ಮಾಜಿ ಮಹಾಪೌರ ಮಾನವೀಯ ಮಿಡಿತದ ವಿಜಯ ಮೋರೆ ಇದಕ್ಕೆ ಸಾಕ್ಷಿಯಾಗಿದ್ದರು. ರಾಧಾಕೃಷ್ಣ ಪಲ್ಲಕ್ಕಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡ ಅಂಧ ಯುವ ಜೋಡಿಯ ಬದುಕಿನಲ್ಲಿ ಚೆಲ್ವಿಕೆ ಬೆಳಕು ಮೂಡಿದ್ದು ಅವರ ಅರಳಿದ ಮುಖಕಮಲಗಳು ಕನ್ನಡಿಯಾಗಿದ್ದವು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *