Breaking News

ಕುಂಭಮೇಳದಲ್ಲಿ ಕಾಲ್ತುಳಿತ ಬೆಳಗಾವಿಯ ಮೂವರ ಬಲಿ

ಬೆಳಗಾವಿ-ಕುಂಭಮೇಳದಲ್ಲಿ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ-ಮಗಳು ಸೇರಿದಂತೆ ಒಟ್ಟು ಮೂವರು ಜನ ಮೃತಪಟ್ಟಿದ್ದಾರೆ.ಕಾಲ್ತುಳಿತದ ಬಳಿಕ ಇಂದು‌‌ ಬೆಳಗ್ಗೆ ಪ್ರಯಾಗ್‌ರಾಜ್‌ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮತ್ತು ಮಗಳು,
ಚಿಕಿತ್ಸೆ ಫಲಕಾರಿ ಆಗದೇ ಸಾವನ್ನೊಪ್ಪಿದ್ದಾರೆ.

ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50)ಮೇಘಾಹತ್ತರವಾಠ್‌(25)ಮೃತಪಟ್ಟಿದ್ದಾರೆ.ಚಿದಂಬರ್ ಎಂಬುವವರು ಅವರ ಜೊತೆಗೆ ಇರುವವರಿಂದ ಮಾಹಿತಿ ಸಿಕ್ಕಿದೆ.ಈ ವರೆಗೂ ಸಂಪರ್ಕಕ್ಕೆ ಬಂದಿರಲಿಲ್ಲ.
ಮೃತಪಟ್ಟಿದ್ದಾರೆ ಅಂತಾ ಅವರ ಜೊತೆಗೆ ಇದ್ದ ಚಿದಂಬರ ತಿಳಿಸಿದ್ದಾರೆ.ಸಾವು ಖಚಿತ ಪಡಿಸಿದ ಮೇಘಾ ಅವರ ತಂದೆ ದೀಪಕ್ ಹತ್ತರವಾಠ ಮಾಹಿತಿ ನೀಡಿದ್ದಾರೆ.

*ಬೆಳಗಾವಿಯ ಮತ್ತೋರ್ವ ನಿವಾಸಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ.ಬೆಳಗಾವಿ ನಗರದ ಶೆಟ್ಟಿ ಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಮೃತಪಟ್ಟಿದ್ದಾರೆ.
ಹೆಂಡತಿ ಕಾಂಚನಾ ಕೋಪರ್ಡೆಗೆ ಗಂಭೀರವಾಗಿ ಗಾಯ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ತಂದೆ ಸಂಪರ್ಕಕ್ಕೆ ಸಿಗದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಮಗ ಓಂಕಾರ್.ಈ ವರೆಗೂ ಬೆಳಗಾವಿ ನಗರದ ಮೂರು ಜನ ಪ್ರಯಾಗ್‌ರಾಜ್ ನಲ್ಲಿ ಸಾವನ್ಬೊಪ್ಪಿದ್ದಾರೆ.

Check Also

ಇಂದು ಶ್ರೀ ರೇಣುಕಾ ಯಲ್ಲಮ್ಮದೇವಿ ದರ್ಶನ,ನಾಳೆ ಬೆಳಗಾವಿ ದರ್ಶನ….!!!

ಬೆಳಗಾವಿ – ಮಾಜಿ ಸಚಿವ ಹಾಲಿ ವಿಧಾನಪರಿಷತ್ತ್ ಸದಸ್ಯ ಸಿಟಿ ರವಿ ಇಂದು ಸಂಜೆ ಸವದತ್ತಿ ಯಲ್ಲಮ್ಮದೇವಿಯ ದರ್ಶನ ಪಡೆದು …

Leave a Reply

Your email address will not be published. Required fields are marked *