Breaking News

ಪೊಲೀಸರಿಗೆ ಡಿಫೇನ್ಸ್ ಮಾದರಿಯಲ್ಲಿ ತರಬೇತಿ-ಸಚಿವ ಬೊಮ್ಮಾಯಿ

ಬೆಳಗಾವಿ-ರಾಜ್ಯದಲ್ಲಿ ಪೊಲೀಸರಿಗೆ ಎನ್ ಡಿ ಎ ಮಾದರಿಯಲ್ಲಿ ತರಬೇತಿ.ಸೈನ್ಯದ ಉನ್ನತ ಮಟ್ಟದ ತರಬೇತಿ ನೀಡಬೇಕು ಎನ್ನುವುದು ನಮ್ಮ ಉದ್ದೇಶ.ಇದಕ್ಕಾಗಿ ತರಬೇತಿ ಶಾಲೆ ಮಾಡಲು ಯೋಗ್ಯ ಸ್ಥಳ ಬೆಳಗಾವಿ ಯೋಗ್ಯವಾಗಿದೆ.ಬೆಳಗಾವಿ ಇರೋ ಸಂಪನ್ಮೂಲ ಉಪಯೋಗ ಮಾಡಿ ತರಬೇತಿ ಶಾಲೆ ಆರಂಭಿಸುತ್ತೇವೆ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಒಂದು ಸಭೆಯನ್ನು ಸ್ಥಳೀಯ ಮಟ್ಟದ ಅಧಿಕಾರ ಜತೆಗೆ ಮಾಡುತ್ತೇನೆ. ನಂತರ ಕೇಂದ್ರ ರಕ್ಷಣಾ ಸಚಿವ ಸಹಾಯ ಪಡೆದು ತರಬೇತಿ ಶಾಲೆ ಶುರು ಮಾಡುತ್ತೇವೆ. ಮುಖ್ಯಮಂತ್ರಿಗಳ ಮೂಲಕ ರಕ್ಷಣಾ ಸಚಿವ ಜೊತೆಗೆ ಚರ್ಚೆ ಮಾಡುತ್ತೇವೆ. ಮುಂದಿನ ಒಂದು ವರ್ಷದಲ್ಲಿ ತರಬೇತಿ ಶಾಲೆ ಆರಂಭ ಮಾಡುವ ಗುರಿ ಇದೆ. ರಾಜ್ಯದಲ್ಲಿ ಒಂದೇ ತರಬೇತಿ ಶಾಲೆ ಇರಲಿದೆ ಎಂದರು.

ರಾಜ್ಯದಲ್ಲಿ ಕಾಲಕಾಲಕ್ಕೆ ಶಸ್ತ್ರಾಸ್ತ್ರ ಬದಲಾವಣೆ ಆಗಿದೆ. ರಾಜ್ಯ ಅಪರಾಧ ಪ್ರಕರಣಗಳ ಮುಗಿಸೋಕೆ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕಾಗಿ ಇಲಾಖೆಯಲ್ಲಿ ಎಲ್ಲಾ ರೀತಿಯಲ್ಲಿ ‌ಪ್ರಯತ್ನ ನಡೆದಿದೆ. 17 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ನಗರ ಪೊಲೀಸರ ಆಯುಕ್ತ ಕಚೇರಿ. ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವ ಗುರಿ ಇದೆ.

ರಾಜ್ಯದಲ್ಲಿ ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ಪ್ರಕ್ರಿಯೆ ಆರಂಭ ಆಗಿದೆ ಸಿಎಂ ಅನುಮತಿ ಪಡೆದು ರಾಜ್ಯಪಾಲರ ಅನುಮತಿ ಕಳುಹಿಸುತ್ತೇ‌‌‌ನೆ.
ರಾಜ್ಯದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಬದಲಾವಣೆ ಇಲ್ಲ. ಯಡಿಯೂರಪ್ಪ ಅವಧಿಯನ್ನು ಪೂರ್ಣಗೊಳಿಲಿದ್ದಾರೆ. ಸದೃಢ, ಸಮರ್ಥ ಆಡಳಿತವನ್ನು ಬಿ ಎಸ್ ವೈ ನೀಡಲಿದ್ದಾರೆ.ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದರು.

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *