ಬೆಳಗಾವಿ- ನಿನ್ನೆ ಮದ್ಯರಾತ್ರಿ ಬೆಳಗಾವಿಯ ವಡಗಾವಿ ಪ್ರದೇಶದ ಲಕ್ಷ್ಮೀ ನಗರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪಾನ್ ಅಂಗಡಿ ಮಾಲೀಕನ ಕೊಲೆಯಾದ ಅಂಶ ಬೆಳಕಿಗೆ ಬಂದಿದೆ.
ಕಳೆದ 25 ವರ್ಷಗಳಿಂದ ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಪಾನ್ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದ ಬಾಳಕೃಷ್ಣ ಶೆಟ್ಟಿ ಎಂಬಾತನನ್ನ ಕ್ಷುಲ್ಲಕ ಕಾರಣಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವಡಗಾವಿ ಪ್ರದೇಶದ ದತ್ತಾ ಜತ್ತಿನಕಟ್ಟಿ, ಎಂಬಾತ ದಿನನಿತ್ಯ ರಾತ್ರಿ ಹೊತ್ತ ಬಾಳಕೃಷ್ಣನ ಅಂಗಡಿಗೆ ಬಂದು ಗುಟಕಾ ಸಿಗರೇಟ್ ಉದ್ರಿ ಕೊಡುವಂತೆ ಪೀಡಿಸುತ್ತಿದ್ದ,ಉದ್ರಿ ಕೊಡದ ಕಾರಣ ಬಾಳಕೃಷ್ಣ ಶೆಟ್ಟಿಯ ಜೊತೆ ಜಗಳಾಡುತ್ತಿದ್ದ,ಆದ್ರೆ ನಿನ್ನೆ ರಾತ್ರಿ ಇದೇ ದತ್ತಾ ಜತ್ತಿನಕಟ್ಟಿ ಹೊಸ ಕ್ಯಾತೆ ತೆಗೆದ,ನನ್ನ ಮೋಬೈಲ್ ಕಳುವಾಗಿದೆ,ಅದನ್ನು ನೀನೇ ತಗೊಂಡಿದ್ದೀಯಾ ,ಎಂದು ಜಗಳ ತೆಗದ,ಇತನ ಜೊತೆ ಜಗಳಾಡುವದೇ ಬೇಡ ಎಂದು ಬಾಳಕೃಷ್ಣ ಶೆಟ್ಟಿ ಪಾನ್ ಅಂಗಡಿ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದಾನೆ,ಅಷ್ಟಕ್ಕೂ ಸುಮ್ಮನಾಗದ ದತ್ತಾ ಜತ್ತಿನಕಟ್ಟಿ, ಬಾಳಕೃಷ್ಣನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಬಾಳಕೃಷ್ಣನ ಕೊಲೆ ಮಾಡಿದ್ದಾನೆ ಎಂದು ಬಾಳಕೃಷ್ಣನ ಆಪ್ತರು ತಿಳಿಸಿದ್ದಾರೆ.
ಪಾನ್ ಅಂಗಡಿ ಮಾಲೀಕ ಬಾಳಕೃಷ್ಣ ಶೆಟ್ಟಿ ಕೊಲೆ ಮಾಡಿದ ಆರೋಪದ ಮೇಲೆ ದತ್ತಾ ಜತ್ತಿನಕಟ್ಟಿ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ