ಮನೆ ಗೋಡೆ ಕುಸಿದು ಬಿದ್ದು ಯುವಕ ಸಾವು
ಹಾವೇರಿ: ಮನೆ ಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮುಸ್ತಾಕ್ ಯರಗುಪ್ಪಿ(27) ಎಂದು ಗುರುತಿಸಲಾಗಿದೆ. ಮನೆ ಶಿಥಿಲಗೊಂಡಿದ್ದರಿಂದ ಜಿಟಿ ಜಿಟಿ ಮಳೆಗೆ ನೆನೆದು, ಗೋಡೆ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ. ತಡರಾತ್ರಿ ಮನೆ ಕುಸಿದು ಬಿದ್ದು ಮುಸ್ತಾಕ್‍ಗೆ ಗಂಭೀರವಾಗಿ ಗಾಯವಾಗಿತ್ತು.
ತಕ್ಷಣ ಕುಟುಂಬಸ್ಥರು ಸ್ಥಳೀಯರ ಸಹಾಯ ತೆಗೆದುಕೊಂಡು ಮುಸ್ತಾಕ್‍ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುಸ್ತಾಕ್ ಮೃತಪಟ್ಟಿದ್ದಾನೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ