ಅಥಣಿ-ಸಂಕೋನಟ್ಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಮೇಕೆಗಳು ಬಲಿಯಾದ ಘಟನೆ,ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.ಪ್ರದೀಪ್ ನಾಯಿಕ್ ಎಂಬುವರ ತೋಟದಲ್ಲಿದ್ದ ಎರಡು ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ.
ಚಿರತೆ ದಾಳಿಯಿಂದ ಎರಡು ಮೇಕೆ ಮೃತಪಟ್ಟಿದ್ದಾಗಿ ಸ್ಥಳೀಯರ ಮಾಹಿತಿ ನೀಡಿದ್ದು,ಸಂಕೋನಟ್ಟಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ ಘಟನಾ ಸ್ಥಳಕ್ಕೆ ಅರಣ್ಯಸಿಬ್ಬಂದಿ ದೌಡಾಯಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪಕ್ಕದ ರಡ್ಡೇರಟ್ಟಿ ಗ್ರಾಮದಲ್ಲಿ ಇದೇ ಮಾದರಿಯಲ್ಲಿ ಸಾಕು ನಾಯಿ ಬಲಿಯಾಗಿತ್ತು.ಈ ವೇಳೆ ಪತ್ತೆಯಾಗಿದ್ದ ಹೆಜ್ಜೆ ಗುರುತು ಕತ್ತೆ ಕಿರುಬ ಪ್ರಾಣಿಯದ್ದು ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಹೇಳಿದ್ದರು.
ರಡ್ಡೇರಟ್ಟಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಬೋನು ಇರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಪತ್ತೆಗೆ ಜಾಲ ಬೀಸಿದೆ.ಈಗ ಮತ್ತೆ ಪಕ್ಕದ ಸಂಕೋನಟ್ಟಿ ಗ್ರಾಮದಲ್ಲಿ ಎರಡು ಮೇಕೆಗಳು ಬಲಿ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಮೂಡಿದೆ.