Breaking News
Home / Breaking News / ಗ್ಯಾಂಗ್ ರೇಪ್ ಮಾಡಿದ ಆರೋಪಿಗಳು ಅರೆಸ್ಟ್…

ಗ್ಯಾಂಗ್ ರೇಪ್ ಮಾಡಿದ ಆರೋಪಿಗಳು ಅರೆಸ್ಟ್…

ಬೆಳಗಾವಿ-ಗೋಕಾಕ್ ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿದ ಘಟನೆಸೆ.5ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದ್ದ ಘಟನೆ.ಶಿಕ್ಷಕ ದಿನಾಚರಣೆಯಂದು ಹಳ್ಳಿಯಿಂದ ನಗರಕ್ಕೆ ಬಂದಿದ್ದ ಮಹಿಳೆ.ಈ ವೇಳೆ ಪರಿಚಯಸ್ಥ ವ್ಯಕ್ತಿಯ ಜತೆಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ಆರೋಪಿ ಬಸವರಾಜ ಖಿಲಾರಿ ಟೀ ಕುಡಿಯಲು ಬನ್ನಿ ಅಂತಾ ಇಬ್ಬರನ್ನೂ ಮನೆಗೆ ಕರೆದುಕೊಂಡು ಹೋಗಿದ್ದ.ಪುಸಲಾಯಿಸಿ ಆದಿತ್ಯ ನಗರದಲ್ಲಿದ್ದ ಮನೆಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದ ಬಸವರಾಜ.ಬಳಿಕ ತನ್ನ ಪಟಾಲಂನ ಸದಸ್ಯರಿಗೆ ಸುದ್ದಿ ಮುಟ್ಟಿಸಿ, ಹೊರಗಿನಿಂದ ಮನೆಯ ಬಾಗಿಲು ಹಾಕಿಕೊಂಡು ಹೋಗಿದ್ದ ಪಾಪಿ ತಾನು ಮತ್ತು ತನ್ನ ಗೆಳೆಯರನ್ನು ಸೇರಿಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾನೆ.

ಮಧ್ಯಾಹ್ನದ ಸಮಯದಲ್ಲಿ ಮನೆಗೆ ಬಂದಿದ್ದ ಐದು ಜನರ ಗ್ಯಾಂಗ್,ಮಹಿಳೆಯನ್ನ ಬೆದರಿಸಿ ಐದು ಜನರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ.ಸಂಜೆ ವೇಳೆ ಮಹಿಳೆ ಬಳಿ ಇದ್ದ ಹಣ, ಜತೆಗಿದ್ದ ಪುರುಷನ ಬಳಿ ಹಣ, ಎಟಿಎಂ ಕಸಿದುಕೊಂಡಿದ್ದಾರೆ.ಮಹಿಳೆ ಮತ್ತು ಆತನ ಜೊತೆಗಿದ್ದವನನ್ನು ಬಿಟ್ಟು ಕಳಿಸಿದ್ದಾರೆ.

ಇದೇ ವೇಳೆ ಪೊಲೀಸರಿಗೆ ಹೇಳದಂತೆ ಮಹಿಳೆ ಹಾಗೂ ಪುರುಷನಿಗೆ ಜೀವ ಬೆದರಿಕೆ ಹಾಕಿದ್ದ ಗ್ಯಾಂಗ್ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದರು.ಜತೆಗಿದ್ದ ವ್ಯಕ್ತಿ ಜತೆಗೆ ಮಹಿಳೆ ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಧಮಕಿ ಹಾಕಿದ್ದರು.

ಈ ಹಿನ್ನೆಲೆ ಕೇಸ್ ನೀಡಲು ಮಹಿಳೆ ಹೆದರಿ ಸುಮ್ಮನಿದ್ದ‌ ಕಾರಣ ಈ ಘಟನೆ ಬೆಳಕಿಗೆ ಬಂದಿರಲಿಲ್ಲ.ಸೆ.13ರಂದು ಡಕಾಯಿತಿ ಕೇಸ್ ನಲ್ಲಿ ಕೆಲವರನ್ನ ಬಂಧಿಸಿದ್ದ ಪೊಲೀಸರು ಒಣಕೆ ಪ್ರಯೋಗ ಮಾಡಿದ ಸಮಯದಲ್ಲಿ ಗ್ಯಾಂಗ್ ರೇಪ್ ಮಾಡಿದ್ದನ್ನು ಡಕಾಯಿತರು ಬಾಯಿ ಬಿಟ್ಟಿದ್ದಾರೆ. ಮಹಿಳೆಯನ್ನು ರೇಪ್ ಮಾಡಿದ ಗ್ಯಾಂಗ್ ಡಕಾಯತಿ ಮಾಡುವ ಗ್ಯಾಂಗ್ ಆಗಿತ್ತು ಡಕಾಯತಿ ಪ್ರಕರಣದಲ್ಲಿ ಖಾಕಿ ಬಲೆಗೆ ಬಿದ್ದ ಗ್ಯಾಂಗ್ ಮಹಿಳೆಯ ಮೇಲೆ ರೇಪ್ ಮಾಡಿದ ವಿಚಾರವನ್ನು ಪೋಲೀಸರಿಗೆ ಹೇಳಿದ ಬಳಿಕ ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳ.ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಮಹಿಳೆ ಹುಡುಕಿ ಕೇಸ್ ದಾಖಲಿಸಿಕೊಂಡ ಗೋಕಾಕ್ ಪೊಲೀಸರು,ಆರು ಜನರ ವಿರುದ್ಧ ಗ್ಯಾಂಗ್ ರೇಪ್ ಕೇಸ್ ಹಾಕಿದ್ದಾರೆ.ಸಂತ್ರಸ್ತ ಮಹಿಳೆಯಿಂದ ದೂರು ದಾಖಲಿಸಿಕೊಂಡು ತನಿಖೆ‌ ಮಾಡಿದ ಪೋಲೀಸರು

ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಸೇರಿ ಐದು ಜನರ ಬಂಧಿಸಿದ್ದಾರೆ.ಬೆನಚಿಮರಡಿ ಗ್ರಾಮದ ರಮೇಶ್ ಖಿಲಾರಿ, ದುರ್ಗಪ್ಪಾ ವಡ್ಡರ್, ಯಲ್ಲಪ್ಪ ಗಿಸ್ನಿಂಗವ್ವಗೊಳ್, ಕೃಷ್ಣಾ ಪೂಜೇರಿ, ರಾಮಸಿದ್ದ ತಪ್ಸಿ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.ತಲೆ ಮರೆಸಿಕೊಂಡ, ಆರೋಪಿ ಬಸವರಾಜ ಖಿಲಾರಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *