Breaking News

ಬುಡಾ ಕಣಬರ್ಗಿ ವಸತಿ ಯೋಜನೆ ತೊಡಕು ನಿವಾರಣೆಗೆ ಆರು ಕೋಟಿ ಯೋಜನೆ..

ಬೆಳಗಾವಿ- ಕಳೆದ ದಶಕದಿಂದ ಒಂದೂ ವಸತಿ ಯೋಜನೆ ರೂಪಿಸದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಣಬರ್ಗಿ ವಸತಿ ಯೋಜನೆಯಲ್ಲಿ ಅಡ್ಡಿಯಾಗಿರುವ ತೊಡಕುಗಳನ್ನು ನಿವಾರಿಸಲು ಮುಂದಾಗಿದೆ ಫಿಫ್ಟಿ- ಫಿಫ್ಟಿ ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ರೈತರನ್ನು ಮನವೊಲಿಸಲು ಸೂತ್ರವೊಂದನ್ನು ರೂಪಿಸಿದೆ ರೈತರಿಗೆ ಹೆಚ್ಚಿನ ಪ್ರಮಾಣದ ನಿವೇಶನ ದೊರಕಿಸಿಕೊಡಲು ಮತ್ತೇ ಆರು ಕೋಟಿ ರೂ ವೆಚ್ಚದ ಯೋಜನೆ ರೂಪಿಸಿದೆ

ಕಣಬರ್ಗಿ ವಸತಿ ಯೋಜನೆಯಲ್ಲಿ ಶೇ 51 ರಷ್ಟು ವಸತಿ ನಿವೇಶನ ಪಡೆದು ಶೇ 50 ರಷ್ಟು ನಿವೇಶನಗಳನ್ನು ರೈತರಿಗೆ ಕೊಟ್ಟು ಅವರನ್ನು ಮನವೊಲಿಸಲು ಬುಡಾ ಹೊಸ ಪ್ಲ್ಯಾನ ಮಾಡಿಕೊಂಡಿದೆ ಕಣಬರ್ಗಿ ವಸತಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಹೈ ಟೆನಶನ್ ವಿದ್ಯುತ್ತಿನ ತಂತಿಗಳನ್ನು ತೆರವು ಮಾಡಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲು ಆರು ಕೋಟಿ ವೆಚ್ಚದ ಯೋಜನೆ ರೂಪಿಸಿದೆ

ಈ ಕುರಿತು ಇತ್ತೀಚೆಗೆ ಬೆಳಗಾವಿಗೆ ಭೇಟಿ ನೀಡಿರುವ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರೊಂದಿಗೆ ಸಮಾಲೋಚನೆ ಮಾಡಿರುವ ಬುಡಾ ಅಧಿಕಾರಿಗಳು ಈ ಪ್ರಸ್ರಾವನೆಗೆ ಇಂದು ನಡೆಯಲಿರುವ ಬುಡಾ ಸಭೆಯಲ್ಲಿ ಅನುಮೋದನೆ ಪಡೆದು ನಂತರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಈ ಪ್ರಸ್ತಾವನೆಗೆ ಕೂಡಲೇ ಮಂಜೂರಾತಿ ನೀಡುವದಾಗಿ ರೋಷನ್ ಬೇಗ್ ಭರವಸೆ ನೀಡಿದ್ದಾರೆ

ಇಂದು ಹನ್ನೊಂದು ಘಂಟೆಗೆ ಬುಡಾ ಸಭೆ ನಡೆಯಲಿದ್ದು ಬುಡಾ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಜಯರಾಮ ಅವರು ಸಭೆಯನ್ನು ನಡೆಸಿ ನಗರದ ಅಭಿವೃದ್ಧಿ ಕುರಿತು ಹಲವಾರು ಸಮಸ್ಯೆಗಳನ್ನು ಚರ್ಚೆ ಮಾಡಲಿದ್ದಾರೆ ಕಣಬರ್ಗಿ ವಸತಿ ಯೋಜನೆಯ ಕುರಿತು ರೈತರು ಹೈಕೋರ್ಟನಿಂದ ತಡೆಯಾಜ್ಞೆ ತಂದಿದ್ದು ಅದನ್ನು ವಾಪಸ್ ಪಡೆಯಲು ರೈತರು ಮುಂದಾಗಿದ್ದು ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ

30 ರಂದು ಪಾಲಿಕೆಯ ಸಾಮನ್ಯ ಸಭೆ

ಮೇ ಮೂವತ್ತರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದೆ ನೂರು ಕೋಟಿ ಅನುದಾನದ ಕಾಮಗಾರಿಗಳು ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದ ಕುರಿತು ನಗರ ಸೇವಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ

 

 

Check Also

ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ …

Leave a Reply

Your email address will not be published. Required fields are marked *