 ಬೆಳಗಾವಿ- ಬೆಳಗಾವಿಯ ಬುಡಾ ಅಧ್ಯಕ್ಷರನ್ನಾಗಿ ಹಾಲುಮತ ಸಮುದಾಯದ ಮುಖಂಡ ಲಕ್ಷ್ಮಣರಾವ್ ಚಿಂಗಳೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ.
ಬೆಳಗಾವಿ- ಬೆಳಗಾವಿಯ ಬುಡಾ ಅಧ್ಯಕ್ಷರನ್ನಾಗಿ ಹಾಲುಮತ ಸಮುದಾಯದ ಮುಖಂಡ ಲಕ್ಷ್ಮಣರಾವ್ ಚಿಂಗಳೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ.
ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ,ಕುರುಬ ಸಮುದಾಯದ ಹಿರಿಯ ನಾಯಕ ಲಕ್ಷ್ಮಣರಾವ್ ಚಿಂಗಳೆ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಆದೇಶ ಪತ್ರಕ್ಕೆ ಮುಖ್ಯಮಂತ್ರಿ ಸಿದ್ರಾಮಯ್ಯ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದ್ದು ನಾಳೆ ಶನಿವಾರ ಬೆಳಗ್ಗೆ 10-00 ಗಂಟೆಗೆ ಚಿಂಗಳೆ ಅವರು ಬುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬುಡಾ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಫಿರೋಜ್ ಸೇಠ,ರಾಜು ಸೇಠ,ಸುನೀಲ ಹನಮಣ್ಣವರ, ಸುಧೀರ ಗಡ್ಡೆ, ವಿನಯ ನಾವಲಗಟ್ಟಿ, ಅಜೀಂ ಪಟವೇಗಾರ ಅವರ ಹೆಸರು ಕೇಳಿ ಬಂದಿತ್ತು, ಆದ್ರೆ ಕೊನೆಯ ಘಳಿಗೆಯಲ್ಲಿ ಸಿಎಂ ಸಿದ್ರಾಮಯ್ಯ ಅವರ ಪರಮಾಪ್ತ ಲಕ್ಷ್ಮಣರಾವ್ ಚಿಂಗಳೆ ಬಂಪರ್ ಲಾಟರಿ ಹೊಡೆದಿದ್ದಾರೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ