ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಂಡು ಏಳು ತಿಂಗಳು ಗಳು ಗತಿಸಿವೆ ಎರಡನೇಯ ಅವಧಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಸರ್ಕಾರ ಮುಂದಾಗದೇ ಇರುವದರಿಂದ ಅಧ್ಯಕ್ಷ ಸ್ಥಾನ ಖಾಲಿ ಉಳಿದುಕೊಂಡಿದ್ದು ಆಕಾಂಕ್ಷಿಗಳು ಇವತ್ತಿನವರೆಗೂ ಬೆಳಗಾವಿಯಿಂದ ಬೆಂಗಳೂರಿಗೆ ಚಕ್ಕರ್ ಹೊಡೆಯುವ ಪರಿಸ್ಥಿತಿ ಎದುರಾಗಿದೆ
ಕಾಂಗ್ರೆಸ್ ನಾಯಕರ ಕಿತ್ತಾಟ,ಹಗ್ಗ ಜಗ್ಗಾಟದಿಂದಾಗಿ ಬುಡಾ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಿಗೆ ಮರೀಚಿಕೆಯಾಗಿದೆ.ಬುಡಾ ಮಾಜಿ ಅಧ್ಯಕ್ಷ ಯುವರಾಜ ಕದಂ ಇನ್ನೊಂದು ಅವಕಾಶಕ್ಕಾಗಿ ತಮ್ಮ ಪ್ರಯತ್ನ ಮುಂದುವರೆಸಿದ್ಸಾರೆ ಜೊತೆಗೆ ವಿನಯ ನಾವಲಗಟ್ಟಿ,ಯೂಸುಫ್ ಕಚ್ಚಿ ಅವರು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ
ಶಾಸಕ ಫಿರೋಜ್ ಸೇಠ ಯೂಸುಫ್ ಕಚ್ಚಿ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಎಲ್ ಬಿ ಕರಾಳೆ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದು ವಿನಯ ನಾವಲಗಟ್ಟಿ ಅವರು ರಾಜ್ಯದ ನಾಯಕರ ಸಂಪರ್ಕ ಬೆಳೆಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ
ಇವೆಲ್ಲ ರಾಜಕೀಯ ಬೆಳವಣಿಗೆಗಳ ಮದ್ಯ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ಬೆಳಗಾವಿಯ ತಮ್ಮ ಕಟ್ಟಾ ಶಿಷ್ಯ ಸಂಗೊಳ್ಳಿ ಎಂಬಾತನಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದು ಕುಳಿತುಕೊಂಡಿರುವದರಿಂದಲೇ ಬುಡಾ ಅಧ್ಯಕ್ಷ ಸ್ಥಾನ ಖಾಲಿ ಉಳಿದುಕೊಂಡಿದೆ
ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈ ಬಾರಿ ಬುಡಾ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮಾಜಕ್ಕೆ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ ಸರ್ಕಾರಕ್ಕೆ ಇನ್ನು ಕೇವಲ ವರ್ಷ ಬಾಕಿ ಇದೆ ಅಷ್ಟರೊಳಗಾಗಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲಿ ಕಾಂಗ್ರೆಸ್ ನಾಯಕರ ಕಿತ್ತಾಟಕ್ಕೆ ಮುಖ್ಯಮಂತ್ರಿಗಳು ಬ್ರೇಕ್ ಹಾಕಲಿ ಎನ್ನುವದು ಸಾಮಾನ್ಯ ಕಾರ್ಯಕರ್ತರ ಬೇಡಿಕೆಯಾಗಿದೆ