Breaking News
Home / Breaking News / ಕ್ರಾಂತಿವೀರನ ಕಂಚಿನ ಪುತ್ಥಳಿ ಅನಾವರಣ

ಕ್ರಾಂತಿವೀರನ ಕಂಚಿನ ಪುತ್ಥಳಿ ಅನಾವರಣ

ಬೆಳಗಾವಿ-ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ನ‌ ಕಂಚಿನ ಪುತ್ಥಳಿಯನ್ನು ಕುರಬರಹಟ್ಟಿ ಗ್ರಾಮದಲ್ಲಿ ಮಾಜಿ ಮೇಯರ್ ಯಲ್ಲಪ್ಪ ಕುರುಬರ ಅನಾವರಣ ಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು ಅಭಯ ಪಾಟೀಲ ಅವರು, ಅಪ್ರತಿಮ ದೇಶಭಕ್ತ‌ ಸಂಗೋಳ್ಳಿ ರಾಯಣ್ಣ ನ ಸ್ವಾತಂತ್ರ್ಯ ಪ್ರೇಮ, ಶೌರ್ಯ, ಸಾಹಸ, ಆದರ್ಶಗಳು ಇಂದಿನ ಯುವಕರಿಗೆ ದಾರಿ ದೀಪವಾಗಿವೆ.

ಈ ಭಾಗದಲ್ಲಿ‌ ರಾಯಣ್ಣ ಪ್ರತಿಮೆ ಇರಲಿಲ್ಲ. ಅದಕ್ಕಾಗಿ ಈ ಗ್ರಾಮದಲ್ಲಿ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ ಎಂದು ಅಭಯ ಪಾಟೀಲ ಹೇಳಿದರು.

4 ವರ್ಷದ ಹಿಂದೆ ಗ್ರಾಮಸ್ಥರು ಎಲ್ಲರೂ ಸೇರಿ ೭ ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು. ರಾಯಣ್ಣ ಪುತ್ಥಳಿಯನ್ಮು ವಿಭಿನ್ನವಾಗಿರುವ ಸಮರ‌ ಶೈಲಿಯ ಮೂರ್ತಿಯನ್ನು ಬೆಳಗಾವಿಯ ಕಲಾವಿದ ಜೆ.ಜೆ.ಪಾಟೀಲ ನಿರ್ಮಿಸಿದ್ದಾರೆ ಅದನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಅಭಯ ಪಾಟೀಲ ಹೇಳಿದರು.

Check Also

ಬೆಳಗಾವಿಯಲ್ಲಿ FM ರೇಡಿಯೋ ಶುರು ಮಾಡಿ…!!

ಬೆಳಗಾವಿ- ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು …

Leave a Reply

Your email address will not be published. Required fields are marked *