ಬೆಳಗಾವಿ- ಬೆಳಗಾವಿ ನಗರದ ಶಿವಾಜಿ ಉದ್ಯಾನ ಮತ್ತು ಲೆಲೆ ಮೈದಾನದ ಅಭಿವೃದ್ಧಿಗೆ ೫೦ ಲಜ್ಷ ರೂ ಅನುದಾನವನ್ನು ಖರ್ಚು ಮಾಡುವ ನಿರ್ಣಯವನ್ನು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಸಭೆಯಲ್ಲಿ ಕೈಗೊಳ್ಳಲಾಯಿತು
ಶುಕ್ರವಾರ ನಡೆದ ಬುಡಾ ಸಭೆಯಲ್ಲಿ ಶಾಸಕ ಸಂಬಾಜಿ ಪಾಟೀಲರು ಶಿವಾಜಿ ಉದ್ಯಾನ ಹಾಗು ಲೆಲೆ ಮೈದಾನದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಲೆಲೆ ಮೈದಾನದ ಅಭಿವೃದ್ಧಿಗೆ ೨೫ ಲಕ್ಷ ಜೊತೆಗೆ ಶಿವಾಜಿ ಉದ್ಯಾನದ ಅಭಿವೃದ್ಧಿಗೆ ೨೫ ಲಕ್ಷ ರೂ ಅನುದಾನ ಬಿಡುಗಡೆ ಮಾಡಿಸುವಲ್ಲಿ ಶಾಸಕ ಸಂಜಯ ಪಾಟೀಲ ಸಫಲರಾದರು
ಶಾಸಕ ಫರೋಜ್ ಸೇಠ ಮಾತನಾಡಿ ಬೆಳಗಾವಿ ನಗರದ ಶೇ ೫೦ ರಷ್ಟು ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಯೋಜನೆ ಬಸವನಕೊಳ್ಳ ಗ್ರಾಮದಲ್ಲಿ ಪೂರ್ಣಗೊಂಡಿದೆ ಬಸವನಕೊಳ್ಳ ಗ್ರಾಮದಿಂದ ರಾಮತೀರ್ಥ ನಗರಕ್ಕೆ ಪೈಪ್ ಲೈನ್ ಮಾಡಲು ಬುಡಾದಿಂದ ಒಂದು ಕೋಟಿ ೨೫ ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಕಾಲಮಿತಿಯಲ್ಲಿ ಪೈಪ್ಲೈನ್ ಕಾಮಗಾರಿ ಪೂರ್ಣಗೊಳುಸುವಂತೆ ಸೂಚನೆ ನೀಡಿದರು
ರಾಮತೀರ್ಥ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಅದಕ್ಕಾ ಆದಷ್ಟು ಬೇಗನೆ ಬಸವನಕೊಳ್ಳ ನೀರು ಶುದ್ಧೀಕರಣ ಖಟಕದ ನೀರು ನಗರಕ್ಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಸೇಠ ಅಧಿಕಾರಿಗಳಿಗೆ ಸೂಚನೆ ನೀಡಿದರು
ಸಭೆಯಲ್ಲಿ ನಗರದ ಅಭವೃದ್ಧಿ ಹಾಗು ಲೇಔಟ್ ಹಾಗು ಲ್ಯಾಂಡ್ ಯ್ಯುಸ್ ಸೇರಿದಂತೆ ಒಟ್ಟು ೩೨ ವಿಷಯಗಳನ್ನು ಚರ್ಚಿಸಲಾಯಿತು
ಸಭೆಯಲ್ಲಿ ಶಾಸಕ ಸಂಜಯ ಪಾಟೀಲ ಜಿಲ್ಲಾಧಿಕಾರಿ ಜೈರಾಮ ಹಾಗು ಪಾಲಿಕೆ ಆಯುಕ್ರ ಶಶಿಧರ ಕುರೇರ ಬುಡಾ ಆಯುಕ್ತ ಶಕೀಲ ಅಹ್ಮದ ಸದಸ್ಯರಾದ ಪರಶರಾಮ ವಗ್ಗನ್ನವರ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ