Breaking News

ಬುಡಾ ಕಚೇರಿ ಎದುರು ಅಹೋರಾತ್ರಿ ಧರಣಿ ಅಲ್ಲೇ ಅಡುಗೆ…ಅಲ್ಲೇ ನಿದ್ರೆ….!!

ಬುಡಾ ಕಚೇರಿ ಎದುರು ಅಹೋರಾತ್ರಿ ಧರಣಿ ಅಲ್ಲೇ ಅಡುಗೆ…ಅಲ್ಲೇ ನಿದ್ರೆ….!!

ಬೆಳಗಾವಿ-ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಕಣಬರ್ಗಿ ಬಳಿ 130 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಭೂಮಿಯನ್ನು ತನ್ನ ವಶಕ್ಕೆ ಪಡೆದಿರುವದನ್ನು ವಿರೋಧಿಸಿ ರೈತರು ತಮ್ಮ ಕುಟುಂಬ ಸಮೇತ ಬುಡಾ ಕಚೇರಿ ಎದುರು ಅಹೋರಾತ್ರಿ ಪ್ರತಿಭಟಿಸಿದ್ದಾರೆ

ನಿನ್ನೆ ರಾತ್ರಿ ಸಿಲಿಂಡರ್ ಗ್ಯಾಸ್ ಅಡುಗೆ ಪಾತ್ರೆ ಹಾಸಿಗೆ ಸಮೇತ ಬುಡಾ ಕಚೇರಿಗೆ ಆಗಮಿಸಿದ ನೂರಾರು ರೈತ ಕುಟುಂಬಗಳು ಕೃಷಿ ಭೂಮಿ,ಫಲವತ್ತಾದ ಭೂಮಿ ನಮ್ಮ ಬದುಕು,ನಮ್ಮ ಉಸಿರು, ಈ ಭೂಮಿಯನ್ನು ಕಬ್ಜಾ ಮಾಡಬೇಡಿ ನಮ್ಮ ಭೂಮಿ ನಮಗೆ ಕೊಡಿ ಎಂದು ಆಗ್ರಹಿಸಿ ನೂರಾರು ರೈತ ಕುಟುಂಬಗಳು ಬುಡಾ ಕಚೇರಿಯ ಎದುರು ಅಡುಗೆ ಮಾಡಿ ಅಲ್ಲಿಯೇ ಊಟ ಮಾಡಿ ಅಲ್ಲಿಯೇ ನಿದ್ರೆ ಮಾಡಿ ಪ್ರತಿಭಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬುಡಾ ವಶಪಡಿಸಿಕೊಂಡಿರುವ 130 ಎಕರೆಯ ಜಾಗದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು ಈ ಮನೆಗಳ ತೆರವುಗೊಳಿಸುವಂತೆ ಮನೆ ಮಾಲೀಕರಿಗೆ ಬುಡಾ ನೋಟೀಸ್ ಜಾರಿ ಮಾಡಿದ್ದು ಕೆಲವರು ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಉಳಿದವರು ನಮ್ಮ ಮನೆ ತೆರವುಗೊಳಿಸ ಬೇಡಿ ನಮಗೆ ಅಲ್ಲಿಯೇ ಬದುಕಲು ಬಿಡಿ ಎಂದು ಕೆಲವು ಕುಟುಂಬಗಳು ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಅಹವಾಲು ಮಂಡಿಸಿದರು

ಕಣಬರ್ಗಿಯ ಬುಡಾ ಸ್ಕೀಮ್ ಗೆ ಸಮಂಧಿಸಿದಂತೆ ಬುಡಾ ಈಗಾಗಲೇ ನ್ಯಾಯಾಲಯದ ಆದೇಶದ ಮೇರೆಗೆ 131 ಎಕರೆ ಭೂಮಿ ವಶ ಪಡಿಸಿಕೊಂಡಿದೆ ,ಒಟ್ಟು 160 ಎಕರೆಯ ಯೋಜನೆ ಇದಾಗಿದ್ದು ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ ಬುಡಾ ಜಮೀನು ವಶ ಪಡಿಸಿಕೊಂಡು ಅದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ಟೆಂಡರ್ ಕರೆಯುವ ತಯಾರಿ ನಡೆಸಿದೆ .

ಇನ್ನೊಂದು ಕಡೆ ರೈತರು ಅಹೋ ರಾತ್ರಿ ಧರಣಿ ನಡೆಸಿ ನಮ್ಮ ಭೂಮಿ ನಮಗೆ ಕೊಡಿ ಎಂದು ಇಂದು ಬೆಳಗಿನ ಜಾವದವರೆಗೆ ಪ್ರತಿಭಟನೆ ನಡೆಸಿ ಇಂದು ನಗರದಲ್ಲಿ ನಿಷೇದಾಜ್ಞೆ ಜಾರಿಯಲ್ಲಿ ಇರುವದರಿಂದ ಇಂದು ಬೆಳಿಗ್ಗೆ ಪ್ರತಿಭಟನೆ ಹಿಂಪಡೆದಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *