ಬೆಳಗಾವಿ,- ಸಾರಿಗೆ ನೌಕರರು ನಡೆಸುತ್ತಿರುವ ಹೋರಾಟ ,ಎರಡನೇ ದಿನವೂ ಮುಂದುವರೆದಿದ್ದು ಇವತ್ತೂ ಸಮಸ್ಯೆ ಬಗೆ ಹರೆಯುವ ಲಕ್ಷ್ಮಣಗಳು ಕಾಣಿಸುತ್ತಿಲ್ಲ,ಹೀಗಾಗಿ ಇವತ್ತೂ ಬಸ್ ಗಳು ಓಡಾಡುವದು ಡೌಟು…
ಸಾರಿಗೆ ನೌಕರರ ಧರಣಿ ಎರಡನೇಯ ದಿನಕ್ಕೆ ಕಾಲಿಟ್ಟಿದೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮುಂದುವರೆದಿದೆ.
ಸಾರಿಗೆ ನೌಕರರ ಹೋರಾಟಕ್ಕೆ ರೈತ ಮುಖಂಡರು ಸಾಥ್ ಕೊಟ್ಟಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆ
ತಲೆ ಮೇಲೆ ಚಪ್ಪಲಿ ಹೊತ್ತು ಘೋಷಣೆ ಕೂಗುವದರ ಮೂಲಕ ಇವತ್ತಿನ ಹೋರಾಟ ಶುರುವಾಗಿದೆ.
ಸರ್ಕಾರದ ವಿರುದ್ಧ ,ಸಾರಿಗೆ ಸಚಿವರ ವಿರುದ್ಧ ಘೋಷಣೆ ಕೂಗಿ ಸಾರಿಗೆ ನೌಕರರು ಆಕ್ರೋಶ ಹೊರಹಾಕಿದ್ದಾರೆ,
ನಿನ್ನೆ ಬೆಳಿಗ್ಗೆ ಆರಂಭವಾದ ಸಾರಿಗೆ ನೌಕರರ ಹೋರಾಟ ಅಹೋರಾತ್ರಿ ನಡೆದಿದ್ದು,ಧರಣಿ ನಿರತ ರೈತರು ನಿನ್ನೆ ರಾತ್ರಿ ಬಸ್ ನಿಲ್ಧಾಣದ ಆವರಣದಲ್ಲೇ ಅಡುಗೆ ತಯಾರಿಸಿ ಅಲ್ಲೇ,ಊಟ ಮಾಡಿದ್ದರು