ಬೆಳಗಾವಿ, ಸೆ.16(ಕರ್ನಾಟಕ ವಾರ್ತೆ): ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ ಬೆಳಗಾವಿ, ಹಾಗೂ ಕರ್ನಾಟಕ ಉದ್ಯಮಶೀಲತಾಭಿದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಲ್ಲ ಮತ್ತು ಅರಿಶಿಣ (Jaggery and Turmeric) ಉತ್ಪನ್ನಗಳ ತಯಾರಿಕಾ ಕುರಿತು ಆರು ದಿನಗಳ ಉದ್ಯಮಶೀಲತಾಭಿದ್ಧಿ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಸದರಿ ಉತ್ಪನ್ನಗಳ ತಯಾರಿಕೆ ಕುರಿತು ಉದ್ಯಮ ಪ್ರಾರಂಭಿಸುವವರಿಗಾಗಿ ಈ ತರಬೇತಿಯಲ್ಲಿ ಬೆಲ್ಲ ಮತ್ತು ಅರಿಶಿಣ ಉತ್ಪನ್ನಗಳಲ್ಲಿ ಇರುವ ಅವಕಾಶಗಳು, ಉದ್ಯಮ ಸ್ಥಾಪನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಉದ್ಯಮ ನಿರ್ವಹಣಾ ವಿಷಯಗಳಲ್ಲಿ ಪರಿಣಿತರಿಂದ ಮಾರ್ಗದರ್ಶನ ನೀಡಲಾಗುವುದು.
ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ನಿಗದಿತ ನಮೂನೆಯಲ್ಲಿ ದಿನಾಂಕ 24.09.2020 ರೊಳಗಾಗಿ ಸಲ್ಲಿಸಬೇಕು.ಕನಿಷ್ಠ 18 ವರ್ಷ ವಯೋಮಾನವನ್ನು ಹೊಂದಿರಬೇಕು. (ಹೆಚ್ಚಿನ ವಿದ್ಯಾಭ್ಯಾಸ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು). ತರಬೇತಿ ಶುಲ್ಕ : ರೂ.1000/- ಮೊತ್ತದ ಡಿ.ಡಿ. ಅಥವಾ ಚೆಕ್ ಅನ್ನು ಅರ್ಜಿಯೊಂದಿಗೆ Joint Director CEDOK, Belagavi ಇವರಿಗೆ ಸಂದಾಯವಾಗುವಂತೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಿಡಾಕ್ ಜಿಲ್ಲಾ ಕೈಗಾರಿಕಾ ಕೇಂದ್ರದ ಮೊದಲನೇಯ ಮಹಡಿ,
ಖಾನಾಪೂರ ರಸ್ತೆ, ಉದ್ಯಮಬಾಗ ಬೆಳಗಾವಿ ಇಲ್ಲಿಗೆ ನೇರವಾಗಿ ಭೇಟಿಯಾಗಿ ಹೆಸರನ್ನು ದಿನಾಂಕ: 24.09.2020 ರೊಳಗೆ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು- 9591366626 ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***