ಬೆಳಗಾವಿ-ಬಸ್ ನಿಲ್ದಾಣದ ಕಟ್ಟಡದಲ್ಲೇ ಡಿಪೋ ಕಂಟ್ರೋಲರ್ ನೇಣಿಗೆ ಶರಣಾದ ಘಟನೆ,ಬೆಳಗಾವಿ ಜಿಲ್ಲೆ ರಾಯಬಾಗ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಟ್ಟಡದ ಮೊದಲ ಮಹಡಿಯಲ್ಲಿ ಕಿಟಕಿಗೆ ಹಗ್ಗ ಕಟ್ಟಿ ಶಿವಾನಂದ ಭಜಂತ್ರಿ (48) ನೇಣಿಗೆ ಶರಣಾಗಿದ್ದಾನೆ.ಇಂದು ಬೆಳಗ್ಗೆ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ,ಸ್ಥಳಕ್ಕೆ ರಾಯಬಾಗ ಠಾಣೆ ಪೊಲೀಸರ ದೌಡಾಯಿಸಿದ್ದಾರೆ.ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡಿಪೋ ಕಂಟ್ರೋಲರ್ ಗಳು ಸಾರಿಗೆ ಸಿಬ್ಬಂಧಿಗಳು ಬಸ್ ಡಿಪೋಗಳಲ್ಲಿ ,ಬಸ್ ನಿಲ್ಧಾಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ.ಮೇಲಾಧಿಕಾರಿಗಳ ಕಿರುಕಳ,ಮೇಲಿನವರು ಕೆಳಗಿನವರಿಗೆ ಕೊಡುವ ಟಾರ್ಚರ್ ಹೆಚ್ಚಾಗಿರುವ ಕಾರಣ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು ಸಾರಿಗೆ ಮಂತ್ರಿಗಳು ಇದಕ್ಕೆ ಕಡಿವಾಣ ಹಾಕಲು ಇಲಾಖೆಯ ಕಿರುಕಳವನ್ನು ನಿಯಂತ್ರಿಸುವದು ಅಗತ್ಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ