ಬೆಳಗಾವಿ- ಬೆಳಗಾವಿ ಬಸ್ ನಿಲ್ದಾಣದ ಆವರಣದಲ್ಲಿ ಇರುವ ಅಂಗಡೀಕಾರರಿಗೆ ಅಂಗಡಿಗಳನ್ನು ತೆರವು ಮಾಡಲು ಸೂಚಿಸಲಾಗಿದ್ದು ಜನೇವರಿ ೨೬ ರಿಂದ ಬೆಳಗಾವಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ
ಬೆಳಗಾವಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು ಬೆಳಗಾವಿ ಬಸ್ ನಿಲ್ಧಾಣವನ್ನು ಹೈಟೆಕ್ ಮಾಡುವದು ಸರ್ಕಾರದ ಉದ್ದೇಶವಾಗಿದೆ ಅದಕ್ಕಾಗಿ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದರು
ಜನೇರಿ ೨೬ ರ ಒಳಗಾಗಿ ಬೆಳಗಾವಿ ಬಸ್ ನಿಲ್ದಾಣದ ಆವರಣದಲ್ಲಿರುವ ಅಂಗಡಿಗಳನ್ನು ತೆರವು ಮಾಡಿ ಜನೇವರಿ ೨೬ ರಿಂದ ಕಾಮಗಾರಿ ಆಭವಾಗಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಮಾರ್ಚ ತಿಂಗಳ ಅಂತ್ತದಲ್ಲಿ ಬೆಳಗಾವಿ ಜಿಲ್ಲೆಗೆ ೫೦೦ ಹೊಸ ಬಸ್ ಗಳು ಜುಲೈ ವೇಳೆಗೆ ೮೦೦ ಬಸ್ ಗಳು ಬರಲಿವೆ ಎಂದು ಸಚಿವರು ತಿಳಿಸಿದರು
ಬೆಳಗಾವಿ ಜಿಲ್ಲೆಯ ಅಥಣಿ ಕಾಗವಾಡ ಹುಕ್ಕೇರಿ ಅಂಕಲಗಿ ಲೋಕಾಪೂರ ಗುಳೇದಗುಡ್ಡ ದಲ್ಲಿ ಬಸ್ ನಿಲ್ದಾಣ ಹಾಗು ಬಸ್ ಡಿಪೋಗಳ ನಿರ್ಮಾಣಕ್ಕಾಗಿ ೩೦ ಕೋಟಿಗೂ ಅಧಿಕ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು
ದೇಶದ ಯಾವ ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದಯೋ ಆ ರಾಜ್ಯಗಳಿಗೆ ಬರ ಪರಿಹಾರ ಕಾಮಗಾರಿ ಗಳನ್ನು ನಡೆಸಲು ಕೇಂದ್ರದ ಬಿಜೆಪಿ ಸರ್ಕಾರ ಅನುದಾನ ಬುಡುಗಡೆ ಮಾಡದೇ ತಾರತಮ್ಯ ಮಾಡುತ್ತಿದೆ ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದು ನಾಲ್ಕು ಸಾವಿರ ಕೋಟಿ ಮೌಲ್ಯದ ಬೆಳೆ ಹಾನಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಕೇವಲ ಒಂದು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದ್ದು ಕೇಂದ್ರ ಸರ್ಕಾರ ಕರ್ನಾಟಕದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ರಾಮಲಿಂಗ ರೆಡ್ಡಿ ಆರೋಪಿಸಿದರು