ನಿನ್ನೆ ಮಧ್ಯಾಹ್ನ ದಿಂದ ಇಂದು ಬೆಳಗಿನ ಜಾವದವರೆಗೆ ಘಟನೆಯ ಸಂಪೂರ್ಣ ವಿವರ
ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿನ್ನೆ ಮಧ್ಯಾಹ್ನದಿಂದ ವಿಧಾನ ಪರಿಷತ್ತಿನ ಕಲಾಪದಲ್ಲಿ ಶುರುವಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಸಿಟಿ ರವಿ ನಡುವಿನ ವಾಕ್ ಸಮರ ಅಕ್ಷರಶಃ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಂಘರ್ಷವಾಯ್ತು.
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸದನದಲ್ಲಿ ಕೆಟ್ಟ ಶಬ್ದ ಬಳಿಸಿ ನನ್ನನ್ನು ಅವಮಾನಿಸಿದ್ದಾರೆ.ವೈಯಕ್ತಿಕವಾಗಿ ನನ್ನ ನಿಂದಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪ ಮಾಡಿದ್ರು ನೊಂದುಕೊಂಡಿದ್ದ ಲಕ್ಷ್ಮೀ ಹೆಬ್ಬಾಳಕರ್ ಮಾದ್ಯಮಗಳ ಎದುರು ಕಣ್ಣೀರು ಹಾಕುತ್ತಿದ್ದಂತೆಯೇ ಹೆಬ್ಬಾಳಕರ್ ಅಭಿಮಾನಿಗಳು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದ್ರು ಸಿಟಿ ರವಿ ಕಾರಿಗೆ ಘೇರಾವ್ ಮಾಡಿದ್ರು ವಿಧಾನ ಪರಿಷತ್ತಿನ ಸಭಾಂಗಣಕ್ಕೆ ನುಗ್ಗುವ ಪ್ರಯತ್ನ ಮಾಡಿದ್ರು ನಂತರ ಸಿಟಿ ರವಿ ಮೇಲೆ ಹಲ್ಲೆ ಮಾಡುವ ಪ್ರಯತ್ನವೂ ನಡೆಯಿತು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಬ್ಬರಿಂದಲೂ ದೂರು ಪಡೆದು ರೂಲೀಂಗ್ ಕೊಟ್ರು ಪರಿಷತ್ತಿನ ಕಲಾಪಗಳನ್ನು ಮುಂದೂಡಿದ್ರು ಪರಿಷತ್ತಿನ ಕಲಾಪಗಳು ಮುಂದೂಡಿದ ಬಳಿಕ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಿಟಿ ರವಿ ಅವರನ್ನು ,ನಿನಗೆ ತಾಯಿ ಇದೇಯಾ ? ಮಗಳು ಇದೆಯೇ ? ನಿನಗೆ ಹೆಂಡತಿ ಇದೆಯಾ ? ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಇದಾದ ಬಳಿಕ ಪೋಲೀಸರು ಬಿಗಿ ಸರ್ಪಗಾವಲಿನಲ್ಲಿ ಸಿಟಿ ರವಿ ಅವರನ್ನು ಸುವರ್ಣಸೌಧದಿಂದ ಹೊರಗೆ ಕರೆ ತರುವಾಗ ಸುವರ್ಣಸೌಧದ ಮೆಟ್ಟಲುಗಳ ಮೇಲೆ ಸಿಟಿ ರವಿ ಧರಣಿ ಕುಳಿತರು ನಂತರ ಪೋಲೀಸರು ಅವರನ್ನು ಎತ್ಕೊಂಡು ಪೋಲೀಸರ ವಾಹನದಲ್ಲಿ ಹಾಕಿ ಅರೆಸ್ಟ್ ಮಾಡಿದ್ರು.
ಇಡೀ ರಾತ್ರಿ ಠಾಣೆಯಿಂದ ಠಾಣೆಗೆ ಸಿಟಿ ರವಿ ಶಿಪ್ಟ್
ಸುವರ್ಣಸೌಧದ ಅಂಗಳದಲ್ಲಿ ಸಿಟಿ ರವಿ ಅವರನ್ನು ಅರೆಸ್ಟ್ ಮಾಡಿದ ಪೋಲೀಸರು ಅವರನ್ನು ಹಿರೇಬಾಗೇವಾಡಿ ಪೋಲೀಸ್ ಠಾಣೆಗೆ ಕರೆದುಕೊಂಡು ಹೋದ್ರು ಅಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಪೋಲೀಸರು ಸಿಟಿ ರವಿ ಅವರನ್ನು ನಂದಗಡ ಪೋಲೀಸ್ ಠಾಣೆಗೆ ಶಿಪ್ಟ್ ಮಾಡಿದ್ರು ಅಲ್ಲಿಂದ ಖಾನಾಪೂರ್ ಠಾಣೆಗೆ ಶಿಪ್ಟ್ ಮಾಡಲಾಯಿತು.ಖಾನಾಪೂರಕ್ಕೆ ಆರ್ ಅಶೋಕ್ ಮಹೇಶ್ ಟೆಂಗಿನಕಾಯಿ ಸೇರಿದಂತೆ ಇತರ ನಾಯಕರು ಖಾನಾಪೂರ್ ಠಾಣೆಗೆ ದೌಡಾಯಿಸಿದ್ರು ನಂತರ ಪೋಲೀಸರು ಸಿಟಿ ರವಿ ಅವರನ್ನು ರಾಮದುರ್ಗ ಠಾಣೆಗೆ ಕರೆದೊಯ್ಯುವಾಗ ಸಿಟಿ ರವಿ ಮಾರ್ಗದ ಮದ್ಯದಲ್ಲಿ ಕುಳಿತು ಧರಣಿ ಮಾಡಿದ್ರು ಅಲ್ಲಿಂದ ಅವರನ್ನು ಲೋಕಾಪೂರ ಸೇರಿದಂತೆ ಇಡೀ ರಾತ್ರಿ ಬೇರೆ ಬೇರೆ ಠಾಣೆಗಳಿಗೆ ಶಿಪ್ಟ ಮಾಡಲಾಯಿತು ಇಡೀ ರಾತ್ರಿ ಸಿಟಿ ರವಿ ಪಯಣ ಠಾಣೆಯಿಂದ ಠಾಣೆಗೆ ಮುಂದುವರೆದಿತ್ತು.
ಮದ್ಯರಾತ್ರಿ ಸಿಟಿ ರವಿ ಮಾದ್ಯಗಳ ಎದುರು ಹೇಳಿದ್ದು
ಪೋಲೀಸರು ಇಡೀ ರಾತ್ರಿ ಠಾಣೆಯಿಂದ ಠಾಣೆಗೆ ನನ್ನನ್ನು ಶಿಪ್ಟ್ ಮಾಡುತ್ತಿದ್ದಾರೆ, ನನ್ನ ಕೊಲೆ ಮಾಡುವ ಷಡ್ಯಂತ್ರ ನಡೆಯುತ್ತಿದೆ.ಮೇಲಿಂದ ಡೈರೆಕ್ಷನ್ ಬಂದಂತೆ ಪೋಲೀಸರು ನಡೆದುಕೊಳ್ಳುತ್ತಿದ್ದಾರೆ.ಅಧಿವೇಶನದಲ್ಲಿ ಭಾಗವಹಿಸಲು ನಾನು ಬೆಳಗಾವಿಗೆ ಬಂದಿದ್ದೆ,ಪರಿಷತ್ತಿನ ಸಭಾಪತಿಗಳು ನನ್ನ ಕಸ್ಟೋಡಿಯನ್ ಸುವರ್ಣಸೌಧದಲ್ಲಿ ನನ್ನ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆಯಿತು.ಪೋಲೀಸರು ನನ್ನನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸುತ್ತಿದ್ದಾರೆ, ನನ್ನ ಕೊಲೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ಸಿಟಿ ರವಿ ಬೆಳಗಿನ ಜಾವ ಮಾದ್ಯಗಳ ಎದುರು ಪೋಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.