ಬೆಳಗಾವಿ- ಕುಂದಾ ನಗರಿ ಬೆಳಗಾವಿಯಲ್ಲಿ ಪ್ರತಿವರ್ಷ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ಈ ಭಾರೀ ಕನ್ನಡದ ಉತ್ಸವ ಆಚರಣೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿವೆ. ಆದರೇ ಎಂಇಎಸ್ ಪುಂಡರು ಉತ್ಸವವನ್ನು ಕಳೆಗುಂದಿಸುವ ಕುತಂತ್ರ ನಡೆಸಿದ್ದಾರೆ.
ಫೆಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ನಾಡ ವಿರೋಧ ಫೋಷ್ಟ್ ಮಾಡುವ ಮೂಲಕ ಗಡಿ ತಂಟೆಗೆ ಪ್ರಚೋದನೆ ನೀಡವ ಕೆಲಸಕ್ಕೆ ಕೈಹಾಕಿದ್ದಾರೆ.
ಬೆಳಗಾವಿಯಲ್ಲಿ ನವೆಂಬರ್ 1ರಂದು ವಿಜೃಂಭಣೆಯಿಂದ ಕನ್ನಡದ ಹಬ್ಬ ನಡೆಯುತ್ತದೆ. ಇಲ್ಲಿನ ರಾಜ್ಯೋತ್ಸವದಲ್ಲಿ ಪಾಲ್ಗೊಳಲು ಲಕ್ಷಾಂತರ ಜನ ಆಗಮಿಸುತ್ತಾರೆ. ಇಡೀ ನಗರ ಕನ್ನಡಮಯ ವಾಗುರುತ್ತದೆ. ಎಲ್ಲಿ ನೋಡಿದ್ರು ಕನ್ನಡದ ಬಾವುಟು, ಕನ್ನಡ ಧ್ವಜ ಹಾರಾಡುತ್ತವೆ. ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ಪ್ರತಿವರ್ಷ ಅಡ್ಡಿ ಪಡಿಸುವ ಯತ್ನವನ್ನು ನಾಡದ್ರೋಯಿ ಎಂಇಎಸ್ ಮಾಡುತ್ತದೆ. ಇದೀಗ ಛಾಪಾಗಳು ತಮ್ಮ ಹಳೇ ಚಾಳಿಯನ್ನು ಮತ್ತೆ ಮುಂದುವರೆಸಿದ್ದಾರೆ. ಎಂಇಎಸ್ ಕಾರ್ಯಕರ್ತ ಸೂರಜ್ ಕಣಬರಕರ್ ಎಂಬ ವ್ಯಕ್ತಿ ಎನ್ನ ಫೆಸಬುಕ್ ಖಾತೆಯಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಂ ಭಾವಚಿತ್ರಕ್ಕೆ ಕೆಂಪು ರೇಖೆಯಿಂದ ತಿರಸ್ಕಾರದ ಚಿನ್ಹೆ ಹಾಕಿದ್ದಾರೆ. ಅಷ್ಟೇ ಅಲ್ಲ ಜಿಲ್ಲಾಧಿಕಾರಿಗೆ ಹಿಂದಿ ಬರಲ್ಲ, ಇದು ರಾಷ್ಟ್ರಭಾಷೆಗೆ ಮಾಡಿದ ಅಪಮಾನವಲ್ಲವೇ? ಕೇಂದ್ರ ಸರ್ಕಾರವು ಇವರ ಮೇಲೆ ಕ್ರಮ ಜರುಗಿಸುತ್ತದೆಯೋ? ಎಂದು ಅವಹೇಳನ ಮಾಡಿದ್ದಾರೆ.
ಬೆಳಗಾವಿ ಎಂಬ ಶಬ್ದವನ್ನು ಅಳಸಿ ಹಾಕಿ, ಬೆಳಗಾವಂ ಎಂದು ಬರೆಯುವ ಮೂಲಕ ನವೆಂಬರ್ 1ರಂದು ಕರಾಳ ದಿವಸ ಆಚರಣೆಗೆ ಮುಂದಾಗಿ ಎಂದು ಕರೆ ನೀಡಿದ್ದಾರೆ. ಇದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ, ಅವಹೇಳನ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು. ಜತೆಗೆ ಈ ಬಾರೀಯ ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದ್ದು ಎನ್ನುತ್ತಾರೆ ಬೆಳಗಾವಿಯ ಕನ್ನಡಿಗರು
ನಾಡದ್ರೋಹಿ ಎಂಇಎಸ್ ಈಗಾಗಲೇ ಕನ್ನಡಿಗರ ಶಕ್ತಿ ಪ್ರದರ್ಶನದ ಮುಂದೆ ಮಂಕಾಗಿದೆ. ಅನೇಕ ಕಾರ್ಯಕ್ರಮಗಳಲ್ಲಿ ಮುಖಭಂಗ ಅನುಭವಿಸಿದೆ. ಜತೆಗೆ ಎಂಎಇಸ್ ನಲ್ಲಿ ಮೂಡಿರುವ ಬಣ ರಾಜಕೀಯದಿಂದ ಅಸಲಿ ಬಣ್ಣವು ಬಯಲಾಗಿದೆ. ಇಷ್ಟಾದ್ರು ತಮ್ಮ ಹಳೇ ಚಾಳಿ ಮಾತ್ರ ಎಂಇಎಸ್ ಕಾರ್ಯಕರ್ತರು ಬಿಟ್ಟಿಲ್ಲ. ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕೃಷ್ಣ ಭಟ್, ಶಾಂತ ರೀತಿಯಲ್ಲಿ ರಾಜ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲ ಸಾಮಾಜಿಕ ತಾಣದಲ್ಲಿ ಅವೇಳನಕಾರಿ ಸಂದೇಶ ಬಿಡಲಾಗಿದೆ. ಈ ಬಗ್ಗೆ ಈಗಾಗಲೇ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳಲಾವುದು ಎನ್ನುತ್ತಾರೆ. ಕೃಷ್ಣ ಭಟ್, ನಗರ ಪೊಲೀಸ್ ಆಯುಕ್ತರು
ಒಟ್ಟಾರೆಯಾಗಿ ಈ ವರ್ಷ ಗಡಿ ಜಿಲ್ಲೆಯ ಬೆಳಗಾವಿಯಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ. ಕನ್ನಡ ಹಬ್ಬದಲ್ಲಿ ಲಕ್ಷಾಂತರ ಜನ ಪಾಲ್ಗೊಳಲಿದ್ದಾರೆ. ಆದರೇ ಛಾಪಾಗಳು ಮಾತ್ರ ಕರಳಾ ದಿನ ಆಚರಣೆಗೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಾಡಿನ ಎಲ್ಲಾ ಸೌಲಭ್ಯ ಪಡೆಯುವ ಇವರು ನಾಡ ಹಬ್ಬದಂದು ನಾಡದ್ರೋಹಿ ಕೆಲಸಕ್ಕೆ ಕೈಹಾಕಿದ್ದಾರೆ. ಇವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ.