Breaking News

LOCAL NEWS

ಬೆಳಗಾವಿ,ಗಡಿ,ಗಲಾಟೆ, 330 ಬಸ್ ಸೇವೆ ತಾತ್ಕಾಲಿಕ ಸ್ಥಗಿತ…

ಬೆಳಗಾವಿ-ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆ, ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದ 330 ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ‌ವಿಭಾಗದ ಡಿಟಿಒ ಕೆ.ಕೆ. ಲಮಾಣಿ ಅವರು ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದು,ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್‌ಗಳನ್ನು ಬಾರ್ಡರ್‌ನಲ್ಲಿ ನಿಲುಗಡೆ ಮಾಡಲಾಗಿದೆ. ಬಸ್ ಸೇವೆ ಸ್ಥಗಿತದಿಂದಬೆಳಗಾವಿ ವಿಭಾಗಕ್ಕೆ ನಿತ್ಯ 10 ಲಕ್ಷ, ಚಿಕ್ಕೋಡಿ ವಿಭಾಗಕ್ಕೆ 20 ಲಕ್ಷ ನಿತ್ಯ ನಷ್ಟ …

Read More »

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ದಾಳಿ‌…!!

ಬೆಳಗಾವಿ- ಮಹಾರಾಷ್ಡ್ರದ ಪೂನೆಯಲ್ಲಿ ರಾಜ್ ಠಾಕ್ರೆ ಸಾರಥ್ಯದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕರ್ನಾಟಕದ ಬಸ್ ಗಳ ಮೇಲೆ ದಾಳಿ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ನಿನ್ನೆ ಮಂಗಳವಾರ ನಡೆದಿದೆ. ನಿನ್ನೆ ಮಂಗಳವಾರ ಬೆಳಗ್ಗೆ ಕರವೇ ಕಾರ್ಯಕರ್ತರು ಬೆಳಗಾವಿಯ ಹಿರೇಬಾಗೇವಾಡಿ ಬಳಿ ಮಹಾರಾಷ್ಟ್ರದ ಗೂಡ್ಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲಿಯೇ ನಿನ್ನೆ ಮಧ್ಯಾಹ್ನ ಮನಸೇ ಕಾರ್ಯಕರ್ತರು ಮಹಾರಾಷ್ಟ್ರದ ಪೂನೆಯ ಬಸ್ ನಿಲ್ದಾಣಕ್ಕೆ ನುಗ್ಗಿ ಕರ್ನಾಟಕದ ಬಸ್ ಗಳಿಗೆ …

Read More »

ಬೆಳಗಾವಿ ಉತ್ತರದ ಕಾಂಗ್ರೆಸ್ ಬಾಲ್ ಈಗ ಎಐಸಿಸಿ ಅಂಗಳದಲ್ಲಿ…!!!

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಎಲ್ಲಿಲ್ಲದ ಲಾಭಿ ನಡೆದಿದೆ. ಬೆಂಗಳೂರು ಮಟ್ಟದಲ್ಲಿ ಸೀಮೀತವಾಗಿದ್ದ ಲಾಭಿ ಈಗ ದೆಹಲಿಗೆ ತಲುಪಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕಾಂಗ್ರೆಸ್ಸಿನ ಹಳೆಯ ಹುಲಿಗಳು, ಮತ್ತು ಹೊಸ,ಹೊಸ ಕಲಿಗಳು ಕಸರತ್ತು ನಡೆಸಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ.ಯಾಕಂದ್ರೆ ಕಾಂಗ್ರೆಸ್ಸಿನ ಹಳೆಯ ನಿಷ್ಠಾವಂತ ಕಾರ್ಯಕರ್ತ ಹಾಶಮ್ ಬಾವಿಕಟ್ಟಿ, ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಚಿರಪರಿಚಿತ, ಹೀಗಾಗಿ ಇವರು ದೆಹಲಿ ಮಟ್ಟದಲ್ಲಿ ಲಾಭಿ …

Read More »

ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ್ Best CEO ಅವಾರ್ಡ್ ಗೆ ಭಾಜನ…

ಬೆಳಗಾವಿ-ಸಾರ್ವಜನಿಕ ಆಡಳಿತದಲ್ಲಿ ಉತ್ಕರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ ಅವರಿಗೆ IIMM ಸಂಸ್ಥೆಯ 2022 ನೇ ಸಾಲಿನ ‘Best CEO’ ಅವಾರ್ಡ್ ದೊರೆತಿದೆ. ಇತ್ತೀಚೆಗೆ ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ Indian Institute of Material Management ನ ರಾಷ್ಟ್ರೀಯ ಅಧ್ಯಕ್ಷ ಎಚ್. ಕೆ. ಶರ್ಮ ಈ ಪ್ರಶಸ್ತಿ ನೀಡಿದರು. ಸಾರ್ವಜನಿಕ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ಪೌರಾಡಳಿತ, ಸ್ಕಿಲ್ ಡೆವಲಪಮೆಂಟ್, ಬೆಂಗಳೂರು ಜಲಮಂಡಳಿ ಮುಖ್ಯಸ್ಥರಾಗಿ ಕುಡಿಯುವ …

Read More »

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಪುಂಡರ ಅರೆಸ್ಟ್..

ಬೆಳಗಾವಿ ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು‌ ಘೋಷಣೆ ಕೂಗಿದ ಪುಂಡ ಎಂಇಎಸ್ ನಾಯಕರನ್ನು ಪೊಲೀಸರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂಧಿಸಿದರು. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಇಲ್ಲಿನ ಮರಾಠಿ ಭಾಷಿಕರ ಸಮಸ್ಯೆ ಆಗಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದರು. ಅವರಿಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಸರಕಾರಕ್ಕೆ ಪತ್ರ ಬರೆದು ಬೆಳಗಾವಿ ಗಡಿ ಪ್ರವೇಶಿಸದಂತೆ ಮಾಡಿದ್ದು ಖಂಡನೀಯ ಎಂಇಎಸ್ ಛಾಪಾಗಳು ಮರಾಠಿ ಸುದ್ದಿಗಾರರಿಗೆ ಎಂಇಎಸ್ …

Read More »

ಕರವೇ ನಾರಾಯಣಗೌಡ್ರ ಬೆಳಗಾವಿ ನಡೆಗೆ ಹಿರೇಬಾಗೇವಾಡಿಯಲ್ಲೇ ತಡೆ…??

ಬೆಳಗಾವಿ-ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ್ರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದು ಅವರು ಬೆಳಗಾವಿ ಮಹಾನಗರ ಪ್ರವೇಶ ಮಾಡದಂತೆ ತಡೆಯಲು ಹಿರೇಬಾಗೇವಾಡಿ ಟೋಲ್ ಬಳಿ ಬಿಗಿ ಪೋಲೀಸ್ ಬಂದೋಬಸ್ತಿ ಮಾಡಲಾಗಿದೆ. ಬೆಳಗಾವಿ ಮಹಾನಗರದಲ್ಲಿ ಭಾಷಾ ಧ್ವೇಷದ ಕಿಡಿ ಹೊತ್ತಿದಾಗ, ಬೆಳಗಾವಿ ಪೋಲೀಸ್ರು ವಾಟಾಳ್ ನಾಗರಾಜ್ ಸೇರಿದಂತೆ ಎಲ್ಲ ಕನ್ನಡಪರ ಹೋರಾಟಗಾರರನ್ನು ಹಿರೇಬಾಗೇವಾಡಿ ಟೋಲ್ ಬಳಿ ತಡೆಯುತ್ತಾರೆ. ಇಂದು ಕರವೇ ಅಧ್ಯಕ್ಷ ನಾರಾಯಣಗೌಡ್ರು ಸಾವಿರಾರು ಕಾರ್ಯಕರ್ತರ ಜೊತೆಗೆ ಬೆಳಗಾವಿಗೆ ಮುತ್ತಿಗೆ ಹಾಕಿ ನಾಡದ್ರೋಹಿಗಳ ವಿರುದ್ಧ …

Read More »

ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ- ಬೆಳಗಾವಿ ಡಿಸಿ ಆದೇಶ

ಬೆಳಗಾವಿ- ನಾಳೆ ಮಂಗಳವಾರ ಮಹಾರಾಷ್ಟ್ರದ ಇಬ್ವರು ಸಚಿವರು ಬೆಳಗಾವಿಗೆ ಬರಲಿದ್ದು, ಈ ಇಬ್ವರು ಸಚಿವರು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಕಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ‌. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ,ಮತ್ತು ಶಂಬುರಾಜೆ ದೇಸಾಯಿ ಇಬ್ಬರೂ ಬೆಳಗಾವಿ ಗಡಿ ಪ್ರವೇಶ ಮಾಡದಂತೆ ಕ್ರಮ ಜರುಗಿಸಲು ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ,ಶಾಂತಿಗೆ …

Read More »

ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದ ಗಡಿಬಿಡಿ,…!!

ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಬೆಳಗಾವಿ-ಬೆಳಗಾವಿಯ ಶಾಂತಿಗೆ ಭಂಗ ತರಲು,ನಾಳೆ ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಮಂತ್ರಿಗಳು ಬರುತ್ತಿದ್ದು, ಮಹಾರಾಷ್ಟ್ರದ ಮಂತ್ರಿಗಳ ಹಠಮಾರಿ ಧೋರಣೆ ಖಂಡಿಸಿ,ಇವರನ್ನು ಬೆಳಗಾವಿಗೆ ಬಾರದಂತೆ ಯಾವುದೇ ಕಠಿಣ ಕ್ರಮ ಜರುಗಿಸದ ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ ವನ್ಬು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಕುಂದಾನಗರಿ ಬೆಳಗಾವಿಯಲ್ಲಿ ಬೀದಿಗಿಳಿದ ಕನ್ನಡ ಹೋರಾಟಗಾರರು,ಹಾಗೂಬೆಂಗಳೂರಿನ ಕರ್ನಾಟಕ ಏಕೀಕರಣ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದ್ದು,ಕರ್ನಾಟಕ ಏಕೀಕರಣ …

Read More »

VK ಬಾಸ್ ಗೆ ರಿಲೀಫ್,ತವರಿಗೆ ಬಾ ಅಣ್ಣಾ…!!

ಎರಡು ವರ್ಷಗಳ ಬಳಿಕ ಧಾರವಾಡ ಭೇಟಿಗೆ ಕೋರ್ಟ್ ಅಸ್ತು; ವಿದ್ಯಾಕಾಶಿಯಲ್ಲಿ 3 ಗಂಟೆ ಇರಲಿವೆ ವಿಕೆ ಬಾಸ್ ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಎರಡು ವರ್ಷಗಳ ಬಳಿಕ ಧಾರವಾಡ ಭೇಟಿಗೆ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ. ನ್ಯಾಯಾಲಯ ವಿಧಿಸಿದ್ದ ಷರತ್ತಿನಿಂದಾಗಿ ಬೆಳಗಾವಿ ಜೈಲಿನಿಂದ ಬಿಡುಗಡೆಯಾಗಿದ್ದರೂ ಧಾರವಾಡ ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗಿರದ ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಭೇಟಿ ನೀಡಲು ಕೋರ್ಟ್ ಷರತ್ತುಬದ್ದ ಅನುಮತಿ ನೀಡಿದೆ.. …

Read More »

ತನ್ನ ಹೆಂಡತಿಯ ಜೊತೆ ಅಫೇರ್ ಇದೆ ಇಂದು ಅಣ್ಣನನ್ನೇ ಖಲ್ಲಾಸ್ ಮಾಡಿದ ತಮ್ಮ…

ಚಿಕ್ಕೋಡಿ-.ಅನೈತಿಕ ಸಂಬಂಧ ಅಣ್ಣತಮ್ಮಂದಿರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ,ಚಿಕ್ಕೋಡಿ ತಾಲುಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಉಮ್ರಾಣಿ ಗ್ರಾಮದ ಹೊರವಲಯದಲ್ಲಿ ಶವ ಪತ್ತೆಯಾಗಿದೆ.ಅಕ್ಬರ್ ಅಬ್ದುಲ್ ಶೇಕ್ ಕೊಲೆಯಾದ ವ್ಯಕ್ತಿಯಾಗಿದ್ದು,ಅಮ್ಜದ್ ಶೇಕ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.ಅಮಜದ್ ಮತ್ತು ಅಕ್ಬರ್ ಇಬ್ವರು ಸಹೋದರರಾಗಿದ್ದಾರೆ. ಚಿಕ್ಕೋಡಿ ಪಟ್ಟಣದ ಡಂಬಳ ಪ್ಲಾಟ್ ನಿವಾಸಿಗಿರುವ ಆರೋಪಿ ಪೋಲೀಸರಿಗೆ ಶರಣಾಗಿದ್ದಾನೆ.ಕೊಲೆಯಾದ ಅಕ್ಬರ್ ಕಬ್ಬೂರ ಗ್ರಾಮದಲ್ಲಿ ಬ್ಯಾಟರಿ ಅಂಗಡಿಯನ್ನು ಹೊಂದಿದ್ದ,,ಅಣ್ಣನನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಶರಣಾದ ಅಮ್ಜದ್ ಶೇಕ್.ಚಿಕ್ಕೋಡಿ ಪೊಲೀಸ್ …

Read More »