ಬೆಳಗಾವಿ,-ನಾವೆಲ್ಲಾ ಪಂಜಾಬ್ ಅಕ್ಕಿ ತಿನ್ನುತ್ತಿದ್ದೇವೆ,ಆದ್ರೆಪಂಜಾಬ್ ಅಕ್ಕಿ ಅಂದ್ರೆ ಕ್ಯಾನ್ಸರ್ ಗುಳಗಿ ಇದ್ದಂತೆ ನಮ್ಮ ರಾಜ್ಯದಲ್ಲಿ ಬೆಳೆಯುವ ಅಕ್ಕಿ ನಾವೇ ಖರೀಧಿಸಿ ನಮ್ಮ ಅಕ್ಕಿ ನಾವೇ ಸೇವಿಸುವದು ಒಳಿತು ಎನ್ನುವ ಮಾತು ಹೇಳಿದ್ದು ಬೇರೆ ಯಾರೂ ಅಲ್ಲ,ನಮ್ಮ ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ. ಬೆಳಗಾವಿಯಲ್ಲಿ ಇಲಾಖೆಯ ಪ್ರಗತಿ ಪರಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಎರಡ್ಮೂರು ಬಾರಿ ಪಂಜಾಬ್ ಅಕ್ಕಿ ಕಾನ್ಸರ್ ಗುಳಿಗೆ ಇದ್ದಂತೆ ಅಂತಾ ಹೇಳಿದ್ರು …
Read More »ಬೆಳಗಾವಿಯ ಮಸ್ಯಾಜ್ ಸೆಂಟರ್ ಮೇಲೆ ಪೋಲೀಸರ ದಾಳಿ ಇಬ್ಬರ ಬಂಧನ
ಬೆಳಗಾವಿ- ಮಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿರುವ ಸೈಬರ್ ಪೋಲೀಸರು,ಸ್ಪಾನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಇಬ್ಬರ ಬಂಧಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಮೂವರು ಜನ ಯುವತಿಯರನ್ನು ರಕ್ಷಣೆ ಮಾಡಿದ ಬೆಳಗಾವಿ ಸಿ ಇ ಎನ್ ಪೊಲೀಸರು, ಇಬ್ಬರನ್ನು ಬಂಧಿಸಿ ಅನೈತಿಕ ಚಟುವಟಿಕೆ ನಡೆಸಲು ಬಳಿಸುತ್ತಿದ್ದ ಕಾಂಡೋಮ್ ಸೇರಿದಂತೆ ಇತರ ಸಾಮುಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ. ಸೈಬರ್ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಬೆಳಗಾವಿಯ ಟಿಳಕವಾಡಿಯ ಬಳಿ ಅಕ್ರಮವಾಗಿ …
Read More »ಪೋಲೀಸ್ ಇನೆಸ್ಪೆಕ್ಟರ್ ವಿಷಾಧ….ವಕೀಲರ ರಸ್ತೆ ತಡೆ ಅಂತ್ಯ…..
ಬೆಳಗಾವಿ-ಪೊಲೀಸ್ ಠಾಣೆಗೆ ಹೋದ ವಕೀಲನಿಗೆ ಮಾಳಮಾರುತಿ ಠಾಣೆಯ ಸಿಪಿಐ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿ ವಕೀಲರು ಇಂದು ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇಂದು ದಿಢೀರ್ ರಸ್ತೆಗಳಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಪ್ರತಿಙಟಿಸಿದರು.ಬೆಳಗಾವಿಯ ಮಾಳಮಾರುತಿ ಠಾಣೆ ಸಿಪಿಐ ವಿರುದ್ಧ ವಕೀಲರ ಪ್ರತಿಭಟನೆ ನಡೆಸಿ,ಬೆಳಗಾವಿ ಜಿಲ್ಲಾ ನ್ಯಾಯಾಲಯದ ಎದುರು ರಸ್ತೆ ತಡೆದು ವಕೀಲರ ಧರಣಿ ಶುರು ಮಾಡಿದ್ರು. ಮಾಳಮಾರುತಿ ಸಿಪಿಐ ಸುನಿಲ್ …
Read More »ಕೃಷ್ಣ ಭಟ್ ಆಗಬಹುದೇ, ಬಿಜೆಪಿಯ ಅಚ್ಚರಿಯ ಅಭ್ಯರ್ಥಿ…..!!!
ಬೆಳಗಾವಿ- ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆ ಆಗಿಲ್ಲ ಆದ್ರೆ ಬಿಜೆಪಿ ಟಿಕೆಟ್ ಯಾರಿಗೆ ? ಎನ್ನುವ ಚರ್ಚೆ ಮಾತ್ರ ಜೋರಾಗಿ ನಡೆಯುತ್ತಿದೆ. ದಿನಕ್ಕೊಂದು ಚರ್ಚೆ,ಈ ಚರ್ಚೆಯಲ್ಲಿ ಹೊಸಹೊಸ ಹೆಸರುಗಳು ಪ್ರಸ್ತಾಪವಾಗುತ್ತಿವೆ. ಬಿಜೆಪಿ ಸಿದ್ಧಾಂತವೇ ಬೇರೆ ಪಕ್ಷದ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ ಎನ್ನುವ ಸುದ್ಧಿ,ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಸದ್ದು ಮಾಡಿದೆ.ಆ ಅಚ್ಚರಿಯ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುವ …
Read More »ಸೇನಾ ಭರ್ತಿ ನೊಂದಣಿಯಲ್ಲಿ ಬೆಳಗಾವಿ ಜಿಲ್ಲೆಯ ದಾಖಲೆ
ಬೆಳಗಾವಿ, – ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೇನಾ ಭರ್ತಿ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಇಲ್ಲಿನ ವಿಟಿಯು ಕ್ರೀಡಾಂಗಣದಲ್ಲಿ ಗುರುವಾರ (ಫೆ.4) ದಿಂದ ಆರಂಭಗೊಂಡ ಸೇನಾ ಭರ್ತಿ ರ್ಯಾಲಿಗೆ ಹಸಿರುನಿಶಾನೆ ತೋರಿಸಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ನೇಮಕಾತಿ ರ್ಯಾಲಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಬೆಳಗಾವಿ …
Read More »ಬೆಳಗಾವಿ, ನಗರದಲ್ಲಿ ಮೈಸೂರಿನ ಲುಕ್….!!!
ಬೆಳಗಾವಿ-ಮೈಸೂರಿನಲ್ಲಿ ಪಾಲಿಕೆ ಆಯುಕ್ತರಾಗಿ ಸೇವೆ ಮಾಡಿ ಬೆಳಗಾವಿಗೆ ಬಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಅವರು ಬೆಳಗಾವಿ ನಗರಕ್ಕೆ ಮೈಸೂರಿನ ಲುಕ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ . ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿರುವ. ಚನ್ನಮ್ಮಾಜಿಯ ಮೂರ್ತಿಗೆ, ಕಿತ್ತೂರ ರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಬಿಂಬಿಸುವ ಅತ್ಯಾಕರ್ಷಕ ಆರ್ಟ್ ಮಾಡಿಸಿ ವೀರಮಾತೆಯ ಮೂರ್ತಿಗೆ ಹೊಸ ಲುಕ್ ಕೊಡಸಿದ್ದೇ ಪಾಲಿಕೆ ಆಯುಕ್ತ ಜಗದೀಶ್ ಅವರು ಬೆಳಗಾವಿ ಮಹಾನಗರ ಪಾಲಿಕೆ …
Read More »ಶಾಸಕ ಅಭಯ ಪಾಟೀಲರ ಛಲ..ಬೆಳಗಾವಿ ಐಟಿ ಪಾರ್ಕ್ ಗೆ ಭೀಮ ಬಲ…!!!
ಬೆಳಗಾವಿ-ಶಾಸಕ ಅಭಯ ಪಾಟೀಲ ಅಭಿವೃದ್ಧಿಯ ವಿಚಾರದಲ್ಲಿ ತುಂಬಾ ಹಠವಾದಿ,ಛಲಗಾರ,ಮಾಡಿದ ಸಂಕಲ್ಪ ಈಡೇರುವವರೆಗೂ ಸುಮ್ಮನೇ ಕುಳಿತುಕೊಳ್ಳದ ಜಿಗುಟ ಮನಸ್ಥಿತಿಯ ನಾಯಕ ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು, ಕಳೆದ ಒಂದು ದಶಕದಿಂದ ಬೆಳಗಾವಿಯಲ್ಲಿ ಐಟಿ,ಬಿಟಿ ಪಾರ್ಕ್ ಆಗಲೇಬೆಕೆಂದು ಹಠಕ್ಕೆ ಬಿದ್ದು,ಶಾಸಕರ ಸಹಿ ಸಂಗ್ರಹ ಮೂಲಕ ಹೋರಾಟ ಆರಂಭಿಸಿದ ಅವರು ಅಷ್ಟಕ್ಕೆ ಸುಮ್ಮನಾಗದೇ ವಿಧಾನಸಭೆಯ ಅಧಿವೇಶನದಲ್ಲಿ ಖಾಸಗಿ ನಿರ್ಣಯ ಮಂಡಿಸುವ ಮೂಲಕ ಸರ್ಕಾರದ ಗಮನ …
Read More »ಕೇಂದ್ರದ ರಕ್ಷಣಾ ಸಚಿವರನ್ನು ಸಾಹುಕಾರ್ ಭೇಟಿಯಾಗಿದ್ದು ಯಾಕೆ ಗೊತ್ತಾ…?
ಬೆಳಗಾವಿಯಲ್ಲಿ ಸೈನಿಕ ಶಾಲೆ ಪ್ರಾರಂಭಿಸಲು ಸಚಿವ ರಮೇಶ್ ಜಾರಕಿಹೊಳಿ ಒತ್ತಾಯ* ಬೆಳಗಾವಿ-ಕೇಂದ್ರ ರಕ್ಷಣಾ ಸಚಿವ ಮತ್ತು ಭಾರತೀಯ ಜನತಾ ಪಾರ್ಟಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್* ಅವರನ್ನು ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು. ನಿನ್ನೆಯ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ ದೇಶದಾದ್ಯಂತ ಸೈನಿಕ ಶಾಲೆಗಳನ್ನು ಪ್ರಾರಂಭಿಸುವ ಪ್ರಸ್ತಾವನೆಗೆ ಹರ್ಷ ವ್ಯಕ್ತಪಡಿಸಿದ ಸಚಿವ *ರಮೇಶ್ ಜಾರಕಿಹೊಳಿ*, ಕಿತ್ತೂರು ರಾಣಿ ಚೆನ್ನಮ್ಮ ಅವರ …
Read More »ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಡಿಸಿ ಸೂಚನೆ
ಬೆಳಗಾವಿ-ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣೆ ಅಧ್ಯಾದೇಶ 2020’ನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜ.30) ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಅಶೋಕ ಕೊಳ್ಳಾ ಅವರು ಸಭೆಯನ್ನು ನಿರ್ವಹಿಸಿದರು. ಸಭೆಯಲ್ಲಿ ಡಿವೈಎಸ್ಪಿ ಕರುಣಾಕರ ಶೆಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ …
Read More »ಮಾರಿಹಾಳ ಗ್ರಾಪಂ ಅದ್ಯಕ್ಷರಾಗಿ ತೌಸೀಪ್ ಫನೀಬಂಧ್….
ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆಗಳು ಇಂದಿನಿಂದ ಆರಂಭವಾಗಿದ್ದು ಮಾರಿಹಾಳ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ತೌಸೀಫ್ ಅಲ್ಲಾವುದ್ದೀನ್ ಫನೀಬಂಧ್ ಮತ್ತು ಉಪಾಧ್ಯಕ್ಷರಾಗಿ,ಬಸವರಾಜ್ ವೀರಭದ್ರಪ್ಪ ಮಾಧನ್ನವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾರಿಹಾಳ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಅದ್ಯಕ್ಷ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯತಿಯ ಸದಸ್ಯರು ಸತ್ಕರಿಸಿ ಗೌರವಿಸಿದರು.ಈ ಸಂಧರ್ಭದಲ್ಲಿ ಮಾರಿಹಾಳ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಗ್ರಾಮದ ಹಿರಿಯರಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಮಾರಿಹಾಳ ಗ್ರಾಮ ಪಂಚಾಯತಿ ಅದ್ಯಕ್ಷ …
Read More »