Breaking News

LOCAL NEWS

ಬೆಳಗಾವಿಯಲ್ಲಿ ಭರ್ಜರಿ ಮಟಕಾ ದಾಳಿ

ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಡಿಸಿಪಿ ರವರ ವಿಶೇಷ ತಂಡದಿಂದ ಕಲೆಗಾರಗಲ್ಲಿಯ ಮತವಾಲಾ ಕಾಂಪ್ಲೆಕ್ಸ್ ಮೇಲೆ ಮಟಕಾ ದಾಳಿ ಮಾಡಿ 14 ಅನ ಆರೋಪಿತರನ್ನು ದಸ್ತಗಿರ ಮಾಡಿ ಅವರಿಂದ ರೂ. 10,020/- ನಗದು ಮತ್ತು 08 ಮೊಬೈಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಾರ್ಕೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಆರೋಪಿತರ ವಿವರ : 1) ಅಯ್ಯಪ್ಪ ಶೇಖರ್‌ರಾಜ ಶೆಟ್ಟಿ ಸಾ|| 2 ನೇ ಕ್ರಾಸ್ …

Read More »

ಡಲ್ ಹೊಡೆದ ಮಾಜಿ ಶಾಸಕ ಸಂಜಯ ಪಾಟೀಲ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಅಳತೆ ಮಾಡಿ ತೂಗಿ,ಗುಣಾಕಾರ,ಭಾಗಾಕಾರ ಮಾಡಲು ಸಾಧ್ಯವೇ ಇಲ್ಲ ಅಂತಾ ಕೆಲವು ಅನುಭವಿಗಳು ಹೇಳ್ತಾರೆ,ಇವತ್ತು ಸಂಜಯ ಪಾಟೀಲರ ಹತಾಶೆಯ ನುಡಿಗಳನ್ನು ಗಮನಿಸಿದರೆ ಇದು ನಿಜ ಅನಿಸುತ್ತೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಅದ್ಯಕ್ಷ ಉಪಾದ್ಯಕ್ಷರನ್ನು ಮತ್ತು ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ …

Read More »

ಬೆಳಗಾವಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಾಹುಕಾರ್…!!

ಬೆಳಗಾವಿ-ಬೆಳಗಾವಿಯಲ್ಲಿ ಸಚಿವ ರಮೇಶ ‌ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ ಕಾಂಗ್ರಸ್ಸಿನ ಐದು ಜನ ಟಾಪ್ ಲೀಡರ್ ಗಳು ನನ್ನನ್ನು ಸಂಪರ್ಕ ಮಾಡಿದ್ದು ನಾನು ಮನಸ್ಸು ಮಾಡಿದ್ರೆ 24 ಗಂಟೆಯಲ್ಲಿ ಅವರನ್ನು ಬಿಜೆಪಿಗೆ ತರಬಲ್ಲೇ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಂಜಯ ಪಾಟೀಲ್ ಕ್ಷಮೆ ಕೊರುತ್ತೇನೆ. ಈ ಹಿಂದೆ ಕಾಂಗ್ರೆಸ್ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ. …

Read More »

ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ….

ಬೆಳಗಾವಿ-ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ ತಗಲಿದ್ದು ಕಟ್ಟಿಗೆ ಸಂಗ್ರಹ ಘಟಕ ಹೊತ್ತಿ ಉರಿಯುತ್ತಿದೆ. ಉದ್ಯಮಬಾಗ ಪ್ರದೇಶದಲ್ಲಿ ಇರೋ ಸಂಗ್ರಹಣೆ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿದ್ದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದಳ ದೌಡಾಯಿಸಿದೆ. ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದು ಬೆಳಗಾವಿಯ ನಾಲ್ಕು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿವೆ.

Read More »

ಇಬ್ಬರು ಕಂದಮ್ಮಗಳ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

*ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ನದಿಯಲ್ಲಿ ಹೆಣವಾಗಿ ಪತ್ತೆ* ಬೆಳಗಾವಿ/ಗೋಕಾಕ: ಮನೆಯಲ್ಲಿ ಜಗಳವಾಡಿ ಮೂರು ದಿನಗಳಿಂದ ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ(೩೦), ಪೂಜಾ(೪), ಲಕ್ಷ್ಮೀ (೨) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಜಗಳವಾಡಿ, ಜೀವನದಲ್ಲಿ ಜಿಗುಪ್ಸೆಗೊಂಡು ಮೂರು ದಿನಗಳಿಂದ ಕಾಣೆಯಾಗಿದ್ದರು. ನಾಪತ್ತೆ ಆಗಿರುವ ಬಗ್ಗೆ ಗಂಡನ ಮನೆಯವರು ಶನಿವಾರ ದೂರು ನೀಡಿದ್ದರು. …

Read More »

ಲೋಕಸಭೆಯಲ್ಲಿ ಮತ್ತೇ ಶಿವಸೇನೆ ಕಿರಿಕ್….

ಬೆಳಗಾವಿ- ಲೋಕಸಭೆಯಲ್ಲಿ ಇಂದು ನಡೆಬಾರದ ಘಟನೆ ನಡೆದು ಹೋಯಿತು.ಶಿವಸೇನೆ ಸಂಸದನೊಬ್ಬ ಬೆಳಗಾವಿ ಕಾರವಾರ ನಿಪ್ಪಾಣಿ ಪ್ರದೇಶಗಳು ಕೇಂದ್ರಾಡಳಿತ ಪ್ರದೇಶ ಆಗಲೇಬೇಕು ಎಂದು ಒತ್ತಾಯ ಮಾಡಿದ್ರೂ ಕರ್ನಾಟಕದ ಯಾವೊಬ್ಬ ಸಂಸದನೂ ಅದಕ್ಕೆ ಅಡ್ಡಿ ಪಡಿಸಲಿಲ್ಲ,ರಾಜ್ಯದ ಕೋಟ್ಯಾಂತರ ಕನ್ನಡಿಗರು ಕ್ಷಮಿಸಲಾರದ ಘಟನೆ ಇಂದು ನಡೆದಿದೆ. ಇವತ್ತು ಶಿವಸೇನೆಯ ಸಂಸದ, ರಾಹುಲ್ ಶೇವಾಲೆ ಎಂಬಾತ ಲೋಕಸಭೆಯಲ್ಲಿ ಮಾತಾಡಿ ಬೆಳಗಾವಿ ಕಾರವಾರ,ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಠರಾವ್ ಪಾಸ್ ಮಾಡಿದೆ ಈ ಕುರಿತು …

Read More »

22 ರಂದು ದೆಹಲಿಗೆ ಹೋಗ್ತೇನೆ,ಚರ್ಚೆ ಮಾಡ್ತೀನಿ….

ಬೆಳಗಾವಿ-ಇದೇ 22 ರಂದು ದೆಹಲಿಗೆ ಪ್ರಯಾಣ ಮಾಡಲಿದ್ದೇನೆ.. ರಾಜ್ಯ ನೀರಾವರಿ ಯೋಜನೆ ಕುರಿತು ಮಾತನಾಡಲಿದ್ದೇನೆ ಎಂದು ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇಲ್ಲಿ ಪೀಠದ ತಜ್ಞರು ಅಧಿಕಾರಿಗಳು ಜೊತೆಗೆ ಚೆರ್ಚೆ ಮಾಡುತ್ತೇನೆ. ಹಳೆಯ ಭದ್ರ ಮೇಲ್ದಂಡೆ ಯೋಜನೆ ಕೃಷ್ಣ ಮೇಲ್ದಂಡೆ ಯೋಜನೆ , ಮಹದಾಯಿ, ಮೇಕೆ ದಾಟು ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಕುರಿತು ಚೆರ್ಚೆ ಮಾಡುತ್ತೇನೆ.ಕೃಷ್ಣ ಮೇಲ್ದಂಡೆ ಯೋಜನೆ ಗೆ ಅಡ್ಡಿಯಾಗಿರುವ …

Read More »

ಮಚ್ಛೆ ಬೈಪಾಸ್… ರೈತರಿಗೆ ಲಾಸ್…ಸ್ಥಳಕ್ಕೆ ದೌಡಾಯಿಸಿದ್ರು ಬಿಗ್ ಬಾಸ್….!!!

ಬೆಳಗಾವಿ- ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲಿಯೇ ರೈತರು ಮೊತ್ತೊಂದು ಗಂಭೀರ ಆರೋಪ ಮಾಡಿರುವ ಹಿನ್ನಲೆಯಲ್ಲಿ,ಜಿಲ್ಲಾಧಿಕಾರಿ ಹಿರೇಮಠ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ರಸ್ತೆ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡ ರೈತನಿಗೆ 57 ,ಲಕ್ಷ ರೂ ಪರಿಹಾರ ಕೊಡಲು 11 ಲಕ್ಷ ರೂ ಕಮೀಷನ್ ಕೇಳುತ್ತಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ರೈತರು ಅಹೋ ರಾತ್ರಿ …

Read More »

ದಂಡ ವಸೂಲಿ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ

ಬೆಳಗಾವಿ: ರಾಜ್ಯ ಸರ್ಕಾರಿ ನೌಕರರು, ನಿಗಮ ಮಂಡಳಿ ಪ್ರಾಧಿಕಾರ ವಿಶ್ವವಿದ್ಯಾಲಯ ಸಂಸ್ಥೆಯ ಅಧಿಕಾರಿ/ ನೌಕರರು ತಪ್ಪು ಮಾಹಿತಿ ನೀಡಿ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಪಡೆದಿದ್ದಲ್ಲಿ ಅದನ್ನು ಸ್ವಯಂ ಪ್ರೇರಣೆಯಿಂದ ಆಹಾರ ಇಲಾಖೆಗೆ ಅಧ್ಯರ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಉಮೇಶ ಕತ್ತಿ ಅವರು ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರು, ನಿಗಮ ಮಂಡಳಿ ಪ್ರಾಧಿಕಾರ ವಿಶ್ವವಿದ್ಯಾಲಯ ಸಂಸ್ಥೆಯ …

Read More »

ಮಟಕಾ ಅಡ್ಡೆ ಮೇಲೆ ದಾಳಿ 13 ಜನ ಪೋಲೀಸರ ವಶಕ್ಕೆ

ಬೆಳಗಾವಿ- ಬೆಳಗಾವಿ ನಗರದಲ್ಲಿ ಮಟಕಾ,ಜೂಜಾಟವನ್ನು ಸಂಪೂರ್ಣವಾಗಿ ಸಮಾಧಿ ಮಾಡಲು ಸಂಕಲ್ಪ ಮಾಡಿರುವ ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರು ಬೆಳಗಾವಿ ನಗರದಲ್ಲಿ ತಡರಾತ್ರಿ ಮೊತ್ತೊಂದು ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಕಮಿಷನರೇಟಿನ ವ್ಯಾಪ್ತಿಯಲ್ಲಿ ತಡರಾತ್ರಿ ಬೆಳಗಾವಿಯ ಹಳೆ ಬಾಜಿ ಮಾರ್ಕೆಟ್ ಬಳಿಯ ಮಟಕಾ ಅಡ್ಡೆಯ ಮೇಲೆ ದಾಳಿ ನಡೆಸಿ,ಒಟ್ಟು 13 ಜನ ಆರೋಪಿಗಳ ದಸ್ತಗೀರ್;ರೂ.17,020 /- ಹಣ,15 ಮೊಬೈಲ್ ಹಾಗೂ 6 ಬೈಕ್ ಜಪ್ತಿ ಮಾಡಿದ್ದಾರೆ. ಮಟಕಾ ಆಡುತ್ತಿದ್ದ  …

Read More »