Breaking News

LOCAL NEWS

ಬೆಳಗಾವಿ ಡಿಸಿಸಿ ಬ್ಯಾಂಕ್ ‌ನಿರ್ದೇಶಕನ‌ ಪತ್ನಿ ನೇಣಿಗೆ ಶರಣು

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 29 ವರ್ಷದ ಶ್ರುತಿ ಕಪ್ಪಲಗುದ್ದಿ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ನಿವಾಸಿಯಾದ ಶ್ರುತಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಗೋಕಾಕ ‌ತಾಲೂಕಿನ ಕಲ್ಲೋಳಿ ಗ್ರಾಮದ ನೀಲಕಂಠ ಕಪ್ಪಲಗುದ್ದಿ ಜೊತೆ ವಿವಾಹವಾಗಿತ್ತು. ಗಂಡ ಪ್ರತಿ ದಿನ ಮನೆಗೆ ಕುಡಿದು ಬರುತ್ತಿದ್ದಕ್ಕೆ ಗಲಾಟೆಯಾಗುತ್ತಿತ್ತಂತೆ. ಇದಕ್ಕೆ ಬೇಸತ್ತು ಶ್ರುತಿ ಮನೆಯ …

Read More »

ಬೆಳಗಾವಿಯಿಂದ ದೆಹಲಿಯವರೆಗೆ ಡಾ. ಸೋನವಾಲ್ಕರ್ ಸ್ರೋಕ್….!!!

ಬೆಳಗಾವಿ- ಬೆಳಗಾವಿ ಪ್ರತಿಷ್ಠಿತ ಲೇಕ್ ವ್ಯೂ ಆಸ್ಪತ್ರೆಯ ವೈದ್ಯ ಗಿರೀಶ ಸೋನವಾಲಕರ ಇವರು ಇಂದು ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆದಂತಹ ಶ್ರೀ B. L. ಸಂತೋಷಜಿ ಅವರನ್ನು ಬೇಟಿಯಾಗಿರುವ ವಿಷಯ ಈಗ ಬಿಜೆಪಿ ಪಾಳೆಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬೈ ಇಲೆಕ್ಷನ್ ಇನ್ನೂ ಘೋಷಣೆ ಆಗಿಲ್ಲ ಆದ್ರೆ ಬಿಜೆಪಿ ಪಾಳೆಯದಲ್ಲಿ ಬಿ ಫಾರ್ಮ್ ಗಾಗಿ ಮುಸುಕಿನ ಗುದ್ದಾಟ ಜೋರಾಗಿಯೇ ನಡೆದಿದೆ. …

Read More »

ಬಿಜೆಪಿ ಬೆಳೆಸಿದ ಮನೆತನಕ್ಕೆ ಮಹತ್ವದ ಹುದ್ದೆ…

ಬೆಳಗಾವಿ-ದಿವಂಗತ ಸುರೇಶ್ ಅಂಗಡಿ ಅವರು ಬಿಜೆಪಿ ಸೇರಿರಲಿಲ್ಲ,ಈರಣ್ಣಾ ಕಡಾಡಿ ಬಿಜೆಪಿಯಲ್ಲಿ ಕಾಣಿಸಿರಲಿಲ್ಲ,ಅಭಯ ಪಾಟೀಲರು ಹಿರೇಬಾಗೇವಾಡಿಯಿಂದ ಚುನಾವಣೆಗೆ ಸ್ಪರ್ದಿಸುವ ಮೊದಲೇ ಬೆಳಗಾವಿ ಜಿಲ್ಲೆಯಲ್ಲಿ ಚಳುವಳಿಯ ಮುಖಾಂತರ ಕ್ರಾಂತಿ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬೀಜ ಬಿತ್ತಿದ ಮನೆತನಕ್ಕೆ ತಡವಾದರೂ ಮಹತ್ವದ ಹುದ್ದೆ ಒಲಿದು ಬಂದಿದೆ… ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಕಿತ್ತೂರಿನಲ್ಲಿ ಕ್ರಾಂತಿ ಮಾಡುವ ಮೂಲಕ ಸರ್ಕಾರವನ್ನೇ ನಡುಗಿಸಿದ್ದ ಡಾ.ಗೋಪಾಲರಾವ್ ದೇಶಪಾಂಡೆ ಅವರು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಬೀಜ ಬಿತ್ತಿ,ಬಿಜೆಪಿಯ ಬೇರುಗಳನ್ನು …

Read More »

ಬೆಳಗಾವಿಯಲ್ಲಿ ಬೈಕ್ ಗೆ ಕಾರು ಡಿಕ್ಕಿ ಯುವಕನ ಸಾವು..

ಬೆಳಗಾವಿ- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಅಪಘಾತ ಬೆಳಗಾವಿ ನಗರದ ಜೆ ಎನ್ ಎಮ್ ಸಿ ಬಳಿ ಇರುವ KFC ಚಿಕನ್ ಕಾರ್ನರ್ ಬಳಿ ಸಂಭವಿಸಿದೆ. ಈ ಅಪಘಾತದಲ್ಲಿ 22 ವರ್ಷದ ಯುವಕ ಕಾಕತಿ ಗ್ರಾಮದ ನಿವಾಸಿ,ಸಾಯಿರಾಜ್,ಸಂಬಾಜಿ ಕಡೋಲ್ಕರ್ ಮೃತಪಟ್ಟಿದ್ದು,18 ವರ್ಷದ ಗೌತಮ ಕಡೋಲ್ಕರ್ ಗಂಭೀರವಾಗಿ ಗಾಯಗೊಂಡಿದ್ದಾನೆ.

Read More »

ಶ್ರೀರಾಮ ಭಕ್ತ ಹುಕ್ಕೇರಿಯ ಬಾಲಕ ಶರ್ವಿಲ್….

ಬೆಳಗಾವಿ-ನಾಲ್ಕು ವರ್ಷದ ಕು.ಶರ್ವಿಲ ಶಿವಗೌಡಾ ಪಾಟೀಲ (ಹುಕ್ಕೇರಿ) ಈ ಪುಟ್ಟ ಮಗು ತಾನು ಉಳಿಸಿದ ಹಣ ₹…620/-..ರೂಗಳನ್ನು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಿಸಿ ಎಲ್ಲರ ಗಮನ ಸೆಳೆದಿದ್ದಾನೆ‌. ಬೆಳಗಾವಿ ಜಿಲ್ಲೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ ನಡೆದಿದ್ದು,ಬಡವಾಣಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವಾಗ ಈ ಬಾಲಕನ ತಾಯಿ ನಿಧಿ ಸಮರ್ಪಿಸಿ ಭಕ್ತಿಯಿಂದ ಕೈ ಮುಗಿಯುತ್ತಿರುವದನ್ನು ಗಮನಿಸಿದ ಈ ಪುಟ್ಟ ಬಾಲಕ ಸರ್ರನೇ ಒಳಗೆ ಹೋಗಿ ತಾನು ಕೂಡಿಟ್ಟ …

Read More »

ಫೆಬ್ರವರಿ1 ರಿಂದ ಯಲ್ಲಮ್ಮನ ದೇವಸ್ಥಾನ ಓಪನ್…!!!

ಬೆಳಗಾವಿ-,ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಮಂದಿರಗಳಾದ ಸವದತ್ತಿ ಯಲ್ಲಮ್ಮನ ದೇವಸ್ಥಾನ, ಮತ್ತು ಚಿಂಚಲಿ ಮಾಯಕ್ಕ ಮಂದಿರಗಳು ಸಾರ್ವಜನಿಕರ ದರ್ಶನಕ್ಕೆ ಓಪನ್ ಮಾಡುವ ಸಾಧ್ಯತೆ ಇದೆ. ಈ ಎರಡೂ ದೇವಸ್ಥಾನಗಳಿಗೆ ಪಕ್ಕದ ಮಹಾರಾಷ್ಟ್ರ,ಮತ್ತು ಗೋವಾ ರಾಜ್ಯಗಳಿಂದ ದಿನನಿತ್ಯ ಸಾವಿರಾರು ಭಕ್ತರು ಬರುತ್ತಾರೆ,ಕೊರೋನಾ ಮಹಾಮಾರಿಯಿಂದಾಗಿ ಈ ಎರಡೂ ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ಬಂದ್ ಮಾಡಿ ಒಂದು ವರ್ಷ ಕಳೆದಿದ್ದುಒಂದು ವರ್ಷದ ಬಳಿಕ ಈ ಎರಡೂ ದೇವಸ್ಥಾನಗಳಲ್ಲಿ ದರ್ಶನದ ಭಾಗ್ಯ ಮತ್ತೆ ಬರಲಿದೆ. ಬೆಳಗಾವಿ ಜಿಲ್ಲಾಡಳಿತ …

Read More »

ಡೋಂಟ್ ಕೇರ್ ವಿರುದ್ಧ ಬೆಳಗಾವಿಯಲ್ಲಿ ಸೆಡ್ಡು ಹೊಡೆದ ಪೈಲವಾನರು…!!

ಕೀರ್ತಿಯ ಪುತ್ರರು ಎರಡು ರಾತ್ರಿ ರೈಲು ನಿಲ್ಧಾಣದಲ್ಲೇ ಕಳೆಯಬೇಕಾಯಿತು…….!!! ಬೆಳಗಾವಿ-ನಮ್ಮ ನೆಲದ ಕೀರ್ತಿಯನ್ನು ರಾಷ್ಟ್ರಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವ ಪೈಲವಾನ್ ರ ಜೊತೆ ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎನ್ನುವ ಸ್ಟೋರಿ ಕೇಳಿದರೆ,ಈ ರಾಜ್ಯದ ಕ್ರೀಡಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಿಜವಾಗಿಯೂ ಆಕ್ರೋಶ ಹೊರ ಬರುವದರಲ್ಲಿ ಸಂಶಯವೇ ಇಲ್ಲ. ಇತ್ತೀಚಿಗೆ ದೆಹಲಿಯ ನೋಯಿಡಾದಲ್ಲಿ ರಾಷ್ಟ್ರೀಯ ಕ್ರೀಡಾ ಉತ್ಸವ ನಡೆದಿತ್ತು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕ ರಾಜ್ಯದಿಂದ ಕೇವಲ ಐದು …

Read More »

ಉದ್ಧವ ಠಾಖ್ರೇ ನಿಂದೇನ್ ಐತಿ….ಮುಂಬಯಿ ನಮ್ದ ಐತಿ….!!!

ಬೆಳಗಾವಿ- ಗಡಿ ಬೆಳಗಾವಿಯಲ್ಲಿ ಕನ್ನಡದ ಹುಡುಗ್ರು ಈಗ ಹೊಸ ಘೋಷಣೆ ಹಾಕುತ್ತಿದ್ದಾರೆ.ಅದೇಂದ್ರೆ,ಯಾರಪ್ಪಂದ್ ಏನ್ ಐತಿ,ಮುಂಬಯಿ ನಮ್ದ ಐತಿ..ಉದ್ಧವ ಠಾಖ್ರೇದ ಏನ್ ಐತಿ,ಮುಂಬಯಿ ನಮ್ದ ಐತಿ ಎನ್ನುವ ಘೋಷಣೆಗಳು ಈಗ ಬೆಳಗಾವಿಯಲ್ಲಿ ಮೊಳಗುತ್ತಿವೆ. ಕರುನಾಡ ಯುವ ಸೇನೆ ಕಾರ್ಯಕರ್ತರು ಇಂದು ಬೆಳಗಾವಿಯ ಚನ್ನಮ್ಮ ಸರ್ಕಲ್‌ ನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತ ಪಡಿಸಿದರು,ಮುಂಬಯಿ- ಕರ್ನಾಟಕ ಪ್ರದೇಶವನ್ನು ಕನ್ನಡದ ರಾಜರೇ ಆಳಿದ್ದಾರೆ.ಮುಂಬಯಿ ಕೂಡಾ ಕರ್ನಾಟಕ ರಾಜ್ಯಕ್ಕೆ ಸೇರಬೇಕು …

Read More »

ರೇಲ್ವೆ ಟ್ರ್ಯಾಕ್ ಮೇಲೆ ಮಲಗಿ ಒಂದೇ ಕುಡುಂಬದ ನಾಲ್ವರ ಆತ್ಮಹತ್ಯೆ…..

ಬೆಳಗಾವಿ-ಇತ್ತೀಚಿಗೆ ಬೆಳಗಾವಿ ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಅದರಲ್ಲಿಯೂ,ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನಡೆಯುತ್ತಿರುವದು ಆತಂಕದ ಸಂಗತಿಯಾಗಿದೆ. ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ,ಬೆಳಗಾವಿ ಜಿಲ್ಲೆ ರಾಯಬಾಗ ರೈಲುನಿಲ್ದಾಣ ಬಳಿ ನಡೆದಿದೆ. ವೃದ್ಧ ತಂದೆ, ತಾಯಿ, ಇಬ್ಬರು ಗಂಡು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು,ನಿನ್ನೆ ರಾತ್ರಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು …

Read More »

ಹೆಸರು ನೊಂದಾಯಿಸಿದ ಎಲ್ಲರಿಗೂ ಇಂಜೆಕ್ಷನ್ ಕೊಡಿ…

ಬೆಳಗಾವಿ, ಕೋವಿಡ್-೧೯ ಲಸಿಕಾಕರಣ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ಕೈಗೊಂಡು ನೋಂದಾಯಿತ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಜ.27) ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬೀಜ-ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಕೆಲವು ದೂರುಗಳು ಬಂದಿರುತ್ತವೆ. ಈ ಬಗ್ಗೆ …

Read More »