Breaking News

LOCAL NEWS

ಇಲ್ಲಿ ಎಮ್ಮೆ ಓಡತೈತಿ….ಅಲ್ಲಿ ಕುರಿ ಜಿಗಿತೈತಿ ನೋಡ್ಲ ಮಗಾ…..!!!!

  ಬೆಳಗಾವಿ- ಬೆಳಗಾವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಡಿಫ್ರಂಟ್ ಆಗಿ ಆಚರಣೆ ಮಾಡುತ್ತಾರೆ,ಮನೆಗಳ ಎದುರು ಹಾಕಿರುವ ರಂಗೋಲಿ ಚಿತ್ರಣ ದೀಪಾವಳಿ ಹಬ್ಬದ ರಂಗು ದುಪ್ಪಟ್ಟು ಮಾಡುತ್ತದೆ. ಈ ಬಾರಿ ಕೋವೀಡ್ ಇದ್ದರೂ ಜನರ ಉತ್ಸಾಹ,ಸಡಗರ,ಸಂಬ್ರಮಕ್ಕೆ ಕೊರತೆ ಇರಲಿಲ್ಲ. ಸರ್ಕಾರ ಪಟಾಕಿ ಬ್ಯಾನ್ ಮಾಡಿದ್ರೂ ಮಕ್ಕಳು ಮನೆಗಳ ಮುಂದೆ ಸುರಸುರಿ ಸುರಿಸಿ,ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಬ್ರಮಿಸಿದರು. ಅಂಗಡಿಗಳಿಗೆ ಮಾಡಿದ ದೀಪಾಲಂಕಾರ,ಮನೆಗಳ ಅಂಗಳದಲ್ಲಿ ಹಚ್ಚಿದ ಹಣತೆಗಳ ಬೆಳಕು,ದೀಪಾವಳಿ ಹಬ್ಬದ ಮೆರಗು ಹೆಚ್ಚಿಸಿದವು,ಮರಾಠಾ ಸಮಾಜದವರು …

Read More »

ನಾಳೆ ಬೆಳಗಾವಿಯಲ್ಲಿ ಸ್ಮಾರ್ಟ್ ಆಸ್ಪತ್ರೆ, ಸ್ಮಾರ್ಟ್ ಗಾರ್ಡನ್ ಉದ್ಘಾಟನೆ….

ಬೆಳಗಾವಿ, – ಇಲ್ಲಿನ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಮಂಗಳವಾರ (ನ.17) ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಶಾಸಜ ಅನಿಲ್ ಬೆನಕೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಸಂಸದರು, ರಾಜ್ಯಸಭೆ ಸದಸ್ಯರು, …

Read More »

ರಾಯಣ್ಣನ ಮೂರ್ತಿಯ ಮೇಲೆ ಜೋತಾಡಿದ ಹುಚ್ಚ….

ಬೆಳಗಾವಿ- ಪೀರನವಾಡಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪಕ್ಕಕ್ಕೆ ಇರುವ ಧ್ವಜ ಸ್ತಂಭ ಏರಿದ ಮಾನಸಿಕ ಅಸ್ವಸ್ಥನೊಬ್ಬ ಹುಚ್ಚಾಟ ನಡೆಸಿದ ಘಟನೆ ನಡೆದಿದೆ. ಆತ ಮಾನಸಿಕ ಅಸ್ವಸ್ಥ ಧ್ವಜದ ಕಂಬ ಏರಿದ ಆತ ರಾಯಣ್ಣನ ಶಿರದ ಮೇಲೆ ಕಾಲಿಟ್ಟು ಹುಚ್ಚಾಟ ನಡೆಸಿದ್ದಾನೆ. ಹುಚ್ಚನ ಹುಚ್ಚಾಟವನ್ನು ಮೋಬೈಲ್ ನಲ್ಲಿ ಶೂಟ್ ಮಾಡಿರುವ ರಾಯಣ್ಣನ ವಿರೋಧಿಗಳು,ಹುಚ್ಚಾಟ ಮಾಡಲಿ ,ನಮಗೂ ಅದೇ ಬೇಕಾಗಿದೆ,ಆ ಹುಚ್ಚ ಏನಾದ್ರೂ ಮಾಡಿಕೊಳ್ಳಲಿ ಅವನಿಗೆ ತಡೆಯಬೇಡಿ ಅಂತಾ ಹೇಳಿದ್ದು ವಿಡಿಯೋದಲ್ಲಿ …

Read More »

ಮರಾಠಾ ಪ್ರಾಧಿಕಾರ, ಎಂಈಎಸ್ ಬಾಯಿಗೆ ಬೀಗ….!

ಬೆಳಗಾವಿ- ಬೆಳಗಾವಿ ಗಡಿಭಾಗದಲ್ಲಿ ಹಾಗೂ, ರಾಜ್ಯದ ಇತರ ಪ್ರದೇಶಗಳಲ್ಲಿ ಲಕ್ಷಾಂತರ ಮರಾಠಾ ಸಮಾಜದವರು,ಕನ್ನಡ ನೆಲ,ಜಲ,ಭಾಷೆಗೆ ಗೌರವ ಕೊಟ್ಟು,ಬದುಕುತ್ತಿದ್ದಾರೆ,ಎಲ್ಲ ಮರಾಠಾ ಸಮಾಜದ ಬಾಂಧವರು ಕನ್ನಡ ವಿರೋಧಿಗಳು ಅಲ್ಲ,ಹೀಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ವಿರೋಧ ಮಾಡುವದು ಸರಿಯಲ್ಲ. ಕರ್ನಾಟಕದಲ್ಲಿರುವ ಮರಾಠಾ ಸಮಾಜದವರು,ಜಾತಿಯಿಂದ ಮರಾಠಾ ಆಗಿದ್ದರೂ ಅವರೆಲ್ಲರೂ ಮಾತನಾಡುವದು,ಕನ್ನಡ ,ಬೆಳಗಾವಿಯಲ್ಲಿಎಂ ಈ ಎಸ್,ಮತ್ತು ಶಿವಸೇನೆಯ ನಾಯಕರು ಮತ್ತು ಕಾರ್ಯಕರ್ತರನ್ನು ಹೊರತುಪಡಿಸಿದರೆ,ಉಳಿದವರು,ಕನ್ನಡ ಪ್ರೇಮಿಗಳೇ ಆಗಿದ್ದು ಅವರೆಲ್ಲರೂ ಕನ್ನಡ ನೆಲಕ್ಕೆ ಗೌರವ ಕೊಟ್ಟು,ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಹಲವಾರು …

Read More »

ಪಿಕನಿಕ್ ಗೆ ಹೋಗಿದ್ದ ಇಬ್ಬರು ಯುವಕರು ನೀರು ಪಾಲು…

ಬೆಳಗಾವಿ – ಪಿಕನಿಕ್ ಮಾಡಲು ಹಾಲತ್ರಿ ಹಳ್ಳಕ್ಕೆ ಹೋಗಿದ್ದ ಖಾನಾಪೂರದ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿದೆ. ಉಮರ ಖಲೀಫಾ ,,,16 ವರ್ಷ, ಅರಫಾತ ಅರಕಾಟಿ 16 ವರ್ಷ ಇಬ್ಬರೂ ಖಾನಾಪೂರದ ಯುವಕರಾಗಿದ್ದು,ಇವರು ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ಖಾಬಾಪೂರದ ಅಸೋಗಾ ಬಳಿ ಇರುವ ಹಾಲತ್ರಿ ಹಳ್ಳ,ಮಲಪ್ರಭಾ ನದಿಯ ಉಗಮ ಸ್ಥಾನದಲ್ಲಿ ಇಬ್ಬರು ಯುವಕರ ಶವಗಳು ಪತ್ತೆಯಾಗಿವೆ. ಒಟ್ಟು ಮೂರು ಜನ ಯುವಕರು ಪಿಕನಿಕ್ ಗಾಗಿ ಖಾನಾಪೂರದಿಂದ …

Read More »

ಮತ್ತೇ ಮೀಸೆ ತಿರುವಿದ ಕತ್ತಿ ಸಾಹುಕಾರ್…

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾಗಿ,ರಮೇಶ್ ಕತ್ತಿ ,ಉಪಾದ್ಯಕ್ಷರಾಗಿ ಢವಳೇಶ್ವರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು. ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕು ಶತಮಾನೋತ್ಸವ ಆಚರಿಸುವ ಸಂಧರ್ಭದಲ್ಲಿ ಈ ಬ್ಯಾಂಕಿನ ಚುನಾವಣೆ ನಡೆಯಬಾರದು,ಅವಿರೋಧ ಆಯ್ಕೆ ಆಗಬೇಕೆನ್ನುವದು ಬಿಜೆಪಿ ಪಕ್ಷದ ವರಿಷ್ಠರ ಅಭಿಪ್ರಾಯ ವಾಗಿತ್ತು ಹೀಗಾಗಿ ಈ ಹಿಂದೆ ಅದ್ಯಕ್ಷರಾಗಿದ್ದ ರಮೇಶ್ ಕತ್ತಿ,ಮತ್ತು,ಉಪಾದ್ತಕ್ಷರಾಗಿ,ಢವಳೇಶ್ವರ ಅವರನ್ನು …

Read More »

ಪ್ರಕಾಶ್ ಹುಕ್ಕೇರಿ ಹೇಳಿಕೆಗೆ ಕವಟಗಿಮಠ ಟಾಂಗ್…

ಬೆಳಗಾವಿ-ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಟ್ರೆ ,ನನ್ನ ಮಗನನ್ನು ಗೆಲ್ಲಿಸಿದ ಹಾಗೆ,ಅವರನ್ನೂ ಗೆಲ್ಲಿಸುತ್ತೇನೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ನೀಡಿರುವ ಹೇಳಿಕೆಗೆ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ್ ಕವಡಗಿಮಠ ಟಾಂಗ್ ಕೊಟ್ಟಿದ್ದಾರೆ. ಚಿಕ್ಕೋಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕಾಶ್ ಹುಕ್ಕೇರಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ,ಕಾಂಗ್ರೆಸ್ ಪಕ್ಷದಿಂದ ಅವರು ಪಡೆದುಕೊಂಡಿರುವಷ್ಟು ಲಾಭವನ್ನು ಅಧಿಕಾರವನ್ನು ಬೇರೆ ಯಾರೂ ಪಡೆದುಕೊಂಡಿಲ್ಲ ಅವರು ಬಿಜೆಪಿ …

Read More »

ಮುಸುಕಿನ ಗುದ್ದಾಟಕ್ಕೆ ಇಂದು ಬಿಗ್ ಬ್ರೇಕ್…..!

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಕಳೆದ ಒಂದು ತಿಂಗಳಿನಿಂದ ನಡೆದಿರುವ ಗುದ್ದಾಟಕ್ಕೆ ಇಂದು ಹನ್ನೊಂದು ಗಂಟೆಗೆ ತೆರೆ ಬೀಳಲಿದೆ ನಿನ್ನೆ ರಾತ್ರಿ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಎರಡು ಗಂಟೆಗಳ ಕಾಲ ಬಿಜೆಪಿ ನಾಯಕರು ಮೀಟೀಂಗ್ ಮಾಡಿ,ಕರಾರು ಒಪ್ಪಂದಗಳ ಮೂಲಕ ಒಮ್ಮತಕ್ಕೆ ಬಂದಿದ್ದು ಇಂದು 10-30 ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಚ ಉಪಾದ್ಯಕ್ಷರ ಹೆಸರುಗಳನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ. …

Read More »

ಸಿಟಿ ರವಿ ಅವರಿಗೆ ಮೂರು ರಾಜ್ಯಗಳ ಬಿಜೆಪಿ ಉಸ್ತುವಾರಿ…..

ಬೆಳಗಾವಿ – ಬಿಜೆಪಿ ಪಕ್ಷದ ಸಂಘಟನಾ ಚತುರ,ವಾಗ್ಮಿ ಸಿಟಿ ರವಿ ಅವರು ಮೂರು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಗೋವಾ,ಮಹಾರಾಷ್ಟ್ರ,ಮತ್ತು ತಮಿಳುನಾಡು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ಸಿಟಿ ರವಿ ಅವರು ನೇಮಕಗೊಂಡಿದ್ದಾರೆ.ಸಿಟಿ ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡ ಬೆನ್ನಲ್ಲಿಯೇ ಅವರು ಈಗ ಮೂರು ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿದ್ದಾರೆ.

Read More »

ರಮೇಶ್ ಗೆ ರಮೇಶ್ ಸಾಥ್ …ಒಳಗೆ ಮೀಟೀಂಗ್ ನಲ್ಲಿ ಖಾಸ್ ಬಾತ್…!!!

ಬೆಳಗಾವಿ-ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಾಳೆ ನಡೆಯಲಿದ್ದು ಈಗ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕೆಲವು ನಿರ್ದೇಶಕರು ರಮೇಶ್ ಕತ್ತಿ ಅವರ ಪುನರಾಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಹಿರಿಯ ನಾಯಕರು, ಬೆಳಗಾವಿಯಲ್ಲಿ ಸಭೆ ಸೇರಿದ್ದಾರೆ. ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ‌, ಮಾಜಿ ಸಚಿವ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ‌, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಸಂಸದ …

Read More »