Breaking News

LOCAL NEWS

ರಾಜಪ್ಪನವರು ಬರೀತಾರೆ,ಪೋಲೀಸ್ ಲಹರಿ….!

ಬೆಳಗಾವಿ -ಕರ್ನಾಟಕ ರಾಜ್ಯ ಪೊಲೀಸ್ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಿವೃತ್ತ ಡಿಐಜಿಪಿ ಡಾ.ಡಿ.ಸಿ.ರಾಜಪ್ಪ ಅವರ ಸಂಪಾದಕತ್ವದಲ್ಲಿ ಪೊಲೀಸ್ ಲಹರಿ ಮಾಸಪತ್ರಿಕೆ ಬಿಡುಗಡೆ ಸಮಾರಂಭ ನ.4 ರಂದು ಬೆಂಗಳೂರಿನ ಸೀನಿಯರ್ ಪೊಲೀಸ್ ಆಫೀರ‍್ಸ್ ಮೆಸ್‌ನ ಸಭಾಂಗಣದಲ್ಲಿ ಜರುಗಲಿದೆ. ಪೊಲೀಸ್ ಲಹರಿ ಮಾಸಪತ್ರಿಕೆಯ ಬಿಡುಗಡೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರದ ಪೊಲೀಸ್ ಆಯುಕ್ತ ಕಮಲ್ ಪಂಥ್ …

Read More »

ಹಳ್ಳದ, ಹೆಸರು ನೋಡಿ,300,ಎಕರೆ ಹಳ್ಳ ಹಿಡಿಸಿದ್ರು

ಬೆಳಗಾವಿ- ಪಾಪ ಈ ರೈತರು ಏನೂ ತಪ್ಪು ಮಾಡಿಲ್ಲ,ಇವರ ಹೆಸರು ಹಳ್ಳದ ಇರುವದೇ ದೊಡ್ಡ ತಪ್ಪಾಗಿದೆ, ಹಳ್ಳದ ಎನ್ನುವ ಹೆಸರು ಇರುವ ಉತಾರಗಳಲ್ಲಿ,ಹಳ್ಳ ಸೇರಿ ,300 ಎಕರೆಗೂ ಹೆಚ್ಚು ಜಮೀನು,ಸರ್ಕಾರಿ ಜಮೀನು ಎಂದು ಪರಿವರ್ತನೆಯಾಗಿದೆ. ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ,ಹಳ್ಳದ ಎಂಬ ಹೆಸರಿನಲ್ಲಿರುವ 300 ಎಕರೆಗೂ ಹೆಚ್ಚು ಜಮೀನು ಈಗ ಸರ್ಕಾರಿ ಜಮೀನು ಎಂದು ದಾಖಲಾಗಿದ್ದು ಹಳ್ಳದ ಕುಟುಂಬಗಳ ರೈತರು ನ್ಯಾಯ ದೊರಕಿಸಿಕೊಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಈ ಅವಘಡ …

Read More »

ಪಂಚಾಯತಿ ಚುನಾವಣೆಗೆ ಬಿಜೆಪಿ ತಯಾರಿ

ಬೆಳಗಾವಿಬರುವ ಸ್ಥಳೀಯ ಮಟ್ಟದ ಚುನಾವಣೆ ಬಿಜೆಪಿಗೆ ಮಹತ್ವವಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ, ಕೇಂದ್ರ ಸರಕಾರದ ಮಹತ್ತರ ಯೋಜನೆಯನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಸೋಮವಾರ ನಗರದ ಧರ್ಮನಾಥ ಭವನದಲ್ಲಿ ಬೆಳಗಾವಿ ಗ್ರಾಮಾಂತರ, ಮಹಾನಗರ ಮತ್ತು ಚಿಕ್ಕೋಡಿ ಜಿಲ್ಲೆಯ ಪ್ರಮುಖರ ಪ್ರಶಿಕ್ಷಣ ವರ್ಗದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2014ರ ಬಳಿಕ …

Read More »

ಅರವಿಂದ ಪಾಟೀಲ್ ರನ್ನು, ಬಿಜೆಪಿ ಕರೆದುಕೊಂಡ ಬರ್ತಿವಿ

  ಬೆಳಗಾವಿ- ಅರವಿಂದ ಪಾಟೀಲ್ ರನ್ನು ಶೀಘ್ರದಲ್ಲೇ ಬಿಜೆಪಿ ಕರೆದುಕೊಂಡ ಬರ್ತಿವಿ,ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ರಾಜ್ಯೋತ್ಸವದ ಧ್ವಜಾರೋಹಣದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದ ಸಚಿವರು ಕರಾಳ ದಿನಾಚರಣೆ ಆಚರಣೆ ಮಾಡುವ ವಿಚಾರ. ಅವರು ಏನೇ ಕರಾಳ ದಿನಾಚರಣೆ ಆಚರಣೆ ಮಾಡಿದ್ರೆ ತಲೆ ಕೆಡಿಸಿಕೊಳ್ಳಬೇಡಿ, ಅದಕ್ಕೆ ಮಹತ್ವ ಕೊಡಬೇಕಿಲ್ಲ ಅದನ್ನ ದೊಡ್ಡದಾಗಿ ತೋರಿಸುವ ಅವಶಕತೆ ಇಲ್ಲಾ ಅಂದ್ರು ಸಾಹುಕಾರ್ ರಮೇಶ್ ಜಾರಕಿಹೊಳಿ ಎಂಇಎಸ್ ಮಾಜಿ …

Read More »

ಬೆಳಗಾವಿಯಲ್ಲಿ ಕನ್ನಡದ ಕಲರ್,ಅಭಿಮಾನದ ಪವರ್….

ಬೆಳಗಾವಿ-ಇಂದು ರಾಜ್ಯೋತ್ಸವ,ಕನ್ನಡಿಗರ ಹಬ್ಬ,ಈ ದಿನ ಕೋವೀಡ್ ಹಿನ್ನಲೆಯಲ್ಲಿ ಅನೇಕ ನಿರ್ಬಂಧ ಇದ್ದರೂ ಸಹ ,ಹಬ್ಬದ ಅದ್ದೂರಿ ತನಕ್ಕೆ ಅದು ಅಡ್ಡಿಯಾಗಲಿಲ್ಲ,ಅಭಿಮಾನದ ಕೊರತೆ ಕಾಣಲಿಲ್ಲ,ಬೆಳಗಾವಿಯ ಕಣ,ಕಣವೂ ಕನ್ನಡ ಕನ್ನಡ ಎನ್ನುವ ವಾತಾವರಣ ಬೆಳಗಾವಿಯಲ್ಲಿ ಕಂಡಿತು. ಸುರ್ಯೋಧಯ ಆಗುವದಷ್ಟೇ ತಡ ಕನ್ನಡದ ಅಭಿಮಾನಿಗಳು ಝೇಂಡಾ ಹಾರಿಸುತ್ತ,ಜೈ ಕರ್ನಾಟಕ ಎಂದು ಘೋಷಣೆ ಕೂಗುತ್ತ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡರು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಹೂವಿನ ಹಾರಹಾಕಿ ಗೌರವ ಸಮರ್ಪಿಸುವ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತುಎಲ್ಲಿ ನೋಡಿದಲ್ಲಿ …

Read More »

ಬೆಳಗಾವಿ ಪಾಲಿಕೆಯ ಮೇಲೆ ಹಾರಾಡಿದ ಕನ್ನಡದ ಬಾವುಟ

  ಬೆಳಗಾವಿ- ಬೆಳಗಾವಿಯ ಕನ್ನಡದ ಕಸ್ತೂರಿ ಎಂದೇ ಕರೆಯಲ್ಪಡುವ ಕಸ್ತೂರಿ ಭಾವಿ ನೇತ್ರತ್ವದಲ್ಲಿ ಕನ್ನಡದ ಯುವಕರು ಬೆಳಗಾವಿ ‌ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜಾರೋಹಣ,ಮಾಡಿದ ಘಟನೆ ಮದ್ಯರಾತ್ರಿ ನಡೆದಿದೆ. ಕನ್ನಡ ಪರ ಹೋರಾಗಾರರಿಂದ ಧ್ವಜಾರೋಹಣ ನಡೆದಿದ್ದು ಇದೇ‌ ಮೊದಲ ಬಾರಿಗೆ ಪಾಲಿಕೆ ‌ಮೇಲೆ ಕನ್ನಡ ಧ್ವಜ ಹಾರಾಡಿದೆ. ಯುವಕ ರವಿ ಬೋವಿ ಸೇರಿ ಅನೇಕರಿಂದ ಧ್ವಜಾರೋಹಣ ನಡೆದಿದೆ. ಪಾಲಿಕೆ ಮೇಲೆ ಕನ್ನಡ ಧ್ವಜಕ್ಕಾಗಿ ಶಪಥ ‌ಮಾಡಿದ್ದ‌ ತಾಯಿ. ಕಸ್ತೂರಿ ಭಾವಿ …

Read More »

ಮರವಣಿಗೆ,ಐತೇನ್ರೀ…ಡಾಲಬೀ ಬರತೈತಿ ಏನ್ರೀ….ನಾವೂ ಬೆಳಗಾವಿಗೆ ಬರಬಹುದೇನ್ರೀ….???

ಬೆಳಗಾವಿ- ಕೋವೀಡ್ ಹಿನ್ನಲೆಯಲ್ಲಿ ಈ ಬಾರಿ ಬೆಳಗಾವಿ ನಗರದಲ್ಲಿ ಮೆರವಣಿಗೆಯೂ ಇಲ್ಲ,ಡಾಲಬೀ ಸೌಂಡು ಇಲ್ಲ,ಡ್ಯಾನ್ಸೂ ಇಲ್ಲ, ಅಂತಾ ಹೋ ಕೊಂಡ್ರೂ ನಮ್ಮ ಹುಡುಗೋರು,ಫೋನ್ ಮಾಡಿ,ಬೆಳಗಾವಿ ಬಂದು ಚನ್ನಮ್ಮನ ಮೂರ್ತಿಗೆ ಹೂವಿನ ಹಾರ ಹಾಕಿ,ಹೋದ್ರ ನಡಿತೈತಿ ಏನ್ರೀ ಅಂತ ಫೋನ್ ಮಾಡಾಕ ಹತ್ಯಾರ….. ರಾತ್ರಿ ಹನ್ನೆರಡ ಗಂಟೆಗೆ ಕೈಯ್ಯಾಗ ಝೇಂಡಾ ಹಿಡ್ಕೊಂಡ ಗಾಡಿ ಎಕ್ಸಿಲೇಟರ್ ತಿರವಿ ಜೈ..ಜೈ ಅಂತ ಕೂಗುತ್ತ ನಮ್ಮ ಹುಡುಗೋರ ,ಚನ್ನಮ್ಮ ಸರ್ಕಲ್ ಕಡೆ ಬರೋದನ್ನ ನೋಡಿದ್ರ,ಅಭಿಮಾನವನ್ನು ಯಾರೂ …

Read More »

ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಕಿತ್ತೂರು ಕೋಟೆಯ ಲುಕ್….!

  ಬೆಳಗಾವಿ- ಮೈಸೂರಿನಲ್ಲಿ ಪಳಗಿ ಬಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಅವರು ಸದ್ದಿಲ್ಲದೇ ಬೆಳಗಾವಿಯ ಐತಿಹಾಸಿಕ ಚನ್ನಮ್ಮ ವೃತ್ತಕ್ಕೆ ವೀರರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಸೂಚಿಸು ಲುಕ್ ನೀಡುತ್ತಿದ್ದಾರೆ. ಮೈಸೂರು ಮಾದರಿಯಲ್ಲೇ ಚನ್ನಮ್ಮಾಜಿಯ ಹೋರಾಟದ ಚಿತ್ರಣ,ಕಿತ್ತೂರು ಕೋಟೆಯ ಗತವೈಭವ ಮರಕಳಿಸುವ ಅಲಂಕಾರವನ್ನು ಚನ್ನಮ್ಮನ ಮೂರ್ತಿಯ ನಾಲ್ಕು ದಿಕ್ಕುಗಳಲ್ಲಿ ಬೇರೆ,ಬೇರೆ ಚಿತ್ರಗಳನ್ನು ಅಳವಡಿಸಿ,ಈ ವೃತ್ತಕ್ಕೆ ಹೊಸ ಮೆರಗು ನೀಡುತ್ತಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಈ ವರ್ಷ …

Read More »

ಬಳಸಿದಷ್ಟು ಬೆಳೆದೀತು ಕನ್ನಡ ಭಾಷೆ” ಸಾಹಿತಿಗಳ ಅಭಿಮತ

ಬೆಳಗಾವಿ, -ಇಂಗ್ಲಿಷ್ ಮೋಹದಲ್ಲಿ‌ ಕನ್ನಡದ ಅಸ್ಮಿತೆ ಕಳೆದುಹೋಗಬಾರದು; ಬರೀ ಹೋರಾಟ, ಭಾಷಣದಿಂದ ಭಾಷೆ ಬೆಳೆಯುವುದಿಲ್ಲ; ಅದರ ಜತೆಗೆ ಬಳಕೆಯಿಂದ ಭಾಷೆ ಉಳಿಸೋಣ; ಗಡಿ ಗಟ್ಟಿಗೊಳಿಸಲು ಕನ್ನಡ ಶಾಲೆ ಗಟ್ಟಿಗೊಳಿಸುವುದರ ಜತೆಗೆ ಇಂಗ್ಲಿಷ್ ನ ಮಮ್ಮಿಯ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕನ್ನಡದ “ಅವ್ವ”ನನ್ನು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸೋಣ….! ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶನಿವಾರ (ಅ.31) ನಡೆದ ” ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಾಗಿರುವುದು …

Read More »

ಡಿಸಿಸಿ ಬ್ಯಾಂಕ್ ಚುನಾವಣೆ, ಮೂರು ಕ್ಷೇತ್ರಗಳಲ್ಲಿ ಡಿಶ್ಯುಂ ಡಿಶ್ಯುಂ

ಬೆಳಗಾವಿ-ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ‌ ಜಂಟಿ ಸುದ್ದಿಗೋಷ್ಠಿ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ‌ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಕಳೆದ ಒಂದು ವಾರದಿಂದ ಬ್ಯಾಂಕ್ ಚುನಾವಣೆ ಅವಿರೋಧ ಆಯ್ಕೆ ಮಾಡಲು ಕಸರತ್ತು ನಡೆಸಿದ್ದೇವು. ವೈಮನಸ್ಸು ತಪ್ಪಿಸಲು ಅವಿರೋಧ ಆಯ್ಕೆ ಒತ್ತು ಕೊಟ್ಟಿದ್ದೇವು. ಪಕ್ಷದ ಮುಖಂಡರು ಇದೇ ಸೂಚನೆಯನ್ನು ನೀಡಿದ್ದರು. ಜಾರಕಿಹೊಳಿ‌, ಸವದಿ ಹಾಗೂ ಕತ್ತಿ ಕುಟುಂಬ ಒಟ್ಟಿಗೆ ಬರಬೇಕು ನಿರ್ಧಾರ …

Read More »