Breaking News

LOCAL NEWS

ರಾಜಧಾನಿ ರಾಜಕೀಯ, ದೆಹಲಿಯಲ್ಲಿ ಸಾಹುಕಾರ್ ಸಂತೋಷ….!!

ಬೆಳಗಾವಿ- ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ಹಿರಿಯ ನಾಯಕರಾದ ಬಿ.ಎಲ್ ಸಂತೋಷ್ ಅವರನ್ನು ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ ಜಾರಕಿಹೊಳಿ ಅವರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಭೇಟಿಮಾಡಿ ಸಮಾಲೋಚನೆ ನಡೆಸಿದರು. ಕಳೆದ ಆರು ತಿಂಗಳಿನಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾನ್ಯ ಶ್ರೀ ಬಿ ಎಲ್ ಸಂತೋಷ್ ಜಿ ಅವರಿಗೆ ವಿವರಿಸಿದರು ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು …

Read More »

ಕಳ್ಳರೂ ಹೈಟೆಕ್ ಆಗಿದ್ದಾರೆ,ಬೆಳಗಾವಿಯಲ್ಲಿ ಎರಡು ಹೊಸ ಇನ್ನೋವಾ ಕಾರು ದೋಚಿದ್ದಾರೆ.

ಬೆಳಗಾವಿ-ಎಲ್ಲರೂ ಡಿಜಿಟಲ್ ಇಂಡಿಯಾ ಮಂತ್ರ ಜಪಿಸುತ್ತಿದ್ದಾರೆ,ಪೇಪರ್ ಲೆಸ್ ವ್ಯೆವಹಾರ ಮಾಡುತ್ತಿದ್ದಾರೆ,ನಾವ್ಯಾಕೆ ಸುತ್ತಿಗೆ ರಾಡ್ ಬಳಿಸಿ ಕಳ್ಳತನ ಮಾಡಬೇಕು,ನಾವೂ ಡಿಜಿಟಲ್ ಆಗಿದ್ದೇವೆ,ನಾವೂ ಹೈಟೆಕ್ ಆಗಿದ್ದೇವೆ ಅಂತಾ ಕಳ್ಳರು ಸಾಬೀತು ಮಾಡಿದ್ದಾರೆ ,ಅಧುನಿಕ ತಂತ್ರಜ್ಞಾನ ಬಳಿಸಿ,ಬೆಳಗಾವಿಯಲ್ಲಿ ಎರಡು ಹೊಸ ಇನ್ನೋವಾ ಕ್ರಿಸ್ಟಾ ಕಾರುಗಳನ್ನು ದೋಚಿದ್ದಾರೆ. ದಸರಾ ಹಬ್ಬದ ಸಂಧರ್ಭದಲ್ಲಿ ಖರೀಧಿ ಮಾಡಿ,ಪೂಜೆ ಮಾಡಿ ಒಂದೆರಡು ರೌಂಡ್ ಹಾಕಿ ಮನೆ ಮುಂದೆ ನಿಲ್ಲಿಸಿದ ಎರಡು ಹೊಸ ಇನ್ನೋವಾ ಕಾರುಗಳನ್ನು ಕಳುವು ಮಾಡಿದ ಘಟನೆ ಬೆಳಗಾವಿಯ …

Read More »

ಮರಾಠಿ ಅಭಿನಂದನಾ ಫಲಕಗಳ ವಿರುದ್ಧ ಬೆಳಗಾವಿಯಲ್ಲಿ ಬ್ಲ್ಯಾಕ್ ವಾರ್….!!!

ಬೆಳಗಾವಿ- ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು,ಈ ಪ್ರಾಧಿಕಾರವನ್ನು ಸ್ವಾಗತಿಸಿ,ಸರ್ಕಾರವನ್ನು ಅಭಿನಂಧಿಸಿದಚ ಮರಾಠಿ ಫಲಕಗಳು ಈಗ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿವೆ. ಬೆಳಗಾವಿಯಲ್ಲಿ ಸರ್ಕಾರದ ಕ್ರಮವನ್ನು ಸ್ವಾಗತಿಸಿ,ಸರ್ಕಾರವನ್ನು ಅಭಿನಂಧಿಸಿ ,ಅಲ್ಲಲ್ಲಿ,ಮರಾಠಿ ಭಾಷೆಯಲ್ಲೇ ಅಭಿನಂದನಾ ಫಲಕಗಳನ್ನು ಹಾಕಲಾಗಿದ್ದು ,ಈ ಫಲಕಗಳೇ ಈಗ ಕನ್ನಡ ಅಭಿಮಾನಿಗಳಿಗೆ ಟಾರ್ಗೆಟ್ ಆಗಿವೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಶಾಸಕ ಅಭಯ ಪಾಟೀಲ,ಶಾಸಕ ಅನೀಲ ಬೆನಕೆ ಅವರ ಭಾವಚಿತ್ರ ಹಾಕಿ ,ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಸರ್ಕಾರಕ್ಕೆ ಅಭಿನಂಧಿಸಿದ್ದಾರೆ,ಈ …

Read More »

ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗೆ ಕೊರೋನಾ…

ಬೆಳಗಾವಿ- ಸರ್ಕಾರ ಡಿಗ್ರಿ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದೆ,ಬೆಳಗಾವಿ ನಗರದಲ್ಲಿ ಕಾಲೇಜು ಬೋಧನಾ ಸಿಬ್ಬಂಧಿಗಳ ಕೊರೋನಾ ಟೆಸ್ಟಿಂಗ್ ನಡೆಯುತ್ತಿದೆ. ಬೆಳಗಾವಿ ನಗರದ ಮೂರು ಪ್ರತಿಷ್ಠಿತ ಕಾಲೇಜುಗಳ ಆರು ಜನ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಡವಾಗಿದೆ‌. ಬೆಳಗಾವಿ ನಗರದಲ್ಲಿ ಈಗಾಗಲೇ 2027 ಕಾಲೇಜು ಸಿಬ್ಬಂಧಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು,250 ಜನರ ರಜಲ್ಟ್ ಬಂದಿದ್ದು 250 ಜನರಲ್ಲಿ ಬೆಳಗಾವಿ ನಗರದ ಮೂರು ಕಾಲೇಜುಗಳ ಆರು ಜನ ಸಿಬ್ಬಂದಿಗೆ ಮಹಾಮಾರಿ ಕೊರೋನಾ ತಗಲುದ್ದು …

Read More »

ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ, ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ರದ್ದು…

ಬೆಂಗಳೂರು- ಇತ್ತೀಚೆಗಷ್ಟೇ ಆಯ್ಕೆಯಾಗಿ,ಸತ್ಕಾರ ಸಮಾರಂಭಗಳಲ್ಲಿ ಬ್ಯುಸಿ ಆಗಿರುವ, ನಗರಸಭೆ,ಪುರಸಭೆ,ಪಟ್ಟಣ ಪಂಚಾಯತಿ, ಅದ್ಯಕ್ಷ ಉಪಾದ್ಯಕ್ಷರಿಗೆ ಹೈಕೋರ್ಟ್ ಶಾಕ್ ನೀಡಿದೆ‌ ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ರದ್ದು ಮಾಡಿ ಆದೇಶ ಹೊರಡಿಸಿದೆ. ಅದ್ಯಕ್ಷ ಉಪಾದ್ಯಕ್ಷರ ಮೀಸಲಾತಿ ಪ್ರಶ್ನಿಸಿ,ಮೀಸಲಾತಿಯ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಲೇರಿದ್ದರು,ಈ ಸಂಧರ್ಭದಲ್ಲಿ ಏಕಸದಸ್ಯ ಪೀಠ ಅದನ್ನು ವಜಾಗೊಳಿಸಿ ನವ್ಹೆಂಬರ್ 2 ರೊಳಗೆ ಚುನಾವಣೆ ನಡೆಸಲು ಸೂಚನೆ ನೀಡಿದ ಹಿನ್ನಲೆಯಲ್ಲಿ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆದಿತ್ತು. ಅದ್ಯಕ್ಷ ಉಪಾದ್ಯಕ್ಷರು ಆಯ್ಕೆಯಾಗಿ ಪದಗ್ರಹಣ ಮಾಡಿದ …

Read More »

ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಸವಾರಿ…..!!

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.ಕೆಪಿಸಿಸಿ ಕಾರ್ಯಾದ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ಅವರು ತಮ್ಮ  ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತಿದ್ದಾರೆ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆಯಲ್ಲೂ ಸಕ್ರೀಯವಾಗಿದ್ದಾರೆ. ಬೆಳಗಾವಿ : ಶಾಸಕರ ಅನುದಾನದಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಗುರುವಾರ ಚಾಲನೆ ನೀಡಿದರು. ಹೆಬ್ಬಾಳ …

Read More »

ಬೆಳಗಾವಿ ಜಿಲ್ಲೆಯ 31 ಸಾವಿರ ರೈತರಿಗೆ 20 ಕೋಟಿ

ಜಿಲ್ಲಾ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ———————————————————— ಶಾಲೆಗಳಲ್ಲಿ ನೀರು, ಶೌಚಾಲಯ; ಅಂಗನವಾಡಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕಟ್ಟುನಿಟ್ಟಿನ ಸೂಚನೆ ಬೆಳಗಾವಿ, –  ಜಿಲ್ಲೆಯ ಪ್ರತಿಶಾಲೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಅದೇ ರೀತಿ ಪ್ರತಿಯೊಂದು ಅಂಗನವಾಡಿ ಕೇಂದ್ರಕ್ಕೂ ವಿದ್ಯುತ್ ಸಂಪರ್ಕ ಒದಗಿಸಬೇಕು. ವಿದ್ಯುತ್ ಸಂಪರ್ಕ ಒದಗಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ …

Read More »

ಮನೆಯಲ್ಲೇ ಇಂದಿರಾ ಅಜ್ಜಿಯ ಜಯಂತಿ ಆಚರಿಸಿದ ರಾಹುಲ್,ಪ್ರಿಯಾಂಕಾ….

ಗೋಕಾಕ್ : ಇಲ್ಲಿನ ಹಿಲ್ ಗಾರ್ಡ್ ನ ಗೃಹ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತಿಯನ್ನು ಅದ್ದೂರಿಯಿಂದ ಗುರುವಾರ ಆಚರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ರವರ ಪುತ್ರ ರಾಹುಲ್, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿವೇಕ ಜತ್ತಿ ಮಾತನಾಡಿ, ಉಕ್ಕಿನ ಮಹಿಳೆ ಎಂದು ಕರೆಯುವ …

Read More »

ಜೈ ಕನ್ನಡ..ಜೈ ಕರ್ನಾಟಕ…ಜೈ ಭುವನೇಶ್ವರಿ…!!

ಬೆಳಗಾವಿ- ಕರ್ನಾಟಕದಲ್ಲಿ ಕನ್ನಡ ಭಾಷೆಗೆ, ಆಗ್ರಸ್ಥಾನ ಸಿಗಬೇಕು,ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ,ಆಗಬೇಕೆಂದು ಕನ್ನಡದ ಅಭಿಮಾನಿಯೊಬ್ಬ ಆಂದ್ರದ ಕಾಂಚಿನಪಳ್ಳಿಯಿಂದ ಪಾದಯಾತ್ರೆ ಮಾಡುತ್ತ ಬೆಳಗಾವಿಗೆ ಬಂದಿದ್ದಾನೆ ಕಳೆದ 20 ದಿನಗಳಿಂದ ಪಾದಯಾತ್ರೆ ಮೂಲಕ ಬೆಳಗಾವಿಗೆ ಆಗಮಿಸಿರುವ ಈ ಅಪ್ಪಟ ಕನ್ನಡದ ಅಭಿಮಾನಿ ,ಹಳದಿ ಕೆಂಪು ಬಣ್ಣದ ಬಟ್ಟೆ ಧರಿಸಿ,ಜೈ ಕರ್ನಾಟಕ,ಜೈ ಭುವನೇಶ್ವರಿ,ಜೈ ಕನ್ನಡ ಎಂಬ ಫಲಕ ಹೊತ್ತುಕೊಂಡಿರುವ ಈ ಅಭಿಮಾನಿ ನಿಪ್ಪಾಣಿಯವರೆಗೂ ಪಾದಯಾತ್ರೆ ನಡೆಸಿ,ಕನ್ನಡದ ಜಾಗೃತಿ ಮೂಡಿಸಲಿದ್ದಾನೆ. ಚಿಕ್ಕಬಳ್ಳಾಪೂರದ ಕೆಎಂಎಫ್ ಡೈರಿಯಲ್ಲಿ ಕೆಲಸ …

Read More »

21 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಟಿಕೆಟ್ ಕಮೀಟಿ ಮೀಟೀಂಗ್ ಫಿಕ್ಸ ….

ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ,ಆದ್ರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವದರ ಬಗ್ಗೆ ಶನಿವಾರ ದಿನಾಂಕ 21 ರಂದು ಬೆಳಗಾವಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಟಿಕೆಟ್ ಫೈನಲ್ ಮಾಡುವದಕ್ಕಾಗಿಯೇ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಅದ್ಯಕ್ಷತೆಯಲ್ಲಿ ಒಂದು ಸಮೀತಿ ರಚಿಸಿದ್ದು ಈ ಸಮೀತಿಯ ಸಭೆ 21 ರಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ ಸಮೀತಿಯ …

Read More »