Breaking News

LOCAL NEWS

—– ಹೋಲಸೇಲ್ ತರಕಾರಿ ಮಾರಾಟಕ್ಕೆ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಸ್ಥಳ ನಿಗದಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಎಪಿಎಂಸಿ ವರ್ತಕರ ಸಭೆ; ನಿಯಮ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ——————————————————————– ಹೋಲಸೇಲ್ ತರಕಾರಿ ಮಾರಾಟಕ್ಕೆ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಸ್ಥಳ ನಿಗದಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಏ.೩(ಕರ್ನಾಟಕ ವಾರ್ತೆ): ಕರೋನಾ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸುವ ದೃಷ್ಟಿಯಿಂದ ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಹೋಲಸೇಲ್ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಲಾಗಿದ್ದು, ಸೋಮವಾರದಿಂದ ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ …

Read More »

100 ಕುಟುಂಬಗಳಿಗೆ ಆಹಾರ ಸಾಮುಗ್ರಿಗಳ ಕಿಟ್ ವಿತರಿಸಿದ ಹುಕ್ಕೇರಿ ಹಿರೇಮಠದ ಶ್ರೀಗಳು

ನಾಳೆ ಬೆಳಗಾವಿ ‌ಹುಕ್ಕೇರಿ ಹಿರೇಮಠದ ಶಾಖೆಯಿಂದ ಅಗತ್ಯ ‌ದಿನಸಿ ಕಾರ್ಯಕ್ರಮ ವಿತರಣೆ ಬೆಳಗಾವಿ ನಗರದ ಹುಕ್ಕೇರಿ ಹಿರೇಮಠ ಶಾಖೆಯ ಸುವಿಚಾರ ಚಿಂತನ ಬಳಗದಿಂದ ಪ್ರತಿ ತಿಂಗಳು ಮೊದಲ ಭಾನುವಾರ ನಡೆಸುವ ಸುವಿಚಾರ ಚಿಂತನ ಕಾರ್ಯಕ್ರಮ ರದ್ದಾಗಿದ್ದು ಅದರ ಬದಲು ಕೊರೋನೊ ವೈರಸ್ ಭೀತಿಯಿಂದ ಪ್ರಧಾನಿ ನರೇಂದ್ರ ‌ಮೋದಿ ಭಾರತವನ್ನು ಲಾಕ್ ಡೌನ ಮಾಡಿದ ಹಿನ್ನೆಲೆಯಲ್ಲಿ ಹುಕ್ಕೇರಿ‌ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಏ.5 ಭಾನುವಾರ ಜಿಲ್ಲಾಧಿಕಾರಿಗಳ ಆದೇಶದಂತೆ …

Read More »

ದೆಹಲಿಗೆ ಹೋಗಿ ಬಂದವರ ೬೨ ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ.ಡಿಸಿ

ಬೆಳಗಾವಿ,- ನವದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಒಟ್ಟು ೬೨ ಜನರಲ್ಲಿ ಯಾರಿಗೂ ರೋಗದ ಲಕ್ಷಣಗಳು ಕಂಡುಬಂದಿಲ್ಲ. ೪೨ ಜನರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ೩೩ ಜನರ ಗಂಟಲು ದ್ರವದ ‌ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಮತ್ತೆ ಯಾರಾದರೂ ಇದ್ದಲ್ಲಿ ತಕ್ಷಣವೇ ಸ್ವಯಂ ಪ್ರೇರಣೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಂಡು ಜಿಲ್ಲಾಡಳಿಕ್ಕೆ ಮಾಹಿತಿಯನ್ನು ನೀಡಬೇಕು. ಮರ್ಕಜ್ …

Read More »

ಬೆಳಗಾವಿ ಜಿಲ್ಲೆಗೆ ಮತ್ತೆ ಸ್ವೀಟ್ ನ್ಯುಸ್ .ಮತ್ತೇ ಆರು ಪ್ರಕರಣಗಳ ವರದಿ ನೆಗೆಟಿವ್-

  ಬೆಳಗಾವಿ, ಏ.೨(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು ಆರು ಮಾದರಿಗಳ ಪೈಕಿ ಎಲ್ಲ ಆರೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಿಂದ ಇದುವರೆಗೆ ಒಟ್ಟು ೨೭ ಮಾದರಿಗಳನ್ನು ಕಳಿಸಲಾಗಿತ್ತು. ಇಂದು ಬಂದಿರುವ ವರದಿಯ ಪ್ರಕಾರ ಎಲ್ಲ ೨೭ ಮಾದರಿಗಳು ನೆಗೆಟಿವ ಬಂದಿರುತ್ತವೆ ಎಂದು‌ ತಿಳಿಸಿದ್ದಾರೆ. ಇದುವರೆಗೆ ೨೧ ಮಾದರಿಗಳ …

Read More »

ಹಿಂಡಲಗಾ ಕಾರಾಗೃದಲ್ಲಿದ್ದ 57 ವಿಚಾರಾಧೀನ ಕೈದಿಗಳಿಗೆ ಜಾಮೀನು.

ಬೆಳಗಾವಿ- ಕೊರೊನಾ ಹರಡುವ ಭೀತಿ ಹಿಂಡಲಗಾ ಜೈಲಿನಿಂದ 57 ಕೈದಿಗಳ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ 57 ಜನ ವಿಚಾರಾಧೀನ ಕೈದಿಗಳಿಗೆ ಜಾಮೀನು ಸಿಕ್ಕಿದೆ. ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ. ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಕೈದಿಗಳಿಗೆ ಜಾಮೀನು ನೀಡಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಜೈಲುಗಳಂತ ಸ್ಥಳಗಳಲ್ಲಿ ಹರಡುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಾಮೀನು ನೀಡಲಾಗಿದೆ. …

Read More »

ದೇಶದಲ್ಲಿ 20 ಸಾವಿರ ಬೋಗಿಗಳು ಐಸೋಲೇಟೆಡ್.

ಬೆಳಗಾವಿ- ಮಹಾಮಾರಿ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲಿ 20 ಸಾವಿರ ರೇಲ್ವೆ ಬೋಗಿಗಳು ಐಸೊಲೇಟೆಡ್ ವಾರ್ಡ್‌ಗಳಾಗಿ ಪರಿವರ್ತನೆ ಮಾಡುವ ಕೆಲಸ ನಡೆದಿದೆ ಎಂದು ರಾಜ್ಯ ರೇಲ್ವೆ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ರೇಲ್ವೆ ಬೋರ್ಡ್‌ಗೆ ಪ್ರಧಾನಿ ಮೋದಿ, ರೇಲ್ವೆ ಸಚಿವ ಪಿಯೂಷ್ ಗೋಯಲ್ ನಿರ್ದೇಶನ ಕೊಟ್ಟಿದ್ದಾರೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿ ಬೋಗಿಗಳನ್ನು ಐಸೊಲೇಟೆಡ್ ವಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ ಹುಬ್ಬಳ್ಳಿಯ ಡಿವಿಜನ್‌‌ಗೆ …

Read More »

ಬೆಳಗಾವಿಯ ನಾಗನೂರು ಶ್ರೀಗಳ ನಡಿಗೆ ಬಡವರ ಕಡೆಗೆ…..!!

ಬೆಳಗಾವಿ- ಕೊರೋನಾ ಲಾಕ್ ಔಟ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಉಪವಾಸ ವನವಾಸ ಅನುಭವಿಸುತ್ತಿರುವ ಕೂಲಿಕಾರರಿಗೆ,ಕಡು ಬಡವರಿಗೆ ಆಹಾರ ಧಾನ್ಯ ಮತ್ತಿತರ ವಸ್ತುಗಳನ್ನು ಪೂರೈಸುವ ದಾನಿಗಳು ಮುಂದೆ ಬರುತ್ತಿದ್ದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ಅವರು ಇಂದು ಐವತ್ತು ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯವನ್ನು ನೀಡಿದ್ದಾರೆ. ಇಂದು ಮುಂಜಾನೆ ಶಿವಬಸವನಗರದ ಮಠದ ಆವರಣದಲ್ಲಿಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಸಾಮಾನುಗಳ ಐವತ್ತು ಚೀಲಗಳನ್ನು ಮಹಾನಗರ …

Read More »

33 ಜನರ ಗಂಟಲು ದ್ರವ ಲ್ಯಾಬ್ ಗೆ ರವಾನೆ. ರಿಪೋರ್ಟ್ ನಿರೀಕ್ಷೆಯಲ್ಲಿ ಜಿಲ್ಲಾಡಳಿತ.

ಬೆಳಗಾವಿ- ಮಹಾರಾಷ್ಟ್ರ,ಗೋವಾ ಗಡಿಗಳನ್ನು ಸಂಪೂರ್ಣವಾಗಿ ಲಾಕೌಟ್ ಮಾಡಿ ನೆಮ್ಮದಿಯಿಂದ ದಿನ ಕಳೆಯುತ್ತಿದ್ದ ಬೆಳಗಾವಿ ಜಿಲ್ಲೆಯಲ್ಲಿ ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಧಾರ್ಮಿಕ ಸಭೆ ವಿಚಾರ ,ಜಿಲ್ಲೆಯ ಜನರಲ್ಲಿ ಭೀತಿ ಹುಟ್ಟಿಸಿದೆ. *ಸಭೆಗೆ ತೆರಳಿದ್ದ 33 ಜನರ ತಪಾಸಣಾ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತವಿದ್ದು ಈ 33 ಜನರ ರಿಪೋರ್ಟ್ ಏನಾಗಬಹುದು ಎಂಬ ಕುತೂಹಲ, ಮತ್ತು ಆತಂಕ ಬೆಳಗಾವಿ ಜನರಲ್ಲಿದೆ. ದೆಹಲಿಯ ಮರ್ಕಜ್ ಧಾರ್ಮಿಕ ಸಭೆಗೆ ಹೋಗಿ ಬಂದ ಬೆಳಗಾವಿ ಜಿಲ್ಲೆಯ …

Read More »

ಸಾರಾಯಿ ಸಿಗಲಿಲ್ಲ ಎಂದು ಇಂದ್ರನ ಪಾದ ಸೇರಿದ ಬೆಳಗಾವಿಯ ದೇವೇಂದ್ರ..

  ಬೆಳಗಾವಿ- ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸರಾಯಿ ಸಾರಾಯಿ ಸಿಗಲಿಲ್ಲ ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿಯ ಅನಗೋಳದ ಬೆಂಡಿಗೇರಿ ಚಾಳದಲ್ಲಿ  ಘಟನೆ.ನಡೆದಿದೆ. ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ದೇವೇಂದ್ರಪ್ಪ ಹಡಪದ(42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಲೂನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ದೇವೇಂದ್ರಪ್ಪ ಹಡಪದ. ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿಯ ನಿವಾಸಿಯಾಗಿರುವ ದೇವೇಂದ್ರಪ್ಪ. ಟಿಳಕವಾಡಿ ಪೊಲೀಸ್ ಠಾಣಾ …

Read More »

ಹೆಬ್ಬಾಳಕರ ಅವರನ್ನು ಟಾಸ್ಕಫೋರ್ಸ ಸಮೀತಿ ಅದ್ಯಕ್ಷ್ಯರನ್ನಾಗಿ ನೇಮಿಸಿದ ಡಿ.ಕೆ ಶಿವಕುಮಾರ್

ಬೆಳಗಾವಿ- ಕೊರೋನಾ ವಿಪತ್ತು ನಿರ್ವಹಣೆಗಾಗಿ ಕೆಪಿಸಿಸಿ ಜಿಲ್ಲಾವಾರು ಟಾಸ್ಕಫೋರ್ಸ ಸಮೀತಿಗಳನ್ನು ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲಾ ಅದ್ಯಕ್ಷರನ್ನಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನೇಮಿಸಿದೆ. ಜಿಲ್ಲಾ ಕಾಂಗ್ರೆಸ್ ಸಮೀತಿಯ ಜಿಲ್ಲಾದ್ಯಕ್ಷರ ಸಹಕಾರದೊಂದಿಗೆ ಈ ಟಾಸ್ಕಫೋರ್ಸ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟಾಸ್ಕಪೋರ್ಸ ಅದ್ಯಕ್ಷರನ್ನು ನೇಮಿಸಿ ಡಿಕೆ ಶಿವಕುಮಾರ್ ಆದೇಶ ಹೊರಡಿಸಿ ಅದ್ಯಕ್ಷರ ಪಟ್ಟಿಯನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಬೆಳಗಾವಿ …

Read More »