ಮನೆಬಾಗಿಲಿಗೆ ದಿನಸಿ ಸಾಮಗ್ರಿ, ತರಕಾರಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೫(ಕರ್ನಾಟಕ ವಾರ್ತೆ): ರಾಷ್ಟ್ರದಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ನಾಗರಿಕರಿಗೆ ದೈನಂದಿನ ಅಗತ್ಯ ಸಾಮಗ್ರಿಗಳಾದ ದಿನಸಿ, ತರಕಾರಿ ಮತ್ತಿತರ ವಸ್ತುಗಳನ್ನು ಮನೆಬಾಗಿಲಿಗೆ ಕಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ (ಮಾ.೨೫) ದಿನಸಿ, ತರಕಾರಿ ವ್ಯಾಪಾರಸ್ಥರು ಹಾಗೂ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು. ಕೋವಿಡ್-೧೯ ವೈರಾಣು ಹರಡುವಿಕೆ ತಡೆಗಟ್ಟಲು …
Read More »ಬೆಳಗಾವಿ ಜಿಲ್ಲೆ: ಹತ್ತೂ ಪ್ರಕರಣಗಳ ವರದಿ ನೆಗೆಟಿವ್-…
ಬೆಳಗಾವಿ ಜಿಲ್ಲೆ: ಹತ್ತೂ ಪ್ರಕರಣಗಳ ವರದಿ ನೆಗೆಟಿವ್- ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಬೆಳಗಾವಿ, ಮಾ.೨೫(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲ್ಲ ಹತ್ತೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದುವರೆಗೆ ಹತ್ತು ಐದು ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಈಗಾಗಲೇ ಐದು ಮಾದರಿಗಳ ವರದಿಗಳು ನೆಗೆಟಿವ್ ಬಂದಿದ್ದವು. ಹೊಸದಾಗಿ ಕಳಿಸಲಾಗಿದ್ದ …
Read More »ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಐವರ ಕೊರೋನಾ ಶಂಕಿತರ ಸ್ಯಾಂಪಲ್ ಕಲೆಕ್ಟ್….
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಒಟ್ಟು ಹತ್ತು ಜನರ ಕೊರೋನಾ ಶಂಕಿತರ ಗಂಟಲು ದ್ರವವನ್ನು ಕಲೆಕ್ಟ್ ಮಾಡಲಾಗಿದ್ದು ಈಗಾಗಲೇ ಐವರ ರಿಪೋರ್ಟ್ ನೆಗೆಟಿವ್ ಬಂದಿದ್ದು ಇನ್ನೂ ಐವರ ಸ್ಯಾಂಪಲ್ ಗಳನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. ಬೆಳಗಾವಿ ಜಿಲ್ಲಾಡಳಿತ ಇಂದು ಸಂಜೆ ಹೆಲ್ತ ಬುಲೆಟಿನ್ ಬಿಡುಗಡೆ ಮಾಡಿದ್ದು,ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಲೇಟೆಸ್ಟ್ ಬುಲಿಟೀನ್ ನಲ್ಲಿ ಈ ವಿಷಯವನ್ನು ತಿಳಿಸಿದೆ . ಬೆಳಗಾವಿ ಜಿಲ್ಲೆಯಲ್ಲಿ ಒಟ್ಡು ಹತ್ತು ಜನ ಶಂಕಿತರ …
Read More »ಮಾರ್ಕಿಂಗ್ ನಲ್ಲಿ ನಿಂತು ಸಾಮಾನು ಖರೀಧಿಸಿದರೆ ನೋ ಪ್ರಾಬ್ಲಂ…..!!
ಬೆಳಗಾವಿ, ಮಾ.೨೫(ಕರ್ನಾಟಕ ವಾರ್ತೆ) ನಗರ ಮತ್ತು ಜಿಲ್ಲೆಯ ವಿವಿಧೆಡೆ ದಿನಸಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದ ಗುರುತು ಮಾಡಲಾಗುತ್ತಿದೆ. ಸಾಮಗ್ರಿಗಳನ್ನು ಖರೀದಿಸಲು ಆಗಮಿಸುವ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್.ಅವರ ನೇತ್ರತ್ವದಲ್ಲಿ ಮಾರ್ಕಿಂಗ್ ಕೆಲಸ ನಡೆದಿದೆ. ಇದೇ ರೀತಿ ಎಲ್ಲ ತಾಲ್ಲೂಕು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರ್ಕಿಂಗ್ …
Read More »ಕೊರೋನಾ ಶಂಕಿತ ಮಹಿಳೆಯ ಸಾವು
ಬೆಂಗಳೂರು- ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಇಂದು ಮೃತಪಟ್ಟಿದ್ದಾಳೆ ಗೌರಿಬಿಂದನೂರಿನ ಈ ಮಹಿಳೆ ಮಕ್ಕಾದಿಂದ ವಾಪಸ್ ಆಗಿದ್ದಳು,ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆಗೆ ಸೊಂಕು ಇರುವದು ,ದೃಡವಾಗಿರುವ ಮೊದಲೇ ಮಹಿಳೆ ಮೃತಪಟ್ಟಿದ್ದಾಳೆ ಒಂಬತ್ತು ದಿನದಿಂದ ಈ ಮಹಿಳೆ ಹೋಮ್ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ,ಸೊಂಕಿನ ಈ ಮಹಿಳೆ ರಾಜೀವ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ
Read More »ಕೋವಿಡ್-೧೯ ನಿಯಂತ್ರಣ: ಕರ್ನಾಟಕ – ಮಹಾರಾಷ್ಟ್ರ ಗಡಿಭಾಗದಲ್ಲಿ ಹೈ ಅಲರ್ಟ
ಬೆಳಗಾವಿ, ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಉಪವಿಭಾಗಧಿಕಾರಿ ರವೀಂದ್ರ ಕಲಿಂಗನ್ನವರ ಇಂದು ಬೋರಗಾಂವ ಚೆಕ್ ಪೋಸ್ಟಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು ಕರ್ನಾಟಕ – ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೋರಗಾಂವ ಪಟ್ಟಣದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದು. ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಬರುವಂತಹ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಹಾಗೂ ಕರ್ನಾಟಕ ರಾಜ್ಯದ ಜನರನ್ನು ಮಹಾರಾಷ್ಟ್ರ ರಾಜ್ಯಕ್ಕೆ ತೆರಳದಂತೆ ತಡೆ ಹಿಡಿಯಲಾಗುತ್ತಿದೆ. ಒಂದೆಡೆಯಲ್ಲಿ ಮಹಾರಾಷ್ಟ್ರ ರಾಜ್ಯದ ದಲ್ಲಿ ಕೋವಿಡ್-೧೯ ಸೋಂಕಿನ …
Read More »ಕ್ವಾರಂಟೈನ್ ವ್ಯಕ್ತಿ ಹೊರಗೆ ಬಂದರೆ ಪ್ರಕರಣ ದಾಖಲಿಸಲು ಸೂಚನೆ”
ವಿ, ಮಾ. ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೂ ಕಡ್ಡಾಯವಾಗಿ ಸ್ಟ್ಯಾಂಪಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ(ಮಾ.೨೪) ಜಿಲ್ಲೆಯ ಎಲ್ಲ ತಾಲ್ಲೂಕಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಕ್ವಾರಂಟೈನ್ ಒಳಪಟ್ಟಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. …
Read More »ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ….!!!
*”ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ”* *ನಾನಳಲು ನಗಿಸುವವರ್ಯಾರಿಲ್ಲಿ?!* ‘ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ’ ಕವಿ ಡಿ.ಎಸ್. ಕರ್ಕಿ ಹೇಳಿದ ಕವಿವಾಣಿ ಪ್ರಜಾಪ್ರಭುತ್ವದ ನಾಲ್ಕನೆ ಕಂಬ ಎನಿಸಿರುವ ಪತ್ರಿಕೆ ಹಾಗೂ ವಿದ್ಯುನ್ಮಾಣ ಮಾಧ್ಯಮಕ್ಕೆ ಅನ್ವಯಿಸುತ್ತದೆ ಎನ್ನುವುದಕ್ಕೆ ಬೀದಿ ಬೀದಿ ಸುತ್ತಾಡಿ ಮಹಾಮಾರಿ ಕೊರಾನಾ ಸೋಂಕಿನ ಬಗ್ಗೆ ಇಂಚಿಂಚು ವರದಿ ಮಾಡುತ್ತಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಜನರ ಹತ್ತಿರ ಹೋಗಿ ಸೋಂಕಿನ ವಸ್ತುಸ್ಥಿತಿಯ ವರದಿಯಲ್ಲಿ …
Read More »ವಾಸ್ಕೋ- ನಿಜಾಮುದ್ದೀನ್ ,ರೈಲಿನಲ್ಲಿ ಚಾಕಲೇಟ್ ಗ್ಯಾಂಗ್ ಅರೆಸ್ಟ್….
ಬೆಳಗಾವಿ- ವಾಸ್ಕೋ ನಿಜಾಮುದ್ದೀನ್ ರೈಲಿನ ಜನರಲ್ ಡಬ್ಬಿಯಲ್ಲಿ ಪ್ರವಾಸ ಮಾಡಿ,ಇತರ ಪ್ರಯಾಣಿಕರೊಂದಿಗೆ,ಫ್ರೆಂಡ್ ಶೀಪ್ ಮಾಡಿ ಅವರಿಗೆ ಮತ್ತಿನ ಚಾಕಲೇಟ್ ನೀಡಿ ಪ್ರಯಾಣಿಕರನ್ನು ಲೂಟಿ ಮಾಡುತ್ತಿದ್ದ ಚಾಕಲೇಟ್ ಗ್ಯಾಂಗ್ ರೇಲ್ವೆ ಪೋಲೀಸರ ಬಲೆಗೆ ಬಿದ್ದಿದೆ. ರೈಲಿನಲ್ಲಿ ಪ್ರಯಾಣಿಕನೊಬ್ಬನಿಗೆ,ಮತ್ತಿನ ಚಾಕಲೇಟ್ ಕೊಟ್ಟು ಆತನಿಗೆ ಸಮೋಸಾ ತಿನ್ನಿಸಿ,ಆತನ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದ,ಬಿಹಾರ ಮೂಲದ ಮೂವರು ದರೋಡೆಕೋರ ರನ್ನು ಬೆಳಗಾವಿ ರೆಲ್ವೆ ಪೋಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಮಹ್ಮದ ಮುಕ್ತಾರ,ಶಾದಾಬ್,ಮತ್ತು ಅನ್ವರ್ …
Read More »ಕೊರೋನಾ: ಬೆಳಗಾವಿ ಜಿಲ್ಲೆಯ ಐವರು ಶಂಕಿತರಲ್ಲಿ ಇಬ್ಬರ ರಿಪೋರ್ಟ್ ನೆಗೆಟಿವ್….
ಬೆಳಗಾವಿ- ಬೆಳಗಾವಿ ಜಿಲ್ಲೆಯ ಐವರು ಸ ಕೊರೋನಾ ಶಂಕಿತರ ಗಂಟಲು ದ್ರವ ವನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು ಐವರಲ್ಲಿ ಇಬ್ಬರು ಶಂಕಿತರ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಬೈಲಹೊಂಗಲದ ಕೊರೋನಾ ಶಂಕಿತ,ಹಾಗೂ ಇನ್ನೊಬ್ಬ ಶಂಕಿತನ ನೆಗೆಟಿವ್ ರಿಪೋರ್ಟ್ ಬಂದಿದ್ದು ಬೈಲಹೊಂಗದ ಜನ ನಿಟ್ಟಿಸಿರು ಬಿಡುವಂತಾಗಿದೆ ಐವರಲ್ಲಿ ಇಬ್ಬರು ಶಂಕಿತರ ರಿಪೋರ್ಟ್ ಮಾತ್ರ ಬಂದಿದ್ದು ಇನ್ನೂ ಮೂವರ ಶಂಕಿತರ ರಿಪೋರ್ಟ್ ಬರುವಿಕೆಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
Read More »