Breaking News

LOCAL NEWS

ಐದು ಲಕ್ಷ ರೂ ಪರಿಹಾರ ನೀಡಲು ಸಿಎಂ ಯಡಿಯೂರಪ್ಪ ನವರಿಗೆ ಅಂಜಲಿ ನಿಂಬಾಳ್ಕರ್ ಒತ್ತಾಯ

ಐದು ಲಕ್ಷ ರೂ ಪರಿಹಾರ ನೀಡಲು ಸಿಎಂ ಯಡಿಯೂರಪ್ಪ ನವರಿಗೆ ಅಂಜಲಿ ನಿಂಬಾಳ್ಕರ್ ಒತ್ತಾಯ ಬೆಳಗಾವಿ- ಇಟಗಿ – ಬೋಗೂರು ಗ್ರಾಮದ ಮದ್ಯದಲ್ಲಿರುವ ಹಳ್ಳಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಆರು ಜನ ಕೃಷಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಪರಿಹಾರ ನೀಡುವಂತೆ ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿಯಾದ ಅಂಜಲಿ ನಿಂಬಾಳ್ಕರ್ ಮೃತ ಪಟ್ಟವರೆಲ್ಲರೂ ಕೃಷಿ ಕೂಲಿ ಕಾರ್ಮಿಕರಾಗಿದ್ದು ಬಡವರಾಗಿದ್ದಾರೆ, …

Read More »

ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ…

ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ… ಬೆಳಗಾವಿ- ಡಿಸಿಎಂ ಲಕ್ಷ್ಮಣ ಸವದಿಯ ಪಾವರ್ ಗೆ ಕತ್ತರಿ ಹಾಕುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದು ಇಷ್ಟು ದಿನ ಲಕ್ಷ್ಮಣ ಸವದಿ ಹತ್ತಿರವೇ ಇದ್ದ ಕೃಷಿ ಖಾತೆಯನ್ನು ಬಸವರಾಜ ಬೊಮ್ಮಾಯಿಗೆ ನೀಡಲಾಗಿದೆ. ಇಂದು ಹತ್ತು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂಧರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಇಲಾಖೆಯನ್ನು ಪರಮಾಪ್ತ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ ‌ ಬಸವರಾಜ ಬೊಮ್ಮಾಯಿ …

Read More »

ಯಡಿಯೂರಪ್ಪನವರ ಸ್ಥಾನ ನನಗೆ ಸಿಗಲೇ ಬೇಕು,ನಾನು ಮುಖ್ಯಮಂತ್ರಿ ಆಗಲೇ ಬೇಕು ಈ ದಿಸೆಯಲ್ಲಿ ನನ್ನ ಪ್ರಯತ್ನ ಇದ್ದೇ ಇದೆ- ಉಮೇಶ್ ಕತ್ತಿ

ಬೆಳಗಾವಿ- ಸಚಿವ ಸಂಪುಟ ವಿಸ್ತರಣೆಯ ಬಳಿಕ ಮಾಜಿ ಮಂತ್ರಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮೌನ ಮುರಿದಿದ್ದಾರೆ.ನಾನು ಸೀನಿಯರ್ ಹದಿಮೂರು ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನ ನನಗೆ ಸಿಗಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದೇನೆ.ದೇವರ ಆಶಿರ್ವಾದ ಇದ್ದರೆ ರಾಜ್ಯದ ಮುಖ್ಯಮಂತ್ರಿಯೂ ಆಗುತ್ತೇನೆ.ಎಂದು ಉಮೇಶ್ ಕತ್ತಿ ಹೇಳಿದ್ದಾರೆ. ಹುಕ್ಕೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಮಾಧ್ಯಮಗಳಿಗೆ ಉಮೇಶ ಕತ್ತಿ ತಮ್ಮ ಮನದಾಳದ …

Read More »

ರಮೇಶ್ ಜಾರಕಿಹೊಳಿಗೆ ನೀರಾವರಿ, ಶ್ರೀಮಂತ ಪಾಟೀಲರಿಗೆ ಜವಳಿ ಖಾತೆ..

  ಬೆಳಗಾವಿ- ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹತ್ತು ಜನ ಮಂತ್ರಿಗಳಿಗೆ ಖಾತೆಗಳ ಹಂಚಿಕೆಯಾಗಿದ್ದು ಹಠವಾದಿ ರಮೇಶ್ ಜಾರಕಿಹೊಳಿ ಕೊನೆಗೂ ಜಲಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿ ಹದಿನೇಳು ಸಚಿವರನ್ನು ಕಟ್ಟಿಕೊಂಡು,ಹೊಸ ಸರ್ಕಾರ ರಚನೆಯಲ್ಲಿ ಮುಖ್ಯಪಾತ್ರ ವಹಿಸಿ,ನೀರಾವರಿ ಮಂತ್ರಿಯಾಗುವ ಹಠ ಸಾಧಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿ ಯಾಗಿದ್ದಾರೆ. ಜಲಸಂಪನ್ಮೂಲ ಖಾತೆ ಪಡೆದಿರುವ ರಮೇಶ್ ಜಾರಕಿಹೊಳಿ ಅವರೇ ಬೆಳಗಾವಿ …

Read More »

ರಮೇಶ್ ಜಾರಕಿಹೊಳಿ, ಸಂಜಯ ಪಾಟೀಲರಲ್ಲಿ ಕ್ಷಮೆಯಾಚಿಸಿದ್ದು ಯಾಕೆ ಗೊತ್ತಾ…?

ರಮೇಶ್ ಜಾರಕಿಹೊಳಿ, ಸಂಜಯ ಪಾಟೀಲಗೆ ಕ್ಷಮೆಯಾಚಿಸಿದ್ದು ಯಾಕೆ ಗೊತ್ತಾ…? ಬೆಳಗಾವಿ- ಗೋಕಾಕಿನಲ್ಲಿ ನಡೆದ ಸಚಿವ ರಮೇಶ್ ಜಾರಕಿಹೊಳಿ ಅವರ ಅಭಿನಂದನಾ ಸಮಾವೇಶ ಅನೇಕ ಪ್ರಸಂಗಗಳಿಗೆ ಸಾಕ್ಷಿಯಾಯಿತು ಪರಸ್ಪರ ಕ್ಷಮೆ ಕೋರುವ ವೇದಿಕೆಯೂ ಇದಾಗಿತ್ತು ಆರಂಭದಲ್ಲಿ ಮಾಜಿ ಶಾಸಕ ಸಂಜಯ ವಯ ಪಾಟೀಲ ಮಾತನಾಡಿ ,ನಾನು ಮಾಜಿ ಆಗಲು ರಮೇಶ್ ಜಾರಕಿಹೊಳಿ ಅವರೇ ಕಾರಣ , ಅವರು ಬಿಜೆಪಿಗೆ ದ ನಂತರ ನನಗೆ ಗೊತ್ತಾಯಿತು ಅವರ ಮನಸ್ಸಿನಲ್ಲಿ ಕಪಟ ಇಲ್ಲಾ ಅನ್ನೋದು,ಅವರು …

Read More »

ಇಪ್ಪತ್ತು ವರ್ಷದಲ್ಲಿ ಸತೀಶ್ ಮಾಡದ ಕೆಲಸವನ್ನು ಎರಡೇ ವರ್ಷದಲ್ಲಿ ಮಾಡಿ ತೋರಿಸಿದ್ದೇನೆ- ರಮೇಶ್ ಜಾರಕಿಹೊಳಿ

ಬೆಳಗಾವಿ-ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಗೋಕಾಕಿಗೆ ಆಗಮಿಸಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ,ನನಗೆ ಬಂದ ಸಂಕಷ್ಟ ವೈರಿಗೂ ಬರಬಾರದು,ರಾಜಕೀಯದಲ್ಲಿ ನಾವು ನಡೆದಿದ್ದೇ ದಾರಿ ಅಂದುಕೊಂಡರೆ ತಪ್ಪು ಸಂಜಯ ಪಾಟೀಲ ವಿಷಯದಲ್ಲಿ ನಾನು ತಪ್ಪು ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಅದನ್ನು ಸರಿ ಪಡಿಸುತ್ತೇನೆ,ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ.ಅವರು ವಿರೋಧ ಮಾಡದಿದ್ರೆ ಈಷ್ಟೆಲ್ಲಾ ಬೆಳವಣಿಗೆ ನಡೆಯಲು ಸಾದ್ಯವಾಗುತ್ತಿರಲಿಲ್ಲ,ದೇವರ ದಯೆ,ಕ್ಷೇತ್ರದ ಜನರ ಆಶಿರ್ವಾದದಿಂದ ಯಶಸ್ಸು ಸಿಕ್ಕಿದೆ …

Read More »

ಸ್ಟೇರಿಂಗ್ ಲಾಕ್ ಆಗಿ ಸೇತುವೇ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿತ್ತು….!!!

ಸ್ಟೇರಿಂಗ್ ಲಾಕ್ ಆಗಿ ಸೇತುವೇ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿತ್ತು….!!! ಬೆಳಗಾವಿ- ಇಂದು ಬೆಳಗಿನ ಜಾವ ಆ ಬಡಜೀವಿಗಳು ಬದುಕಿನ ಬಂಡಿ ಸಾಗಿಸಲು ಮನೆಯಲ್ಲಿ ಚಹಾ ಕುಡಿದು,ಬುತ್ತಿ ಕಟ್ಟಿಕೊಂಡು ಕಬ್ನು ಕಟಾವು ಮಾಡಲು ಟ್ರ್ಯಾಕ್ಟರ್ ನಲ್ಲಿ ಬೋಗೂರು ಗ್ರಾಮದಿಂದ ಇಟಗಿ ಗ್ರಾಮಕ್ಕೆ ಹೊರಟಿರುವಾಗ ಈ ಟ್ರ್ಯಾಕ್ಟರಿನ ಸ್ಟೇರಿಂಗ್ ಲಾಕ್ ಆಗಿ ಹಳ್ಳಕ್ಕೆ ಬಿದ್ದು ಆರು ಜನ ಕೃಷಿ ಕೂಲಿ ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ. ಟ್ರ್ಯಾಕ್ಟರ್ ನಲ್ಲಿ ಬರೊಬ್ಬರಿ 23 …

Read More »

ವಿಟಿಯು ೧೯ ನೇ ಘಟಿಕೋತ್ಸವ: ಮಹಿಮಾ ರಾವ್ ಗೆ ೧೩ ಚಿನ್ನದ ಪದಕ

ವಿಟಿಯು ೧೯ ನೇ ಘಟಿಕೋತ್ಸವ: ಮಹಿಮಾ ರಾವ್ ಗೆ ೧೩ ಚಿನ್ನದ ಪದಕ ———————————————————————– ಸೃಜನಶೀಲತೆ, ಕೌಶಲ್ಯತೆಗೆ ವಿಫುಲ ಉದ್ಯೋಗಾವಕಾಶ: ಪ್ರೊ.ಅಗರವಾಲ್ ಬೆಳಗಾವಿ, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಸೃಜಶೀಲತೆಗೆ ಹೆಚ್ಚಿನ ಮಹತ್ವ ಇರುವುದರಿಂದ ಕಲೆ, ವಿಜ್ಞಾನ, ವಾಣಿಜ್ಯ ಅಥವಾ ಔದ್ಯೋಗಿಕ ಹೀಗೆ ಯಾವುದೇ ಕ್ಷೇತ್ರವಿದ್ದರೂ ಹೊಸತನಕ್ಕೆ ತೆರೆದುಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್.ಬಿ.ಎ.)ಯ ಅಧ್ಯಕ್ಷರಾದ ಪ್ರೊ.ಕೆ.ಕೆ.ಅಗರವಾಲ್ ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ “ಜ್ಞಾನಸಂಗಮ” ಆವರಣದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ …

Read More »

ಇಟಗಿ ಬಳಿ ಟ್ರ್ಯಾಕ್ಟರ್ ಪಲ್ಟಿ ಆರು ಜನರ ದುರ್ಮರಣ

ಇಟಗಿ ಬಳಿ ಟ್ರ್ಯಾಕ್ಟರ್ ಪಲ್ಟಿ ಆರು ಜನರ ದುರ್ಮರಣ ಬೆಳಗಾವಿ- ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಆರು ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಟಗಿ ಬೋಗುರ್ ನಡುವೆ ನಡೆದಿದೆ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮವಾಗಿ ಆರು ಜನರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ . ಸ್ಥಳಕ್ಕೆ ನಂದಗಡ ಪೋಲೀಸರು ದೌಡಾಯಿಸಿದ್ದು ಹಲವು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ.

Read More »

ಹೆಲಿಕಾಪ್ಟರ್ ಮೂಲಕ ರವಿವಾರ ಗೋಕಾಕಿಗೆ ರಮೇಶ್ ಜಾರಕಿಹೊಳಿ….!!

ಹೆಲಿಕಾಪ್ಟರ್ ಮೂಲಕ ರವಿವಾರ ಗೋಕಾಕಿಗೆ ರಮೇಶ್ ಜಾರಕಿಹೊಳಿ….!! ಬೆಳಗಾವಿ- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಮಾಡಿದ ಸಂಕಲ್ಪವನ್ನು ಈಡೇರಿಸಿ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ರಮೇಶ್ ಜಾರಕಿಹೊಳಿ ರವಿವಾರ ಹೆಲಿಕಾಪ್ಟರ್ ಮೂಲಕ ಗೋಕಾಕಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ರವಿವಾರ ಬೆಳಿಗ್ಗೆ ಗೋಕಾಕಿಗೆ ಆಗಮಿಸುವ ಅವರು ತಂದೆ,ತಾಯಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನಗಳನ್ನು ಸಲ್ಲಿಸಿ ಆಶಿರ್ವಾದ ಪಡೆಯಲಿದ್ದಾರೆ ನಂತರ ಅಭಿಮಾನಿ ಕಾರ್ಯಕರ್ತರನ್ನು ಭೇಟಿಯಾಗಿ ಬೆಳಗಾವಿಯ ರಾಣಿ ಚನ್ನಮ್ಮ …

Read More »