Breaking News

Breaking News

ಡಿಸಿಸಿ ಬ್ಯಾಂಕ್ ಚುನಾವಣೆ, ಕತ್ತಿ,ಬ್ರದರ್ಸ್,ಜಾರಕಿಹೊಳಿ ಬ್ರದರ್ಸ್ ನಡುವೆ ಗುದ್ದಾಟ…..!!!!

ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ತೆರವಾದ ಒಂದು ಸ್ಥಾನಕ್ಕಾಗಿ ಜಾರಕಿಹೊಳಿ ಬ್ರದರ್ಸ್ ಮತ್ತು ಕತ್ತಿ ಬ್ರದರ್ಸ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ.ಈ ವಿಚಾರದಲ್ಲಿ ಮಾಜಿ ಡಿಸಿಂ ಲಕ್ಷ್ಮಣ ಸವದಿ ಅವರ ನಡೆ ನಿರ್ಣಾಯಕವಾಗಲಿದ್ದು ಇಂದು ಮತದಾನ ನಡೆಯುತ್ತಿದೆ.ಡಿಸಿಸಿ ಬ್ಯಾಂಕ್ ಎದುರು ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ. ಬೆಳಗಾವಿ: ಡಿಸಿಸಿ ಬ್ಯಾಂಕ್‌‌ನ ನಿರ್ದೇಶಕರ ತೆರವಾದ ಒಂದು ಕ್ಷೇತ್ರಕ್ಕೆ ಇಂದು ಮತದಾನ ನಡೆಯಲಿದ್ದು ಒಂದೇಒಂದು ಸೀಟು ಪಡೆಯಲು ಬೆಳಗಾವಿ ನಾಯಕರು ಕಸರತ್ತು ನಡೆಸಿದ್ದಾರೆ .ಜಾರಕಿಹೊಳಿ …

Read More »

ಬೆಳಗಾವಿಯ ನಡು ರಸ್ತೆಯಲ್ಲೇ ಮಹಿಳೆಯ ಮರ್ಡರ್….

ಬೆಳಗಾವಿ- ಬೆಳಗಾವಿ ಮಹಾನಗರದ ಪ್ರವೇಶ ದ್ವಾರದ ಬಳಿ ನಡು ರಸ್ತೆಯಲ್ಲಿ ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಮಧ್ಯಾಹ್ನ ನಡೆದಿದೆ. ಪತಿಯಿಂದಲೇ ಪತ್ನಿ ಮೇಲೆ ಮಾರಾಕಾಸ್ತ್ರದಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು,ಬೆಳಗಾವಿಯ ಕೋಟೆ ಕರೆ ಬಳಿ ಮಧ್ಯಾಹ್ನ ಎರಡು ಗಂಟೆ ವೇಳೆ ಘಟನೆ ನಡೆದಿದೆ. 24 ವರ್ಷದ ಹೀನಾ ಕೌಸರ್ ಮೇಲೆ ಪತಿ ಮಂಜೂರ್‌ನಿಂದ ಹಲ್ಲೆ ನಡೆದಿದೆ.ಆರೋಪಿ ಪತಿ ಮಂಜೂರ್ ಇಲಾಹಿ ನದಾಫ್ …

Read More »

ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪದವೀಧರರು…

ಬೆಳಗಾವಿ ಜಿಲ್ಲೆಯ ಅರಭಾಂವಿಯಲ್ಲಿ ಅತೀ ಹೆಚ್ಚು,ಯಮಕನಮರ್ಡಿ ಕ್ಷೇತ್ರದಲ್ಲಿ ಅತೀ ಕಡಿಮೆ ಪದವೀಧರರು ಬೆಳಗಾವಿ:ವಾಯುವ್ಯ ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜಯಪುರ ಬೆಳಗಾವಿ ಬಾಗಲಕೋಟೆ ಬರುತ್ತಿದ್ದು ಈ ಮೂರು ಜಿಲ್ಲೆಗಳ ಪೈಕಿ ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪದವೀಧರ ಮತದಾರರಿದ್ದಾರೆ. ಪದವೀಧರರ ಮತದಾರರ ಇವತ್ತಿನ ಪಟ್ಟಿ ಪ್ರಕಾರ ಒಟ್ಟು 73,509 ಮತದಾರರಿದ್ದು ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು 31,293 ಪದವೀಧರರು ಬಾಗಲಕೋಟೆ ಜಿಲ್ಲೆಯಲ್ಲಿ 27,196 ಹಾಗೂ ವಿಜಯಪುರ ಜಿಲ್ಲೆಯಲ್ಲಿ 15020 ಪದವೀಧರ ಮತದಾರ …

Read More »

ರೆಸಿಡೆನ್ಸಿಯಲ್..‌ಕಮರ್ಷಿಯಲ್ ಟ್ಯಾಕ್ಸ್ ಹೆಚ್ಚಿಸಬೇಡಿ…

ಬೆಳಗಾವಿ ನಗರದ ಅಂಗಡಿ ಹಾಗೂ ಮನೆ ಕರಗಳನ್ನು ಹೆಚ್ಚಿಸಬಾರದೆಂದು ಶಾಸಕ ಅನಿಲ ಬೆನಕೆ ಒತ್ತಾಯ :  ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆಯು ಇತ್ತಿಚೆಗೆ ಅಂಗಡಿ ಹಾಗೂ ಮನೆಗಳ ಕರಗಳನ್ನು ಈ ಹಿಂದಿನಗಿಂತಲು 3 ರಿಂದ 5 ಪಟ್ಟು ಹೆಚ್ಚು ಮಾಡಿರುವ ವಿಷಯ ತಿಳಿದ ಅವರು ಇಂದು ಮಹಾನಗರ ಪಾಲಿಕೆ ಆಯುಕ್ತರನ್ನು ಬೇಟಿ ಮಾಡಿ 2 ರಿಂದ 3 ವರ್ಷಗಳ ಕಾಲ ಅತೀವೃಷ್ಟಿ ಹಾಗೂ ಕೋರೋನಾ …

Read More »

ಮಹಿಳಾ,ಬೀದಿ ವ್ಯಾಪಾರಿಗಳಿಗೆ ವಿಶ್ರಾಂತಿ,ಶೌಚಾಲಯಗಳ ವಿಚಾರದಲ್ಲಿ ಕ್ರಾಂತಿ…

ಬೆಳಗಾವಿ, ಮಾ.23(ಕರ್ನಾಟಕ ವಾರ್ತೆ): ಮಹಾನಗರ ಪಾಲಿಕೆಯ 2022-23 ನೇ ಸಾಲಿನಲ್ಲಿ 6.31 ಲಕ್ಷಗಳಷ್ಟು ಉಳತಾಯ ಆಯವ್ಯಯವನ್ನು ಮಂಡಿಸಲಾಗಿದೆ. ಮಹಾನಗರ ಪಾಲಿಕೆಯ 2022-23 ನೇ ಸಾಲಿನಲ್ಲಿ 44,765.22 ಲಕ್ಷಗಳಷ್ಟು ಅಂದಾಜು ಆದಾಯ ನಿರೀಕ್ಷಿಸಲಾಗಿದ್ದು, ಸಮರ್ಪಕವಾಗಿ ಬಜೆಟ್ ಬಳಕೆ ಮಾಡಲಾಗುವುದು ಪಾಲಿಕೆಯ ಆಡಳಿತಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಅವರು ತಿಳಿಸಿದರು. ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಬುಧವಾರ (ಮಾ.23) ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು …

Read More »

ಇದು ರೆಡಿ ಆಗಿದ್ದು ಇಲ್ಲೇ…ಪೋಸ್ಟ್ ಆಗಿದ್ದು ಅಲ್ಲೇ….ಸಂಜಯ ರಾವುತನ ಹುಚ್ಚಾಟ ನಾ..ಒಲ್ಲೇ…!!!

ವ್ಯಂಗ್ಯ ಚಿತ್ರ ಬಿಡಿಸಿದ್ದು ಇಲ್ಲೇ ಟ್ವಿಟರ್ ಎಂಟ್ರಿ ಆಗಿದ್ದು ಅಲ್ಲೇ..ಸಂಜಯ ರಾವುತನ ಆಟ ನಾ..ಒಲ್ಲೇ…!! ಬೆಳಗಾವಿ- ಮಹಾರಾಷ್ಟ್ರದಲ್ಲಿ ಮರಾಠಿಗರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಶಿವಸೇನೆ ಬೆಳಗಾವಿ ಗಡಿ ವಿಚಾರವನ್ನು ಕೆಣಕಿ, ಮುಗ್ದ ಮರಾಠಿಗರ ದಿಕ್ಕು ತಪ್ಪಿಸುವ ದುಸ್ಸಹಾಸ ಮಾಡುವ ಕಾರ್ಯ ಮಾಡುತ್ತಿದೆ. ಸ್ವಾಭಿಮಾನಿ ಕನ್ನಡಿಗರ ಮತ್ತೆ ಕೆಣಕಿದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬೆಳಗಾಂವ ಫೈಲ್ಸ್’ ಅಂತಾ ಟ್ವಿಟ್ಟರ್‌ನಲ್ಲಿ ವಿವಾದಿತ ಪೋಸ್ಟ್ ಮಾಡಿ,ಮತ್ತೆ ಕಾಲು ಕೆದರಿ ಜಗಳಾಡುವ ಪುಂಡಾಟಿಕೆ …

Read More »

ಧಿಡೀರ್ ದೆಹಲಿಗೆ ಹಾರಿದ ರಮೇಶ್ ಜಾರಕಿಹೊಳಿ…..!!!!

ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆಳವಣಿಗೆಗಳ ಬೆನ್ನಲ್ಲೇ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಧಿಡೀರ್ ದೆಹಲಿಗೆ ಹಾರಿದ್ದು ,ಸಾಹುಕಾರ್ ನಡೆ ತೀವ್ರ ಕುತೂಹಲ ಮೂಡಿಸಿದೆ. ಇಂದು ಬೆಳಿಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಿಂದ ದೆಹಲಿಗೆ ತೆರಳಿದ ಅವರು ಇಂದು ಸಂಜೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸಂಪುಟ ಪುನಾರಚನೆ,ಅಥವಾ ವಿಸ್ತರಣೆ ಯುಗಾದಿ ಹಬ್ಬ ಮುಗಿದ ಬಳಿಕ ಎಪ್ರಿಲ್ …

Read More »

ಸಂಜೆ, ಸಂಗೀತದಲ್ಲಿ ರಂಗೇರಿದ ಸ್ವರಲೋಕ….

ಡಿಕೆ ಮೋಟಿವ್ ಆಶ್ರಯದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ರಂಗಬರಸೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅಭಯ್ ಪಾಟೀಲ..! ಬೆಳಗಾವಿ: ಹಿರಿಯ ಪತ್ರಕರ್ತ ದಿಲೀಪ್ ಕುರುಂದವಾಡೆ ನೇತೃತ್ವದಲ್ಲಿ ಮುನ್ನೆಡೆಯುತ್ತಿರುವ ಡಿಕೆ ಮೋಟಿವ್ ಆಶ್ರಯದಲ್ಲಿ ಹೋಳಿ ಹಬ್ಬದ ಪ್ರಯುಕ್ತ ರಂಗಬರಸೆ ಕಾರ್ಯಕ್ರಮವನ್ನು ಬಲೂನ ಹಾರಿಸುವ ಮೂಲಕ ಶಾಸಕರಾದ ಅಭಯ್ ಪಾಟೀಲ, ಅನಿಲ ಬೆನಕ ಹಾಗೂ‌ ಡಿಸಿ ಎಂ.ಜಿ.ಹಿರೇಮಠ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ‌ಕಾರ್ಯಕ್ರಮದಲ್ಲಿ ಉದ್ಘಾಸಿ ಮಾತನಾಡಿದ ಶಾಸಕ ಅಭಯ್ …

Read More »

ಯಾವ ಬಸ್ ಎಲ್ಲಿ ಹೋಗತೈತಿ ಯಾವಾಗ ಬರತೈತಿ ನಿಮಗ ಗೊತ್ತಾಗತೈತಿ…!!

ಬೆಳಗಾವಿ- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸ ಯೋಜನೆಗಳು, ಕಾರ್ಯ ಚಟುವಟಿಕೆಗಳು , ಮತ್ತು ಹೊಸ ಮಾರ್ಗಗಳು, ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆ, ಸಂಸ್ಥೆಯ ವತಿಯಿಂದ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸೌಲಭ್ಯಗಳು ವಿದ್ಯಾರ್ಥಿ ಪಾಸುಗಳು, ಮತ್ತು ವಿವಿಧ ಮಾದರಿಯ ರಿಯಾಯಿತಿ ಪಾಸುಗಳು, ಪ್ರಾಸಂಗಿಕ ಕರಾರಿನ ಮೇಲೆ ಬಸ್ಸುಗಳನ್ನು ಪಡೆಯುವದು, ಸಾರ್ವಜನಿಕರ ಕುಂದುಕೊರತೆಗಳು, ಬಸ್ ನಿಲ್ದಾಣಗಳ ಸಂಪರ್ಕ ದೂರವಾಣಿ ಸಂಖ್ಯೆಗಳು, ಸಂಸ್ಥೆಯ ವ್ಯಾಪ್ತ್ತಿಯಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಪಟ್ಟ …

Read More »

ಕ್ಯಾಮರಾ ಇಲ್ಲದ ಜೈಲಿನಿಂದ ಪರಾರಿಯಾದ ಖೈದಿ…

ಬೈಲಹೊಂಗಲ- ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣದಲ್ಲಿ ಬಂಧಿಸಲಾದ ವಿಚಾರಣಾಧೀನ ಖೈದಿ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಖಾದಿರಸಾಬ ಮದಾರಸಾಬ ರಾಜೇಖಾನ (೩೪) ಬುಧವಾರ ಮಧ್ಯಾಹ್ನ ಬೈಲಹೊಂಗಲ ಸಬ್ ಜೈಲ್ ದಿಂದ ಪರಾರಿಯಾದ ಘಟಣೆ ನಡೆದಿದೆ. ಕಳೆದ ೧೫ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಈತನನ್ನು ಬಂಧಿಸಿ, ಕಾರಾಗ್ರಹದಲ್ಲಿ ಇಡಲಾಗಿತ್ತು. ಈತನ ಮೇಲೆ ಮುರಗೋಡ ಠಾಣೆಯಲ್ಲಿ ಜಾತಿ ನಿಂದನೆ, ದೊಂಬಿ, ಸೇರಿ ಆರು ಪ್ರಕರಣಗಳು ದಾಖಲಾಗಿವೆ. ರೌಡಿ ಶೀಟರ್ …

Read More »