ಬೆಳಗಾವಿ- ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ,ಪತ್ರಕರ್ತ,ಸಿರಿಗನ್ನಡ ಪ್ರತಿಷ್ಠಾನದ ಸಂಸ್ಥಾಪಕ ಶಶಿಧರ ಘೀವಾರಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸಿರಿಗನ್ನಡ ಪ್ರತಿಷ್ಠಾನದ ಸಂಸ್ಥಾಪಕರಾದ ಅವರು ಕಳೆದ ಎರಡು ದಶಕಕಗಳಿಂದ ,ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡುತ್ತ ಬಂದಿದ್ದ ಅವರು ,ನಾಡೋಜ,ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು.
Read More »ಇಂದು ಬೆಳಗಾವಿಯಲ್ಲಿ ಬಿಜೆಪಿ ಮೀಟೀಂಗ್….ಆಕಾಂಕ್ಷಿಗಳ ಮೀಂಚೀಂಗ್…!
ಬೆಳಗಾವಿ- ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಇಂದು ಸಂಜೆ ನಾಲ್ಕು ಗಂಟೆಗೆ ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಳಗಾವಿಯ ಸಂಕಮ ಹೊಟೇಲ್ ನಲ್ಲಿ ಇಂದು ಬೆಳಗಾವಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ ಈ ಸಭೆಯಲ್ಲಿ ನಳೀನಕುಮಾರ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್ ಅವರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಅಭ್ಯರ್ಥಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚರ್ಚೆ ನಡೆಯದಿದ್ದರೂ …
Read More »ಕೆ.ಕಲ್ಯಾಣ ಅವರ ಪತ್ನಿಯ ಅನಿಸಿಕೆ,ಅಭಿಲಾಶೆ,ಅಭಿಪ್ರಾಯ ಪರಿಗಣಿಸಲಿ….!!
ಕೆ.ಕಲ್ಯಾಣ ಹೆಂಡತಿಯನ್ನು ಮಾದ್ಯಮಗಳ ಎದುರು ಹಾಜರು ಪಡಿಸಲಿ…! ಬೆಳಗಾವಿ- ಪ್ರೇಮ ಕವಿ ಕಲ್ಯಾಣ ಕುಟುಂಬ ಕಲಹ ಮುಗಿಯಬೇಕು,ಪತಿ ಪತ್ನಿ ಒಂದಾಗಬೇಕು,ಸಂಸಾರ ಸುಖವಾಗಿ ಸಾಗಬೇಕು ಎನ್ನುವದು ನಮ್ಮೆಲ್ಲರ ಆಶಯ ಆದರೆ ಕೆ. ಕಲ್ಯಾಣ ಪ್ರಕರಣದಲ್ಲಿ ಬೆಳಗಾವಿ ಪೋಲೀಸರು ಕೇವಲ ಕಲ್ಯಾಣ ಅವರ ಆರೋಪಕ್ಕೆ ಮಾನ್ಯತೆ ನೀಡುತ್ತಿದ್ದಾರೆ,ಕಲ್ಯಾಣ ಅವರ ಪತ್ನಿಯ ಆರೋಪಕ್ಕೆ ಮಾನ್ಯತೆ ನೀಡುತ್ತಿಲ್ಲ ಎನ್ನುವ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ,ಈ ಅನುಮಾನಕ್ಕೆ ಪೋಲೀಸರ ನಡೆ ಪುಷ್ಟಿ ನೀಡಿದಂತೆ ಕಾಣುತ್ತಿದೆ. ಶಿವಾನಂದ ವಾಲಿ …
Read More »K ಕಲ್ಯಾಣ ಕಲಹದಲ್ಲಿ ಪ್ರತ್ಯಕ್ಷನಾದ ಸಯ್ಯದ….!
!ಬೆಳಗಾವಿ- ಪ್ರೇಮ ಕವಿ,ಕೆ.ಕಲ್ಯಾಣ ಕಲಹ ಈಗ ಹೊಸ ತಿರುವು ಪಡೆದುಕೊಂಡಿದೆ,ಈ ಕಲಹದಲ್ಲಿ ಶಿವಾನಂದ ವಾಲಿ,ಮಂತ್ರವಾದಿಯೇ ಆರೋಪಿ ಎಂದು ಮಾದ್ಯಮಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ ಸಯ್ಯದ,ಉರ್ಫ ದೊಡ್ಡಪ್ಪಾ,ಎಂಬಾತ ಪ್ರತ್ಯಕ್ಷವಾಗಿದ್ದಾನೆ. ಆರೋಪಿ ಶಿವಾನಂದ ವಾಲಿಯನ್ನು ಪೋಲೀಸ್ ಕಸ್ಟಡಿಗೆ ಪಡೆದುಕೊಂಡು,ಆತನನ್ನು ವಿಚಾರಣೆಗೊಳಪಡಿಸಲಾಗಿತ್ತು,ಪೋಲೀಸರು ಹೆಚ್ಚಿನ ವಿಚಾರಣೆ ನಡೆಸುವ ಸಂಧರ್ಭದಲ್ಲಿ ಬೀಳಗಿ ಸಮೀಪದ ಗಲಗಲಿಯಲ್ಲಿ ಗಲಿಬಿಲಿಯಾದ ಮಾಹಿತಿಯನ್ನು ಅಲ್ಲಿಯ ಗ್ರಾಮಸ್ಥರೇ ಬೆಳಗಾವಿ ಸುದ್ಧಿಗೆ ಕೊಟ್ಟಿದ್ದಾರೆ ಕೆ. ಕಲ್ಯಾಣ ಆಸ್ತಿ ಕಬಳಿಕೆಯಲ್ಲಿ ಸಯ್ಯದ,ಉರ್ಫ್ ದೊಡ್ಡಪ್ಪ,ಆತನೂ ಪತ್ರಕರ್ತ, ಕೆ,ಕಲ್ಯಾಣ ಕುಟಬದವರ …
Read More »ದರ್ಬಾರ್ ಮಾಡಿದವರು ಜ್ವಾಲಿ,ಮಲಪ್ರಭಾ ಸಕ್ಕರೆ ಕಾರ್ಖಾನೆ ಖಾಲಿ….!
ಬೆಳಗಾವಿ- ಅಕ್ಟೋಬರ್ 14 ರಂದು ಎ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆ ನಡೆಯಲಿದೆ,ಇಷ್ಟು ದಿನ ಈ ಕಾರ್ಖಾನೆಯನ್ನು ಆಳಿದವರು ಜ್ವಾಲಿಯಾಗಿದ್ದರೆ, ಕಾರ್ಖಾನೆ ಮಾತ್ರ ಸಂಪೂರ್ಣವಾಗಿ ಖಾಲಿಯಾಗಿದೆ. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ರಾಣಿ ಶುಗರ್ಸ್ ಎಂದು ಕರೆಯುತ್ತಾರೆ,ಆದ್ರೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಸಾಮ್ರಾಜ್ಯವಿಲ್ಲದ ರಾಣಿ,ಎಂಬಂತಾಗಿದೆ ಈ ಕಾರ್ಖಾನೆಯ ಪರಿಸ್ಥಿತಿ. ಕಾರ್ಖಾನೆಯಲ್ಲಿ ಒಂದು ಚೀಲ ಸಕ್ಕರೆಯೂ ಇಲ್ಲ,ಆದ್ರೆ 25 ಕೋಟಿ ರೂ ರೈತರ ಕಬ್ಬಿನ ಬಿಲ್ ಬಾಕಿಇದೆ.ಈ ಕಾರ್ಖಾನೆ …
Read More »ಬೆಳಗಾವಿಯಲ್ಲಿ ಮಹಿಳಾ ಕಾಂಗ್ರೆಸ್ ನಿಂದ ಮೌನ ಪ್ರತಿಭಟನೆ
ಬೆಳಗಾವಿ ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯ ಹತ್ರಾಸ್‌ನಲ್ಲಿ ನಡೆದ ಘಟನೆಯಿಂದ ಮಹಿಳೆಯರಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ನ ಸರಕಾರದಲ್ಲಿ ಮಹಿಳೆಯರು ಭಯ ಭೀತರಾಗಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿ ಗ್ರಾಮೀಣ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಿದರು. ಬೆಳಗಾವಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ಮಾಡಿದ ಮಹಿಳಾ ಕಾಂಗ್ರೆಸ್, ಉತ್ತರ ಪ್ರದೇಶದ ಮನಿಶಾ ವಾಲ್ಮೀಕಿ 19 …
Read More »ಪ್ರಿಯಾಂಕಾ,ರಾಹುಲ್,ರಾಜಕೀಯಕ್ಕೆ ಬರ್ತಾರೆ….!!
ಬೆಳಗಾವಿ-ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ,ತಮ್ಮ ಇಬ್ಬರು ಮಕ್ಕಳು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ,ಎಂದು ಹೇಳಿದ್ದಾರೆ. ನಾನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೂ,ಹೆಚ್ಚಿನ ಸಮಯವನ್ನು ಸಮಾಜ ಸೇವೆಯಲ್ಲೇ ಕಳೆಯುತ್ತೇನೆ,ಸಮಾಜ ಸೇವೆಯಲ್ಲಿ ಸಿಗುವ ತೃಪ್ತಿ ಬೇರೆ ಯಾವ ಕ್ಷೇತ್ರದಲ್ಲೂ ಸಿಗುವದಿಲ್ಲ.ನನ್ನ ಪುತ್ರ ರಾಹುಲ್,ಪುತ್ರಿ ಪ್ರಿಯಾಂಕಾ ಇಬ್ಬರೂ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ,ಮುಂದಿನ ದಿನಗಳಲ್ಲಿ ಇಬ್ಬರೂ ನಾನು ನಡೆಸುತ್ತಿರುವ ಉದ್ಯಮಗಳ ನಿರ್ವಹಣೆ ಮಾಡುವದರ ಜೊತೆಗೆ ರಾಜಕೀಯ ಕ್ಷೇತ್ರಕ್ಕೂ …
Read More »ಮಹಾರಾಷ್ಟ್ರದಲ್ಲಿ ಬಿಜೆಪಿ ತಂತ್ರಕ್ಕೆ ಸಾಹುಕಾರ್ ಮಂತ್ರ…!!
ಬೆಳಗಾವಿ- ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಮುಖ್ಯಪಾತ್ರವಹಿಸಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮಹಾರಾಷ್ಟ್ರ ಬಿಜೆಪಿಯಿಂದ ಬುಲಾವ್ ಬಂದಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತುರ್ತಾಗಿ ಮುಂಬಯಿ ಗೆ ತೆರಳಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮಹಾರಾಷ್ಟ್ರ ದಲ್ಲಿ ಬಿಜೆಪಿ ಸರ್ಕಾರ ರಚಿಸುವ ಮಹತ್ವದ ಜವಾಬ್ದಾರಿಯನ್ನು ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊಡಲಾಗಿದ್ದು ಅವರು ಎರಡನೇಯ ಬಾರಿ ದೇವೇಂದ್ರ ಫಡ್ನವಿಸ್ ಜೊತೆ ಚರ್ಚೆ …
Read More »ಕೆರೆ ನಿರ್ಮಿಸಲು ಹಂದಿಗನೂರ ಗ್ರಾಮಕ್ಕೆ 22 ಎಕರೆ ಜಮೀನು
ಹಂದಿಗನೂರು ಗ್ರಾಮದ ಕೆರೆ ನಿರ್ಮಾಣಕ್ಕೆ 22 ಎಕರೆ ಸರ್ಕಾರಿ ಭೂಮಿ ಹಸ್ತಾಂತರ ಯಮಕನಮರಡಿ: ಹಂದಿಗನೂರು ಗ್ರಾಮದ ಜನರ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಅವರ, ಕೆರೆ ನಿರ್ಮಾಣದ ಬಹು ವರ್ಷಗಳ ಕನಸು ನನಸಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಹಂದಿಗನೂರು ಗ್ರಾಮ ಪಂಚಾಯಿತಿಗೆ 22 ಎಕರೆ ಭೂಮಿಯನ್ನು ಹಸ್ತಾಂತರಿಸಿದರು. ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಂದಿಗನೂರು ಗ್ರಾಮದ ಬಳಿ ಕೆರೆ ನಿರ್ಮಾಣಕ್ಕಾಗಿ ಸರ್ಕಾರದ ಆದೇಶದಂತೆ ಸರ್ಕಾರಿ ಗೋಮಾಳ …
Read More »ಜಾಂಬೋಟಿ ಬಳಿ ಓಡಾಡುತ್ತಿದೆ ಟೈಗರ್….
ಬೆಳಗಾವಿ- ಬೆಳಗಾವಿ ಜಿಲ್ಲೆಯ ಜಾಂಬೋಟಿ,ಕಣಕುಂಬಿ ಬಳಿ ಹುಲಿ ಓಡಾಡುತ್ತಿದೆ,ಎನ್ನುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಾಂಬೋಟಿ ಕಣಕುಂಬಿ ಪರಿಸರದಲ್ಲಿ ಹುಲಿ ಓಡಾಡುವ ವಿಡಿಯೋ ಫೇಸ್ ಬುಕ್ ವ್ಯಾಟ್ಸಪ್ ಗಳಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋ ನಿಜವಾಗಿಯೂ ಜಾಂಬೋಟಿ,ಮತ್ತು ಕಣಕುಂಬಿ ಬಳಿ ಸೆರೆಹಿಡಿಯಲಾಗಿದೆಯಾ ? ಎನ್ನುವದು ದೃಡವಾಗಿಲ್ಲ. ಕೆಲವು ವರ್ಷಗಳ ಹಿಂದೆ ಇದೆ ಪರಿಸರದಲ್ಲಿ ನರಭಕ್ಷಕ ಹುಲಿಯೊಂದು ಹಕವಾರು ಜನರನ್ನು ಭೇಟೆಯಾಡಿತ್ತು . ಈಗ ಇದೇ ಪರಿಸರದಲ್ಲಿ ಹುಲಿ …
Read More »