Breaking News

Breaking News

ಬೆಳಗಾವಿಯಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ರಾಜಧಾನಿಯ ಕಳೆ..!!

ಬೆಳಗಾವಿ-ರಾಜ್ಯದ ಎರಡನೇಯ ರಾಜಧಾನಿ ಆಗಲಿರುವ ಬೆಳಗಾವಿ ಮಹಾನಗರ ಇಂದಿನಿಂದ ಹತ್ತು ದಿನಗಳ ಕಾಲ ರಾಜಧಾನಿಯ ಸ್ವರೂಪ ಪಡೆಯಲಿದೆ.ರಾಜ್ಯಸರ್ಕಾರ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಶಿಪ್ಟ್ ಆಗಿದೆ. ಇಂದು ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದೆ.ಅದಕ್ಕಾಗಿ ಅಭೂತಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು,ಇಂದಿನಿಂದ ಕಲಾಪಗಳು ಆರಂಭವಾಗಲಿವೆ. ಇಂದು ಅಧಿವೇಶನದ ಪ್ರಥಮ ದಿನ,ಅಧಿವೇಶನದ ಕಲಾಪಗಳು ಶುರು ಆಗುವ ಮುನ್ನ ವಿಧಾನಸಭೆಯ ಸಭಾಂಗಣದಲ್ಲಿ ಅಳವಡಿಸಿರುವ ಏಳು ಜನ ಮಹಾತ್ಮರ ಭಾವಚಿತ್ರಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಏಳು …

Read More »

ಸುವರ್ಣವಿಧಾನಸೌಧದ ಸಭಾಂಗಣದಲ್ಲಿ, ಪರದೇ ಕೇ ಪಿಚೇ ಕ್ಯಾ ಹೈ…!!!

ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧದ ಅಸೆಂಬ್ಲಿ ಸಭಾಂಗಣದಲ್ಲಿ ನಾಳೆ ಏಳು ಜನ ಮಹಾಪುರುಷರ ಭಾವಚಿತ್ರಗಳು ಅನಾವರಣಗೊಳ್ಳಲಿದ್ದು ಈ ಏಳು ಪೋಟೋಗಳನ್ನು ಪರದೆಯಿಂದ ಮುಚ್ಚಲಾಗಿದ್ದು ಏಳು ಜನ ಮಹಾಪುರುಷರು ಯಾರು ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. ಮಹಾತ್ಮಾ ಗಾಂಧಿ,ವಿಶ್ವರತ್ನ ಬಾಬಾಸಾಹೇಬ್ ಅಂಬೇಡ್ಕರ್,ಜಗಜ್ಯೋತಿ ಬಸವೇಶ್ವರ,ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಗಳು ಇವೆ ಎಂದು ಹೇಳಲಾಗಿದ್ದು ಇವರ ಜೊತೆ ಸಾವರ್ಕರ್ ಪೋಟೋ ಕೂಡಾ ಇದೆ ಎಂದು ದೃಶ್ಯ ಮಾದ್ಯಮಗಳಲ್ಲಿ ಸುದ್ದಿ …

Read More »

ಮಹಾರಾಷ್ಟ್ರದಿಂದ ಬರುವ ಯಾರಿಗೂ ನಾಳೆ ಬೆಳಗಾವಿ ಪ್ರವೇಶಕ್ಕೆ ಅನುಮತಿ ಇಲ್ಲಾ.

ಬೆಳಗಾವಿ- ನಾಳೆ,ಡಿ.19ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದ್ದುಅಧಿವೇಶನದ ದಿನವೇ ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಿದೆ,ಮಹಾಮೇಳಾವ್ ನಡೆಯುವ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ಸ್ಥಳ ಪರಶೀಲನೆ ಮಾಡಿದ್ದಾರೆ. ಬೆಳಗಾವಿಯ ಟೀಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮರಾಠಿ ಮೇಳಾವ್ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆ ಸೇರಿದಂತೆ ಜಾಗ ಪರಿಶೀಲನೆ ಮಾಡಿದ ಎಡಿಜಿಪಿ ಅಲೋಕ್ ಕುಮಾರ್ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಡ್ರೋಣ್ ಕಣ್ಗಾವಲು ಇರಿಸುವಂತೆ ಸೂಚನೆ ನೀಡಿದ್ದಾರೆ.ಮಹಾಮೇಳಾವ್ ಕಾರ್ಯಕ್ರಮಕ್ಕೆ ಬೆಳಗಾವಿಗೆ ಮಹಾರಾಷ್ಟ್ರದ ಸಂಸದ …

Read More »

ಬೆಳಗಾವಿ ಅಧಿವೇಶನಕ್ಕೆ ಬಿಗ್ ಪೋಲೀಸ್ ಫೋರ್ಸ್‌….!!!

ಬೆಳಗಾವಿ-ಬೆಳಗಾವಿಯಲ್ಲಿ ನಡೆಯುವ 10 ದಿನಗಳ ವರೆಗೂ ಚಳಿಗಾಲದ ಅಧಿವೇಶನದ ಬಂದೋಬಸ್ತಗಾಗಿ ಸುಮಾರು 4931 ಪೊಲೀಸ್ ಸಿಬ್ಬಂದಿಗಳನ್ನು ‌ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುಸಜ್ಜಿತವಾಗಿ ನಡೆಯುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆರು ಜನ ಎಸ್ಪಿ, 11 ಹೆಚ್ಚುವರಿ ಎಸ್ಪಿ, 43 ಡಿಎಸ್ ಪಿ, 95 ಸಿಪಿಐ, 241 ಪಿಎಸ್ ಐ, 298 ಎಎಸ್ಐ, 2829 ಹೆಡ್ ಕಾನ್ ಸ್ಟೇಬಲ್, …

Read More »

ಕಾಂಗ್ರೆಸ್ ಚುನಾವಣಾ ಸಮೀತಿಯ ಮೊದಲ ಸಭೆ ಬೆಳಗಾವಿಯಲ್ಲಿ…!!

ಬೆಳಗಾವಿ-ರಾಜ್ಯದ ಎರಡನೇಯ ರಾಜಧಾನಿಯಾಗಲಿರುವ ಬೆಳಗಾವಿಗೆ ಈಗ ಎಲ್ಲ ರಾಜಕೀಯ ಪಕ್ಷಗಳು ಮಹತ್ವ ಕೊಡುತ್ತಿವೆ. ಕಾಂಗ್ರೆಸ್ ಪಕ್ಷದ ಚುನಾವಣಾ ಸಮೀತಿಯ ಮೊದಲ ಸಭೆ ಬೆಳಗಾವಿಯಲ್ಲೇ ನಡೆಯಲಿದೆ. ನಾಳೆ ಭಾನುವಾರ ದಿನಾಂಕ 18 ರಂದು ಸಂಜೆ 5 ಗಂಟೆಗೆ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ, ಕಾಂಗ್ರೆಸ್ ಪಕ್ಷದ ಚುನಾವಣಾ ಸಮೀತಿಯ ಪ್ರಥಮ ಸಭೆ ನಡೆಯಲಿದ್ದು ಭಾನುವಾರ ಬೆಳಗ್ಗೆ ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು ಬೆಳಗಾವಿಗೆ ಆಗಮಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ …

Read More »

ಹೋದ ಕಡೆಯೆಲ್ಲಾ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ- ಸತೀಶ್ ಜಾರಕಿಹೊಳಿ

ಕೊಪ್ಪಳ: ಹೋದ ಕಡೆಯೆಲ್ಲಾ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕೊಪ್ಪಳದ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜಿ ಹಾಕಿದವರಿಗೆ ತಮಗೂ ಟಿಕೆಟ್ ಸಿಗುತ್ತದೆ ಎಂಬ ಆಸೆ ಇರುತ್ತದೆ. ಆದರೆ ಸಿದ್ದರಾಮಯ್ಯ ಅವರು ಏಕಾಏಕಿ ಟಿಕೆಟ್ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ. ಒಂದು ಕಡೆ ಅರ್ಜಿಗಳ ಇತ್ಯರ್ಥವಾಗಿಲ್ಲ, ಮತ್ತೊಂದು ಕಡೆ ಇವರಿಗೆ ಮತ ಹಾಕಿ ಎನ್ನುವುದು ಸರಿಯಲ್ಲ ಎಂದರು. …

Read More »

ಕುಡಿದು, ಬ್ಯುಲೆರೋ ಆ್ಯಕ್ಸಿಡೆಂಟ್ ಮಾಡಿದ್ದ, ಮರಾಠಿಗರು ಕಲ್ಲು ಎಸೆದಿದ್ದಾರೆ ಅಂತ ಕಥೆ ಕಟ್ಟಿದ್ದ ಭೂಪ..!!

ಬೆಳಗಾವಿ-ಸರ್ಕಾರಿ ವಾಹನದ ಮೇಲೆ ಕಲ್ಲು ತೂರಿದ್ದ ಪ್ರಕರಣಕ್ಕೆ ಟ್ವಿಸ್ಟ್ ಪಡೆದಿದೆ,ಕುಡಿದ ಅಮಲಿನಲ್ಲಿಬುಲೆರೋ ವಾಹನ ಅಪಘಾತ ಮಾಡಿ ಬೆಳಗಾವಿಯ ಸುವರ್ಣವಿಧಾನಸೌಧದ ಬಳಿ ನನ್ನ ವಾಹನದ ಮೇಲೆ ಮರಾಠಿ ಭಾಷಿಕರು ಕಲ್ಲು ತೂರಾಟ ಮಾಡಿ ವಾಹನ ಜಖಂ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ ಚಾಲಾಕಿ ಚಾಲಕನ ನಿಜ ಬಣ್ಣವನ್ನು ಹಿರೇಬಾಗೇವಾಡಿ ಪೋಲೀಸರು ಬಯಲು ಮಾಡಿದ್ದಾರೆ. ಕಟ್ಟು ಕಥೆ ಕಟ್ಟಿದ ಡ್ರೈವರ್ ಚೇತನ್ ವಿಚಾರಿಸಿದ ಹಿರಿಯ ಪೋಲೀಸ್ ಅಧಿಕಾರಿಗಳು ಸತ್ಯಾಂಶವನ್ನು ಹೊರಹಾಕಿದ್ದಾರೆ.ಬೆಳಗಾವಿಯ ಸುವರ್ಣ …

Read More »

ಪಂಚಮಸಾಲಿ ಸಂಘಟನೆಯಲ್ಲಿ ಗುಂಡು ಪಾಟೀಲರಿಗೆ ಪ್ರಮೋಶನ್..!!

ಬೆಳಗಾವಿ-ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಬಸವ /ಜಯ ಮೃತ್ಯುಂಜಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರಾಜ್ಯ ಪಂಚಮಸಾಲಿ ಕಾರ್ಯಕಾರಿನಿ ಸಭೆ ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಿತು. ಸಭೆ ಮುಗಿದ ಬಳಿಕ ಪಂಚಮಸಾಲಿ ಸಂಘಟನೆಯ ಕೆಲವು ಪದಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಯಿತು.ಪಂಚಮಸಾಲಿ ಸಂಘಟನೆಯ ಹುಕ್ಕೇರಿ ತಾಲ್ಲೂಕಾ ಅಧ್ಯಕ್ಷರಾಗಿ ಸಂಘಟನೆಯನ್ನು ಬಲಿಷ್ಠಗೊಳಿಸಿದ ಗುಂಡು ಪಾಟೀಲ ಅವರನ್ನು ಪಂಚಮಸಾಲಿ ಸಂಘಟನೆಯ ಬೆಳಗಾವಿ ಜಿಲ್ಲಾ …

Read More »

ಬೆಳಗಾವಿಯ, ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸ, ದಾಳಿ ಆಯ್ತು, ಮುಂದೇನು..??

ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲೆಯ ಪ್ರತಿಷ್ಢಿತ ನಾಯಕರ ಒಡೆತನದ ಸಕ್ಕರೆ ಕಾರ್ಖಾನೆಗಳ ಮೇಲೆ ಅಳತೆ ಮತ್ತು ಮಾಪನ ಇಲಾಖೆ ದಾಳಿ ಮಾಡಿದೆ,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮತ್ತು ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ‌.ದಾಳಿ ಮಾಡಿರುವ ಬಗ್ಗೆ ಸಕ್ಕರೆ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿದ್ದರು, ಆದ್ರೆ ದಾಳಿಯ ನಂತರ ಯಾವ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿಲ್ಲ.ಹೀಗಾಗಿ ಪ್ರತಿಷ್ಠಿತ …

Read More »

ದೆಹಲಿಯಲ್ಲಿ ಸಂಧಾನ ಸಭೆ, ಬೆಳಗಾವಿಯಲ್ಲಿ ಪುಂಡಾಟಿಕೆ…!!

ಬೆಳಗಾವಿ-ಅಧಿವೇಶನಕ್ಕೂ ಮುನ್ನವೇ ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ ಮರಾಠಿ ಭಾಷಿಕ ಪುಂಡರು,ಅಧಿವೇಶನಕ್ಕೆ ಬರುತ್ತಿದ್ದ ವಾಹನ ಮೇಲೆ ಕಲ್ಲು ತೂರಿ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆ. ನಿನ್ನೆ ರಾತ್ರಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರ ನೇತ್ರತ್ವದಲ್ಲಿ ಕರ್ನಾಟಕ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಂಧಾನ ಸಭೆ ನಡೆದ ಬೆನ್ನಲ್ಲಿಯೇ,ನಿನ್ನೆ ರಾತ್ರಿ ಬೆಳಗಾವಿ ಹೊರವಲಯದ ಸುವರ್ಣಸೌಧದ ಎದುರೇ ಈ ಘಟನೆ ನಡೆದಿದೆ ಬೆಂಗಳೂರಿನಿಂದ ಬೆಳಗಾವಿಗೆ ಚಳಿಗಾಲ ಅಧಿವೇಶನಕ್ಕೆ ಬರುತ್ತಿದ್ದ ವಾಹನ. ಕರ್ನಾಟಕ ರಾಜ್ಯ ಕೃಷಿ …

Read More »