Breaking News

Breaking News

ಗ್ಯಾಸ್ ಲಿಕೇಜ್, ಬೆಂಕಿ ಅವಘಡ ಸಾರ್ವಜನಿಕರಲ್ಲಿ ಆತಂಕ..

ಬೆಳಗಾವಿ- ಗ್ಯಾಸ್ ಲಿಕೇಜ್ ಆಗಿ ಓಮಿನಿ ಕಾರೊಂದು ಧಗಧಗ ಬೆಂಕಿಯಲ್ಲಿ ಸುಟ್ಟು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಇಂದು ಬೆಳಗ್ಗೆ ಸಂಕೇಶ್ವರ ಪಟ್ಟಣದ ಬಸ್ ನಿಲ್ಧಾಣದ ಬಳಿ ಓಮಿನಿ ಕಾರಿನಲ್ಲಿ ಹೊಗೆ ಕಾಣಿಸಿದ ಕಾರಣ ಕಾರು ನಿಲ್ಲಿಸಿ ಹೊರಗೆ ಬರುವಷ್ಟರಲ್ಲಿ ಕಾರಿನಲ್ಲಿ ಬೆಂಕಿ ಹರಡಿ ಕ್ಷಣಾರ್ಧದಲ್ಲಿ ಓಮಿನಿ ಕಾರಿನಲ್ಲಿ ಧಗಧಗ ಹೊತ್ತಿ ಉರಿದಿದೆ.ಬೆಂಕಿ ಅವಘಡ ಸಂಭವಿಸುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಕೆಲ ಕಾಲ ಇಲ್ಲಿ …

Read More »

ರಾಜಕುಮಾರ್ ಟಾಕಳೆ,ಬೇಲ್ ಅರ್ಜಿ ವಜಾ,ನವ್ಯಶ್ರೀಗೆ ಮಜಾ…!!

ಬೆಳಗಾವಿ-ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆಗೆ ಸಂಕಷ್ಟ ಎದುರಾಗಿದೆ.ಯಾಕಂದ್ರೆ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.ಟಾಕಳೆ ಹೆಂಡತಿ ಎಂದೇ ಹೇಳಿಕೊಳ್ಳುತ್ತಿರುವ ನವ್ಯಶ್ರೀಗೆ ಆರಂಭಿಕ ಜಯ ಸಿಕ್ಕಿದಂತಾಗಿದೆ. ರಾಜಕುಮಾರ ಟಾಕಳೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಆರೋಪಗಳ ಸುರಿಮಳೆ ಮಾಡಿದ್ದರು,ರಾಜಕುಮಾರ್ ಟಾಕಳೆ ವಿರುದ್ಧ ಪ್ರಕರಣ ದಾಖಲಾಗಿದೆ.ರಾಜಕುಮಾರ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ.ಬೆಳಗಾವಿಯ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,ರಾಜಕುಮಾರ್ ಟಾಕಳೆ ನಿರೀಕ್ಷಣಾ …

Read More »

ಈ ರಸ್ತೆ ಅಗಲೀಕರಣಕ್ಕೆ ಇನ್ನೆಷ್ಟು ಬಲಿ ಬೇಕು..??

ಬೆಳಗಾವಿ-ಬೆಳಗಾವಿ ಮಹಾನಗರ ಈಗ ಮೆಟ್ರೋ ಪಾಲಿಟೀನ್ ಸಿಟಿ ಆಗುವತ್ತ ದಾಪುಗಾಲು ಹಾಕುತ್ತಿದೆ,ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದೆ.ಜೊತೆಗೆ ಸ್ಮಾರ್ಟ್ ಸಿಟಿ ಕೂಡಾ ಹೌದು,ಕರ್ನಾಟಕ, ಮಹಾರಾಷ್ಟ್ರ,ಗೋವಾ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿ ಮಹಾನಗರದಲ್ಲಿ ಟ್ರಾಫಿಕ್ ಮ್ಯಾನೆಜ್ಮೆಂಟ್ ಇಲ್ಲವೇ ಇಲ್ಲ,ಹೀಗಾಗಿ ಇಲ್ಲಿ ಸರಣಿ ಅಪಘಾತಗಳು ಸಂಭವಿಸಿ ಈಗಾಗಲೇ ಹಲವಾರು ಜನ ಬಲಿಯಾಗಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಎಲ್ಲ ರಸ್ತೆಗಳು ಸುಧಾರಣೆಯಾಗಿವೆ, ನಗರೋತ್ಥಾನ ಯೋಜನೆಯ ನೂರಾರು ಕೋಟಿ ರೂ ಅನುದಾನವನ್ನು ರಸ್ತೆಗಳ …

Read More »

ಲಂಚ ಫಿಕ್ಸ್ ಮಾಡಿ,ಅಡ್ವಾನ್ಸ್ ಪಡೆಯುತ್ತಿದ್ದಾಗ ಸಿಕ್ಕಿಬಿದ್ದರು…

ಬೆಳಗಾವಿ- ವಾರಸಾ ಪ್ರಮಾಣ ಪತ್ರ ನೀಡಲು,ಲಂಚ ಫಿಕ್ಸ್ ಮಾಡಿ ಅಡ್ವಾನ್ಸ್ ಪಡೆಯುತ್ತಿದ್ದಾಗ ಅಥಣಿ ತಾಲ್ಲೂಕಿ‌ನ ಬಳಗೇರಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕ ಇಬ್ಬರೂ ಎಸಿಬಿ ಬಲೆಗೆ ಬಿದ್ದಿದ್ದಾರೆ. ವಾರಸಾ ಪ್ರಮಾಣಪತ್ರ ನೀಡಲು 10.500 ಫಿಕ್ಸ್ ಮಾಡಿ 3000 ರೂ ಅಡ್ವಾನ್ಸ ಪಡೆಯುತ್ತಿದ್ದಾಗ ಬಳಗೇರಿ ಗ್ರಾಮ ಲೆಕ್ಕಾಧಿಕಾರಿ,ಉಮೇಶ್ ದನದಮನಿ,ಮತ್ತು ಗ್ರಾಮಸಹಾಯಕ ಪಲ್ಹಾದ ಸನದಿ ಇಬ್ಬರ ಮೇಲೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿ ಇಬ್ಬರನ್ನು ಟ್ರ್ಯಾಪ್ ಮಾಡಿದ್ದಾರೆ. ಇಬ್ಬರನ್ನು ಎಸಿಬಿ ಪೋಲೀಸರು …

Read More »

ಸೋಗು ಹಾಕಿ,ಸುಲಿಗೆ ಮಾಡಿದ ಇಬ್ಬರು ಸೋಗಲಾಡಿಗಳು ಅರೆಸ್ಟ್…!!

ಇಬ್ಬರು ಅಂತಾರಾಜ್ಯ ಸುಲಿಗೆಕೋರರ ಬಂಧನ : ೨೨ ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ ಹುಕ್ಕೇರಿ: ವಿವಿಧ ಪ್ರಕರಣಗಳಲ್ಲಿ ಎರಡು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಅಂತಾರಾಜ್ಯ ಸುಲಿಗೆಕೋರರನ್ನು ಬಂಧಿಸಿ ಅವರಿಂದ ಅಂದಾಜು ೨೨ ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ೮ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಈ …

Read More »

ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ

ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ* *ಕೆಎಂಎಫ್ ರೈತ ಸ್ನೇಹಿ ಕಾರ್ಯ ಯೋಜನೆಗಳಿಗೆ ಸಚಿವ ಶಾ ಹರ್ಷ ಮುಖ್ಯಮಂತ್ರಿ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವ ಸೋಮಶೇಖರ್, ಬಿಜೆಪಿ ಅಧ್ಯಕ್ಷ ಜಟೀಲ್ ಇದರಲ್ಲಿ ಭಾಗಿ *ಬೆಂಗಳೂರು:* ಬೆಂಗಳೂರಿನ ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ರ ಮುಖ್ಯಮಂತ್ರಿ ಬಸವರಾಜ …

Read More »

ನಕಲಿ ಪತ್ರಕರ್ತರ ಹಾವಳಿ, ಕಡಿವಾಣಕ್ಕೆ ತುರ್ತು ಸಭೆ…

ಅಧಿಕೃತ ಪತ್ರಕರ್ತರಿಗೆ ಗುರುತಿನ ಚೀಟಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ಆ.4(ಕರ್ನಾಟಕ ವಾರ್ತೆ): ಜಿಲ್ಲೆಯ ಹಲವು ಕಡೆಗಳಲ್ಲಿ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಮತ್ತು ಅನಧಿಕೃತ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ವಾರ್ತಾ ಇಲಾಖೆಯ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳ ವತಿಯಿಂದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಮಾತ್ರ ಜಿಲ್ಲಾಡಳಿತದ ವತಿಯಿಂದ ಗುರುತಿನಚೀಟಿಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ಅನಧಿಕೃತ ಪತ್ರಕರ್ತರ ಹಾವಳಿ ಹಾಗೂ “ಪ್ರೆಸ್” …

Read More »

ದಾಣಗೇರೆ ಉತ್ಸವ ಆಯ್ತು..‌..ಇನ್ಮುಂದೆ ಬೆಳಗಾವಿಯಲ್ಲೂ ಉತ್ಸವ…!!

ದಾಣಗೇರೆ ಉತ್ಸವದ ಆಯ್ತು..‌..ಇನ್ಮುಂದೆ ಬೆಳಗಾವಿಯಲ್ಲೂ ಉತ್ಸವ…!! ಬೆಳಗಾವಿ-ದಾವಣಗೇರೆಯಲ್ಲಿ ಸಿದ್ರಾಮೋತ್ಸವ ನಡೆದ ಬೆನ್ನಲ್ಲಿಯೇ ಈಗ ಬೆಳಗಾವಿಯಲ್ಲೂ ಮತ್ತೊಂದು ಉತ್ಸವ ನಡೆಸಲು ಎಲ್ಲ ರೀತಿಯ ತಯಾರಿ ನಡೆಯುತ್ತಿದೆ. ಬಿಜೆಪಿ ಮುಖಂಡ,ಮಾಜಿ ರಾಜ್ಯಸಭಾ ಸದಸ್ಯ, ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ,ಲಿಂಹಾಯತ ಸಮುದಾಯದ ಕೆಎಲ್ಇ ಸಂಸ್ಥೆಯನ್ನು ಹಳ್ಳಿಯಿಂದ ದುಬೈವರೆಗೂ ವಿಸ್ತರಿಸಿ,ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಪ್ರಭಾಕರ ಕೋರೆ ಅವರ 75 ನೇಯ ಜನ್ಮೋತ್ಸವವನ್ನು ಸಿದ್ರಾಮೋತ್ಸವದ ಮಾದರಿಯಲ್ಲೇ ಆಯೋಜಿಸಲು ಪ್ರಭಾಕರ ಕೋರೆ ಅಭಿಮಾನಿಗಳು ನಿರ್ಧರಿಸಿದ್ದಾರೆ. ಪ್ರಭಾಕರ …

Read More »

ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದವರಿಗೆ ಬೇಡಿ….!!

ಬೆಳಗಾವಿ- ಕಬ್ಬಿನ ಗದ್ದೆಯಲ್ಲಿ ಗೊಂಜಾಳ ಬೆಳೆದು ಲಾಭ ಮಾಡಿಕೊಳ್ಳುವ ರೈತರನ್ನು ನಾವು ನೋಡಿದ್ದೇವೆ.ಆದ್ರೆ ಈಗ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದವರು ಈಗ ಪೋಲೀಸರ ಬಲೆಗೆ ಬಿದ್ದಿದ್ದಾರೆ. ರಾಯಬಾಗ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬೊಮ್ಮನಾಳ ಮತ್ತು,ಬಿರನಾಳ ಗ್ರಾಮದಲ್ಲಿ ಕಬ್ನಿನ ಗದ್ದೆಯಲ್ಲಿ ಗಾಂಜಾ ಬೆಳೆದಿರುವದನ್ನು ರಾಯಬಾಗ ಠಾಣೆಯ ಪೋಲೀಸರು ಪತ್ತೆ ಮಾಡಿದ್ದಾರೆ.ಎರಡೂ ಗ್ರಾಮಗಳಲ್ಲಿ ಸುಮಾರು 9.5 ಕೆಜಿ ಗಾಂಜಾ ವಶಪಡಿಸಿಕೊಂಡಿರುವ ಪೋಲೀಸರು ಎರಡು ಪತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ …

Read More »

ಭಯಾನಕ ಆಕ್ಸಿಡೆಂಟ್, ಬಾಲಕನ ಸಾವು,ಲಾರಿ ಮೇಲೆ ಕಲ್ಲು ತೂರಾಟ…

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧದ ನಡುವೆಯೂ ಭಾರಿ ವಾಹನಗಳ,ಮರಣ ಮೃದಂಗ ಮುಂದುವರೆದಿದೆ. ಇಂದು ಬುಧವಾರ ಬೆಳಗ್ಗೆ ಬೆಳಗಾವಿ ನಗರದ ಕ್ಯಾಂಪ್ ಪ್ರದಶದಲ್ಲಿ ಲಾರಿ ಹಾಯ್ದು,ರಸ್ತೆ ದಾಡುತ್ತಿದ್ದ ಹತ್ತು ವರ್ಷದ ಬಾಲಕ ಬಲಿಯಾಗಿದ್ದು,ಸ್ಕೂಟಿ ಮೇಲೆ ಹೋಗುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹತ್ತು ವರ್ಷದ ಬಾಲಕ ಅರಹಾನ್ ಬೇಪಾರಿ ಸ್ಥಳದಲ್ಲೇ ಮೃತಪಟ್ಟಿದ್ದು,ಅತೀಕಾ,ಮತ್ತು ಆಯುಷ್ಯ ಎಂಬುವವರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ಬಳಿಕ,ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ,ಸೇರಿದ್ರು,ಲಾರಿ ಚಾಲಕನ ಮೇಲೆ ಹಲ್ಲೆ …

Read More »