Breaking News

Breaking News

ಕೃಷ್ಣಾ ನದಿ ತೀರದಲ್ಲಿ ರೌಂಡ್ಸ್ ಹಾಕಿದ, ಬೆಳಗಾವಿ ಜಿಲ್ಲಾಡಳಿತ… !

ಬೆಳಗಾವಿ- ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಉಕ್ಕಿ ಹರಿತುತ್ತಿವೆ‌. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ,ಜಿಪಂ ಸಿಇಓ ದರ್ಶನ್ ಸೇರಿದಂತೆ ಇಡೀ ಬೆಳಗಾವಿ ಜಿಲ್ಲಾಡಳಿತ ಇಂದು ಬೆಳಗ್ಗೆ ಕೃಷ್ಣಾ ನದಿತೀರದಲ್ಲಿ ಸಂಚರಿಸಿ ಪರಿಸ್ಥಿತಿಯ ಅವಲೋಕನ ಮಾಡಿತು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಭಾಗದಲ್ಲಿ ತುಂಬಿ ಹರಿಯುತ್ತಿರುವ ದೂದಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿಗಳು ಅಪಾಯದ ಮಟ್ಟ …

Read More »

ಬೈಲಹೊಂಗಲದಲ್ಲಿ, ಚಿತ್ರನಟನ ಮೇಲೆ ಗುಂಡಿನ ದಾಳಿ…..!!

ಬೈಲಹೊಂಗಲ- ಚಿತ್ರನಟ, ಉದ್ಯಮಿ,ಯುವ ನಾಯಕ, ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿಗೆ ವಿಫಲ ಯತ್ನ ನಡೆದಿದೆ. *ಅದೃಷ್ಟವಶಾತ್ ಮಿಸ್ ಫೈರ್ ಆಗಿ ಶಿವರಂಜನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಘಟನೆ ನಡೆದಿದೆ.ಶಿವರಂಜನ್ ಬೋಳಣ್ಣವರ್ ಮನೆ ಎದುರು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ.ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ ಮಾಹಿತಿ ಇದೆ. ಬೈಲಹೊಂಗಲದ ಹಳೆಯ ಹನುಮಂತ ದೇವರ ದೇವಸ್ಥಾನ ಬಳಿ ಇರುವ ಶಿವರಂಜನ್ ಮನೆ ಇದ್ದು …

Read More »

12 ಕೋಟಿ ಬಿಡುಗಡೆ ಮಾಡಿಸಿದ ಸಚಿವರು…

ಬೆಂಗಳೂರು- ಕಳೆದ ಐದು ತಿಂಗಳಿಂದ ಬಿಡುಗಡೆಯಾಗದ ದೇವದಾಸಿಯರ ಮಾಶಾಸನವನ್ನು ಬಿಡುಗಡೆ ಮಾಡಿಸುವಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ್ ಅವರು ಯಶಸ್ವಿಯಾಗಿದ್ದಾರೆ. ಮುಖ್ಯಕಾರ್ಯದರ್ಶಿ ಗಳೊಂದಿಗೆ ಚರ್ಚಿಸಿ ಅವರಿಗೆ ಟಿಪ್ಪಣಿ ಕಳಿಸಿ ದೇವದಾಸಿಯರ ಮಾಶಾಸನ ಬಿಡುಗಡೆಯಾಗದ ವಿಷಯವನ್ನು ನಿನ್ನೆ ಸಚಿವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ದೇವದಾಸಿಯರ ಜೀವನೋಪಾಯಕ್ಕಾಗಿ ನೀಡಲಾಗುವ ವಿಳಂಬ ಮಾಡಿ ಪಾವತಿ ಮಾಡುವುದರ ಬಗ್ಗೆ ನಿನ್ನೆ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳುಹಿಸಿದ್ದರು. 12 ಕೋಟಿ ರೂಪಾಯಿಗಳನ್ನು ದೇವದಾಸಿಯರ ಮಾಶಾಸನಕ್ಕಾಗಿ ಸರ್ಕಾರ ಮಹಿಳಾ …

Read More »

ಬೆಳಗಾವಿ ಜಿಲ್ಲೆಯ ಮೂವರಲ್ಲಿ ಒಬ್ಬರ, ನಾಮನಿರ್ದೇಶನ ರದ್ದು…

ಬೆಳಗಾವಿ-ರಾಜ್ಯದಲ್ಲಿರುವ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರು ಕೂಡಲೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿಗಳು ಆದೇಶ ನೀಡಿದ ಬೆನ್ನಲ್ಲಿಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆಪ್ತ ಸಹಾಯಕರು,ರಾಜ್ಯದ ಹಲವಾರು ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷರ ನಾಮನಿರ್ದೇಶನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂವರು ನಾಯಕರು ನಿಗಮ ಮಂಡಳಿಗಳ ಅಧ್ಯಕ್ಷರಾಗಿದ್ದರು.ಮೂವರಲ್ಲಿ ಒಬ್ಬರ ನಾಮನಿರ್ದೇಶನ ರದ್ದಾಗಿದ್ದು ಶಾಸಕ ಮಹೇಶ್ ಕುಮಟೊಳ್ಳಿ ಅವರೊಬ್ಬರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಕಾಡಾ ನಿಗಮದ ಅಧ್ಯಕ್ಷ ಬೈಲಹೊಂಗಲದ ಮಾಜಿ ಶಾಸಕ ಡಾ. …

Read More »

ಬೆಳಗಾವಿ ಜಿಲ್ಲಾಆಸ್ಪತ್ರೆಯ ಸುಧಾರಕನ ವರ್ಗಾವಣೆ….!!

ಬೆಳಗಾವಿ -ಬೆಳಗಾವಿ ಜಿಲ್ಲಾ ಆಸ್ಪತ್ರೆ ಅಂದ್ರೆ,ಅದು ಸರ್ಕಾರಿ ದವಾಖಾನೆ ಅಲ್ಲ.ಅದೊಂದು ಸರ್ಕಾರಿ ಕಸಾಯಿಖಾನೆ ಎನ್ನುವಷ್ಟರ ಮಟ್ಟಿಗೆ, ಹದಗೆಟ್ಟು ಹೋಗಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆಯನ್ನು ಸುಧಾರಿಸಿ,ಇಲ್ಲಿಯ ವ್ಯವಸ್ಥೆಯನ್ನೇ ಬದಲಾಯಿಸಿ ಬಡರೋಗಿಗಳ ಸೇವೆ ಮಾಡಿದ,ಬೆಳಗಾವಿ ಪ್ರಾದೇಶೀಕ ಆಯುಕ್ತ ಅಮಲನ್ ಆದಿತ್ಯ ಬಿಸ್ವಾಸ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೋವೀಡ್ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಮಾದ್ಯಮಗಳು ಸರಣಿ ಲೇಖನಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದರು,ಮಾದ್ಯಮಗಳ ವರದಿಗೆ ಸ್ಪಂದಿಸಿದ …

Read More »

ನಾಲ್ಕು ಜನರ ಜೀವ ಉಳಿಸಿದ,ಯುವತಿಯ ಪಾಲಕರಿಗೆ ಸಲಾಂ…

ಧಾರವಾಡದ ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 15 ವರ್ಷದ ಬಾಲಕಿ ತನ್ನ ಅಂಗಾಂಗಳನ್ನು ದಾನ ಮಾಡಿ 4 ಜನರ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾಳೆ. ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಗ್ರೀನ ಕಾರಿಡಾರ ಮೂಲಕ ಧಾರವಾಡದಿಂದ ರಸ್ತೆ ಮೂಲಕ ತೆಗೆದುಕೊಂಡು ಬರಲಾಯಿತು. ಒಂದು ಕಿಡ್ನಿಯನ್ನು ಎಸಡಿಎಂ ಆಸ್ಪತ್ರೆ …

Read More »

ಬೆಳಗಾವಿಯ,ಕಾಲೇಜು ರಸ್ತೆಯಲ್ಲಿ ಗಾಂಜಾ ಮಾರಾಟ ಇಬ್ಬರ ಅರೆಸ್ಟ್…

ಬೆಳಗಾವಿ- ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ಹಲವಾರು ಪ್ರತಿಷ್ಠಿತ ಕಾಲೇಜುಗಳಿವೆ,ಈ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೋಲೀಸರು ಬಂಧಿಸಿ ಒಂದು ಕೆಜಿ ಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಕಾಲೇಜು ರಸ್ತೆಯಲ್ಲಿರುವ ಖೈಬರ್ ಹೊಟೇಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಕ್ಯಾಂಪ್ ಪೋಲೀಸರು,ಬೆಳಗಾವಿಯ ಜೇಡ ಗಲ್ಲಿ ಶಹಾಪೂರಿನ ಪ್ರದೀಪ ಲವಕುಶ ಹುಬ್ಬಳ್ಳಿ (27) ಮತ್ತು ಇದೇ ಗಲ್ಲಿಯ ವಿಜಯಕುಮಾರ್ ವೀರಭದ್ರಪ್ಪಾ ತಾಂಡೂರ (25) ಇಬ್ಬರನ್ನು ಅರೆಸ್ಟ್ …

Read More »

ಬೆಳಗಾವಿಯ ಕುಡಚಿ ಕ್ಷೇತ್ರದಲ್ಲಿ, ಚನ್ನರಾಜ್ ಸೈಕ್ಲಿಂಗ್ ಅವಾಜ್….!!

ಕುಡಚಿ ಕ್ಷೇತ್ರದ ವಶಕ್ಕಾಗಿ,ಸೈಕಲ್ ಹತ್ತಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್….!! ಬೆಳಗಾವಿ-18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ,ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಬಿಜೆಪಿ ಶಾಸಕರು ಗೆದ್ದಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟು, ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ. ಎಂಎಲ್ಸಿ ಚುನಾವಣೆಯಲ್ಲಿ,ಚನ್ನರಾಜ್ ಹಟ್ಟಿಹೊಳಿ,ಮತ್ತು ಪ್ರಕಾಶ್ ಹುಕ್ಕೇರಿ ಗೆದ್ದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಎನರ್ಜಿ ಹೆಚ್ಚಾಗಿದ್ದು ವಿಧಾನ ಪರಿಷತ್ತು ಸದಸ್ಯ ಚನ್ನರಾಜ ಹಟ್ಟಿಹೊಳಿ ಇಂದಿನಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿ …

Read More »

ಜಿಟಿ ಜಿಟಿ, ಮಳೆಯಲ್ಲೂ ಬೆಳಗಾವಿ ಡಿಸಿ ಯಿಂದ ಸಿಟಿ ರೌಂಡ್ಸ್…

  ಬೆಳಗಾವಿ, : ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನಗರ ಬಸ್ ನಿಲ್ದಾಣ (ಸಿಬಿಟಿ) ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ‌ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸೋಮವಾರ (ಜು.11) ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಸಿಬಿಟಿ ಪಕ್ಕದ ಜಾಗೆಗೆ ಸಂಬಂಧಿಸಿದಂತೆ ಜಾಗೆಯ ವಿವಾದದಿಂದ ಎಂಟು ತಿಂಗಳು ಕಾಲ ಕಾಮಗಾರಿ ವಿಳಂಬಗೊಂಡಿರುತ್ತದೆ. ಆದರೆ …

Read More »

ನಿರಂತರ ಮಳೆಗೆ 20ಕ್ಕೂ ಅಧಿಕ ಮನೆಗಳು, ಒಂದು ಶಾಲಾ ಕೊಠಡಿಗೆ ಹಾನಿ

ಬೆಳಗಾವಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆಯ ಅಬ್ಬರ ಬೆಳಗಾವಿ-ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ.ನಿರಂತರ ಮಳೆಗೆ 20ಕ್ಕೂ ಅಧಿಕ ಮನೆಗಳು, ಒಂದು ಶಾಲಾ ಕೊಠಡಿಗೆ ಹಾನಿಯಾಗಿವೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಹಲವೆಡೆ ಮನೆಗಳ ಗೋಡೆ ಕುಸಿದಿದ್ದು ಕಿತ್ತೂರು ತಾಲೂಕಿನಲ್ಲಿ ಧಾರಾಕಾರ ಮಳೆಗೆ 20 ಮನೆಗಳಿಗೆ ಹಾನಿಯಾಗಿವೆ. ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ ಚಿಕ್ಕನಂದಿಹಳ್ಳಿ, ತಿಗಡೊಳ್ಳಿ, ಬೈಲೂರು ಗ್ರಾಮಗಳಲ್ಲಿ ಮನೆ ಗೋಡೆಗಳ ಕುಸಿದು ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಜೀವನ ಸಾಗಿಸುವ …

Read More »