ಬೆಳಗಾವಿ, : ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಮಕ್ಕಳ ದತ್ತು ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರ (ಮಾ.16) ಭೇಡಿ ನೀಡಿದರು. ಸಂಸ್ಥೆಯಲ್ಲಿರುವ ನಿರ್ಗತಿಕ ಮಕ್ಕಳ ಕುಟೀರ(ಹೆಣ್ಣು ಮತ್ತು ಗಂಡು),ಅನಾಥಾಶ್ರಮ, ಸ್ವದೇಶಿ ಮತು ವಿದೇಶಿ ದತ್ತು ಕೇಂದ್ರ ಹೀಗೆ ನಾಲ್ಕು ಮಕ್ಕಳ ಪಾಲನಾ ಸಂಸ್ಥೆಗಳನ್ನು ನಡೆಸುತ್ತಿದ್ದು, ಸದರಿ ಸಂಸ್ಥೆಗೆ ಜಿಲ್ಲಾಧಿಕಾರಿಗಳು ಭೇಡಿ ನೀಡಿ ಸಂಸ್ಥೆಯಲ್ಲಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಒಂದು ಸಮಾಜಮುಖಿಯಾಗಿ …
Read More »ಬೆಳಗಾವಿ ಉಪ ಚುನಾವಣೆಯ ದಿನಾಂಕ ಘೋಷಣೆ..
ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು,ಎಪ್ರೀಲ್ 17 ರಂದು ಮತದಾನ ನಡೆಯಲಿದೆ. ಇವತ್ತು ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಮಾರ್ಚ್ 23 ರಂದು ಚುನಾವಣೆಯ ಅಧಿಸೂಚನೆ ಹೊರಡಲಿದ್ದು, ನಾಮಪತ್ರ ಸಲ್ಲಿಸಲು ಮಾರ್ಚ್ 30 ಕೊನೆಯ ದಿನಾಂಕವಾಗಿದೆ. ಎಪ್ರೀಲ್ 17 ರಂದು ಮತದಾನ ನಡೆಯಲಿದ್ದು ಮೇ 2 ರಂದು ಮತ ಏಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
Read More »ಬೆಳಗಾವಿ ಡಿಸಿಪಿ ಕೈ ಸೇರಿದ 50 ಸೆಕೆಂಡಿನ ಅಸಲಿ ಸಿಡಿ.,,.!!!
ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಎಂಈಎಸ್ ಮುಖಂಡ ಶುಭಂ ಸಾಳುಂಕೆ ಅವರು ಕನ್ನಡಿಗರ ವಿರುದ್ಧ ಮಾಡಿರುವ ಪ್ರಚೋದನಕಾರಿ ಭಾಷಣದ ಅಸಲಿ ಸಿಡಿ ಯನ್ನು ಕರವೇ ಕಾರ್ಯಕರ್ತರು ಡಿಸಿಪಿ ವಿಕ್ರಂ ಅಮಟೆ ಅವರಿಗೆ ಹಸ್ತಾಂತರ ಮಾಡಿ ಶುಭಂ ಸಾಳುಂಕೆ ವಿರುದ್ಧ ದೂರು ನೀಡಿದ್ದಾರೆ. ಬೆಳಗಾವಿ ಗಡಿಯಲ್ಲಿ ಎಂಇಎಸ್ ಮುಖಂಡ ಶುಭಂ ಸಿಳಕೆ ಯಿಂದ ಕನ್ನಡಿಗರಿಗೆ ಧಮ್ಕಿ ಹಾಕಿದ ಪ್ರಕರಣ ಈಗ ಬೆಳಗಾವಿಯ ವಿವಿಧ ಪೋಲೀಸ್ ಠಾಣೆಗಳ ಮೆಟ್ಟಲೇರಿದ್ದು,ಎಂಇಎಸ್ ಮುಖಂಡ ಶುಭಂ ಸಿಳಕೆ ವಿರುದ್ಧ …
Read More »ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡೀತಾನಂತೆ…!!
ಬೆಳಗಾವಿ-ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡಿತೀವಿ ಎಂದು ಬೆಳಗಾವಿ ನೆಲದಲ್ಲಿ ನಿಂತು ಎಂಇಎಸ್ ಮುಖಂಡನೊಬ್ಬ ಧಮ್ಕಿ ಹಾಕಿದ್ದಾನೆ. ಎಂಇಎಸ್ ಯುವ ಘಟಕದ ಮುಖಂಡ ಶುಭಂ ಸಾಳುಂಕೆ ಕನ್ನಡಿಗರಿಗೆ ಬಹಿರಂಗವಾಗಿ ಧಮಕಿ ಹಾಕಿ ಗಡಿನಾಡಿನಲ್ಲಿ ಪುಂಡಾಟಿಕೆ ಪ್ರದರ್ಶಿಸಿದ್ದಾನೆ. ಬೆಳಗಾವಿಯಲ್ಲಿ ಎಂಇಎಸ ಶಿವಸೇನೆ ಎರಡು ಒಂದಾಗಿವೆ.ಹಳದಿ ಕೆಂಪು ಬಣ್ಣದ ಶಾಲು ಧರಿಸಿದವರನ್ನ ಸಿಕ್ಕ ಸಿಕ್ಕಲ್ಲಿ ನಾವು ಹೊಡ್ತಿವಿ.ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು.ಇಲ್ಲವಾದಲ್ಲಿ …
Read More »ಶಿವಸೇನೆ, ಮಹಾರಾಷ್ಟ್ರ ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡ್ತಾರಂತೆ..!!
ಬೆಳಗಾವಿ-ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಲಿಕ್ಕಾಗದೇ ಕಂಗಾಲ್ ಆಗಿರುವ ಶಿವಸೇನೆ ಇವತ್ತು ಮತ್ತೆ ಪುಂಡಾಟಿಕೆ ನಡೆಸಿದ್ದು ಮಹಾರಾಷ್ಟ್ರದಲ್ಲಿರು ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡುವಂತೆ ಕರೆ ನೀಡಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಸವಾಲು ಹಾಕಿದೆ. ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಶಿವಸೇನೆ ಮುಖಂಡ ವಿಜಯ ದೇವಣೆ ಮಾರ್ಚ್ 20 ರಂದು ಮಹಾರಾಷ್ಟ್ರದ ಸಾಂಗಲಿ ಮಿರಜ,ಕೊಲ್ಹಾಪೂರ ಸಾತಾರಾ,ಜಿಲ್ಲೆಗಳಲ್ಲಿ ಇರುವ ಕನ್ನಡಿಗರು ಅಂಗಡಿಗಳನ್ನು ಬಂದ್ ಮಾಡಿ,ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗರ ಬೆಂಬಲ ಸೂಚಿಸಬೇಕೆಂದು ಕರೆ ನೀಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ್ದಾರೆ. …
Read More »ಶಾಸಕಿ ಅಂಜಲಿ…ಕ್ಷೇತ್ರದಲ್ಲಿ ಜನಪರ ಕಾಳಜಿಯ ಗೀತಾಂಜಲಿ…..!!!!
ಬೆಳಗಾವಿ-ಕಾಂಗ್ರೆಸ್ ಪಕ್ಷದ ವಕ್ತಾರರು,ಜನ ಮೆಚ್ಚಿದ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಹೊರ ಹೊಮ್ಮುತ್ತಿರುವ ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ,ರಾಜ್ಯದ ಗಮನ ಸೆಳೆದಿದ್ದಾರೆ… ಇವರು ತಮ್ಮ ಕ್ಷೇತ್ರದಲ್ಲಿ ಪೋಟೋ ಪೋಜ್ ಕೊಟ್ಟು,ಭಾಷಣ ಮಾಡಿ,ಮಹಿಳಾ ದಿನಾಚರಣೆ ಮಾಡದೇ,ಕ್ಷೇತ್ರದಲ್ಲಿ,ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ,ಬಿಪಿ,ಶುಗರ್,ಟಿಬಿ,ಕೊರೋನಾ,ತಪಾಸಣೆ ಮಾಡುವದರ ಜೊತೆಗೆ ಉಚಿತ ಕಣ್ಣಿನ ತಪಾಸಣೆ ಮಾಡಿಸಿ ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಿಳಾ ದಿನಾಚರಣೆಯ ನಿಮಿತ್ಯ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ,ಸುಮಾರು …
Read More »ಜಾಂಬೋಟಿ ರಸ್ತೆಯಲ್ಲಿ ಲೂಟಿ ಮಾಡುತ್ತಿದ್ದ ಐವರ ಅರೆಸ್ಟ್…
ಬೆಳಗಾವಿ- ಬೆಳಗಾವಿ ಜಾಂಬೋಟಿ ರಸ್ತೆಯಲ್ಲಿ ಅಷ್ಟೊಂದು ವಾಹನ ದಟ್ಟನೆ ಇರೋದಿಲ್ಲ, ರಸ್ತೆಯ ಇಕ್ಕೆಲುಗಳಲ್ಲಿ ಅರಣ್ಯಪ್ರದೇಶ ಇರೋದ್ರಿಂದ ಈ ಪ್ರದೇಶ ಬಹುತೇಕ ನಿರ್ಜನವಾಗಿದೆ,ಈ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಚಾಕು ಚೂರಿ ತೋರಿಸಿ ಬೆದರಿಸುತ್ತಿದ್ದ ಐವರ ದರೋಡೆಕೋರರ ಗ್ಯಾಂಗ್ ಈಗ ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ ಬಿದ್ದಿದೆ. ಜಾಂಬೋಟಿ ರಸ್ತೆಯಲ್ಲಿ ಬೈಕ್ ಸಣೆರಿದಂತೆ ಇನ್ನಿತರ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ,ಬೆದರಿಸಿ ಹಣ,ಆಭರಣಗಳನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ವುವಲ್ಲಿ ಬೆಳಗಾವಿ ಪೋಲೀಸರು …
Read More »ಲಸಿಕೆ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿ ಹಿರೇಮಠ
ಬೆಳಗಾವಿ,: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಸಿಇಓ ದರ್ಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಬಿಮ್ಸ್ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡರು. ಸೋಮವಾರ (ಮಾ.15) ಮಧ್ಯಾಹ್ನ ನಗರದ ಬಿಮ್ಸ್ ಆಸ್ಪತ್ರೆಗೆ ಆಗಮಿಸಿದ ಮೂವರು ಹಿರಿಯ ಅಧಿಕಾರಿಗಳು ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, “ಲಸಿಕೆಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಂಡು ಕೋವಿಡ್-೧೯ …
Read More »ಬೆಳಗಾವಿಯಲ್ಲಿ ಶಿವಸೇನೆ ಕಚೇರಿ ಬಂದ್ ಮಾಡಲು ಆಗ್ರಹ…
ಬೆಳಗಾವಿ-ಬೆಳಗಾವಿಯಲ್ಲಿ ಶಿವಸೇನೆ ಕಚೇರಿ ಬಂದ್ ಮಾಡುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಗೃಹ BBB ಸಚಿವರಿಗೆ ಮನವಿ ಅರ್ಪಿಸಿದೆ.ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮನವಿ ಅರ್ಪಿಸಿದರು ಶಿವಸೇನೆ ಬೋರ್ಡ್ ಹೊಂದಿರೋ ವಾಹನ ಜಪ್ತಿ ಮಾಡಲು ಆಗ್ರಹಿಸಿದ್ದುಬೆಳಗಾವಿಯಲ್ಲಿ ಶಿವಸೇನೆ ಕಚೇರಿಯನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕ ಹಾಕಲು,ಕನ್ನಡ ಸಂಘಟನೆಗಳು ಕಾರ್ಯನಿರ್ವಹಿಸಲು ಅವಕಾಶ ಕೊಡದೇ ಇರುವಾಗ,ನಿರಂತರವಾಗಿ ನಾಡವಿರೋಧಿ ಚಟುವಟಿಕೆ …
Read More »ವೈಜ್ಞಾನಿಕ ಮೈನಿಂಗ್ ಮಾದರಿ ಅಳವಡಿಕೆಗೆ ಶೀಘ್ರದಲ್ಲಿ ಚಾಲನೆ: ಸಚಿವ ನಿರಾಣಿ
ಬೆಳಗಾವಿ,: ಖನಿಜ ಸಂಪತ್ತು ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಾಗಿದೆ. ವಿವಿಧ ರಾಜ್ಯಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೊಸ ರೀತಿಯ ಮೈನಿಂಗ್ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರು. ಬೆಳಗಾವಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಛೇರಿ ಮತ್ತು ಜಿಲ್ಲಾ ಖನಿಜ ಭವನ ರವಿವಾರ (ಮಾ.15) ಬಾಕ್ಸೈಟ್ ರಸ್ತೆಯ ಕುಮಾರಸ್ವಾಮಿ ಬಡಾವಣೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. …
Read More »