ಬೆಳಗಾವಿ-ಬೆಳಗಾವಿ ನಗರದ ವಿವಿಧ ಬ್ಯಾಂಕುಗಳಿಗೆ ನಕಲಿ ED ನೋಟೀಸ್ ಕಳಿಸಿ,ಇನ್ಸುರೆನ್ಸ್ ಪಾಲಿಸಿಗಳ ಪ್ರಿಮಿಯಂ ಹಣ ತನ್ನ ಖಾತೆಗೆ ಜಮಾ ಮಾಡಿಸಿ,ಪಾಲಿಸಿದಾರರಿಗೆ ನಕಲಿ ರಸಿದಿ ನೀಡಿ ,ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಖತರ್ನಾಕ್ ವಂಚಕನನ್ನು ಪತ್ತೆ ಮಾಡಿ,ಬೇಡಿ ಹಾಕುವಲ್ಲಿ ಬೆಳಗಾವಿಯ ಸೈಬರ್ ಪೋಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಬೆಳಗಾವಿ ನಗರದ ಕೆಲವು ಬ್ಯಾಂಕುಗಳಿಗೆ ನಕಲಿ ED ನೋಟೀಸ್ ಬಂದಿರುವ ಬಗ್ಗೆ ಬೆಳಗಾವಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು …
Read More »ಫೇಕ್ ಸಿಡಿ ಅಂತಾ ವರದಿ ಬಂದ್ರೆ ರಮೇಶ್ ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ.- ಅಶೋಕ ಪೂಜಾರಿ
ಬೆಳಗಾವಿ-ಸಚಿವ ರಮೇಶ್ ಜಾರಕಿಹೊಳಿ ಅವರು ಲೈಂಗಿಕ ಹಗರಣದಲ್ಲಿ ಸಿಲುಕಿದ್ದು ಕೂಡಲೇ ಸಿಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ,ಈ ಸಿಡಿ ನಿಜವಾಗಿಯೂ ಫೇಕ್ ಅಂತಾ ವರದಿ ಬಂದ್ರೆ ರಮೇಶ್ ಜಾರಕಿಹೊಳಿ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಿಡಿ ನಕಲಿ ಆಗಿದ್ರೆ ಯಾರೂ ಅದಕ್ಕೆ ಬಲಿಪಶು ಆಗುವದು ಬೇಡ ,ರಾಜಕಾರಣ ಬೇರೆ ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರ …
Read More »ಮಟಕಾ ಅಡ್ಡೆ ಮೇಲೆ ರೇಡ್ ಇಬ್ಬರು ಅರೆಸ್ಟ್..
ಬೆಳಗಾವಿ- ಮಟಕಾ ದಂಧೆಯ ವಿರುದ್ದ ಬೆಳಗಾವಿ ಪೋಲೀಸರ ಕಾರ್ಯಾಚರಣೆ ಮುಂದುವರೆದಿದ್ದು,ಇವತ್ತು ಹಿರೇಬಾಗೇವಾಡಿಯ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೋಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಿರೇಬಾಗೇವಾಡಿ ಗ್ರಾಮದ ಬಸ್ ಸ್ಟ್ಯಾಂಡ್ ಬಳಿ ಮಟಕಾ ದಂಧೆ ನಡೆಸುತ್ತಿದ್ದ ಶಾರೂಕ್ ಮುಸ್ತಾಕ ಅತ್ತಾರ್ (24) ಮತ್ತು ಮಹ್ಮದಲಿ ಗೌಸಸಾಬ್ ಸನದಿ (36) ಎಂಬಾತರನ್ನು ಬಂಧಿಸಿ 7560 ರೂಗಳನ್ನು ವಶಕ್ಕೆ ಪಡೆದಿದ್ದು, ಬುಕ್ಕಿ ಶೆಹಬಾಜ್ ತಿಗಡಿ ಎಂಬಾತ ಪರಾರಿಯಾಗಿದ್ದಾನೆ. ಎಂದು ಪೋಲೀಸ್ ಪ್ರಕಟಣೆಯಲ್ಲಿ …
Read More »ಕಸ ಸಂಗ್ರಹಣೆಗೆ ಬೆಳಗಾವಿಗೆ ಬಂದಿವೆ, 35 ಹೊಸ, ಅಟೋ ಟಿಪ್ಪರ್..
ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ವ್ಯವಸ್ಥಿತವಾಗಿ ಕಸ ಸಂಗ್ರಹ ಮಾಡಲು,ಬೆಳಗಾವಿ ಮಹಾನಗರ ಪಾಲಿಕೆ ಸುಧಾರಿತ ಅಟೋ ಟಿಪ್ಪರ್ ಗಳನ್ನು ಖರೀಧಿ ಮಾಡಿದೆ. 14 ನೇಯ ಹಣಕಾಸು ಯೋಜನೆಯ,2.75 ಕೋಟಿ ರೂ ಅನುದಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ 35 ಟಿಪ್ಪರ್ ಗಳನ್ನು ಖರೀಧಿ ಮಾಡಿದ್ದು 35 ಟಿಪ್ಪರ್ ಗಳು ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ಪಾರ್ಕ್ ಆಗಿವೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಅವರು ಬೆಳಗಾವಿ ಮಹಾನಗರದಲ್ಲಿ ವ್ಯೆವಸ್ಥಿತವಾದ ಕಸ ಸಂಗ್ರಹಕ್ಕೆ …
Read More »2023 ಕ್ಕೆ ಸಿಎಂ ಆಗಲು, ಆಂಜನೇಯನ ಆಶೀರ್ವಾದ
ಸಿಎಂ ಆಗೋ ಶುಭ ಸೂಚನೆ ತೋರಿದ ವಾನರ! ಬೆಳಗಾವಿ(ಮಾರ್ಚ್9)- KPCC ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ರಾಜಕೀಯದಲ್ಲಿ ಸಿಎಂ ಆಗೋ ಉನ್ನತ ಕನಸು ಕಂಡಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಪಕ್ಷ ಸಂಘಟನೆಗೆ ಬೆಳಗಾವಿ, ರಾಜ್ಯದಲ್ಲಿ ಶತಪ್ರಯತ್ನ ಆರಂಭಿಸಿದ್ದಾರೆ. ಇವರಿಗೆ ವಾನರವೊಂದು ಶುಭ ಸೂಚನೆ ನೀಡಿದೆ. ಇದು ಅಭಿಮಾನಿಗಳು ಸಂತಸಕ್ಕೆ ಕಾರಣವಾಗಿದ್ದು, ಆದರೇ ಸ್ವತಃ ಸತೀಶ ಜಾರಕಿಹೊಳಿ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಾರೆ. ಇತ್ತೀಚೆಗೆ ಬೆಳಗಾವಿಯ ಭೂತರಾಮನಹಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಸಿಂಹಗಳು ಬಂದಿದ್ದು. …
Read More »ಬಜೆಟ್ ನಲ್ಲಿ ಬೆಳಗಾವಿಗೆ ಬಂಪರ್…!!!
ಬೆಳಗಾವಿ:ಸಿಎಂ ಯಡಿಯೂರಪ್ಪ ಸೋಮವಾರ ವಿಧಾನಸೌಧದಲ್ಲಿ ಮಂಡಿಸಿರುವ ೨೦೨೧-೨೨ನೇ ಸಾಲಿನ ಮುಂಗಡ ಪತ್ರ ಗಡಿ ನಾಡು ಬೆಳಗಾವಿ ಜನತೆಯ ನಿರೀಕ್ಷೆ ಹುಸಿಗೊಳಿಸಿದೆ. ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ಮಾನ ನೀಡುವುದು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಚಿಕ್ಕೋಡಿ ಮತ್ತು ಗೋಕಾಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು. ಸುವರ್ಣವಿಧಾನಸೌಧಕ್ಕೆ ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸುವುದು, ಬೆಳಗಾವಿ ನಗರದಲ್ಲಿ ಪ್ಲೈಓವರ್ ನಿರ್ಮಿಸುವುದು, ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವಕ್ಕೆ ೧ ಕೋಟಿ ರೂಪಾಯಿ ಅನುದಾನ ನೀಡಬೇಕು. ಸುವರ್ಣವಿಧಾನಸೌಧದ ಎದುರು …
Read More »ಗಡಿನಾಡಿನಲ್ಲಿ , ಮತ್ತೆ ಬಾಲ ಬಿಚ್ವಿದ ಕಂಗಾಲ್ ಕಂಪನಿ…!!
ಬೆಳಗಾವಿ-ಸರ್ಕಾರ ಗಡಿ ಭಾಗದ ಮರಾಠಿ ಭಾಷಿಕರಿಗೆ ಎಲ್ಲ ರೀತಿಯ ಸವಲತ್ತು ನೀಡಿದ್ರೂ ನಾಡದ್ರೋಹಿ ಎಂಈಎಸ್ ಗಡಿಯಲ್ಲಿ ಪುಂಡಾಟಿಕೆ ನಿಲ್ಲಿಸುತ್ತಿಲ್ಲ,ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ಅದು ತಿಪ್ಪೆ ಸವರುವದನ್ನು ಬಿಡೋದಿಲ್ಲ ಎನ್ಮುವಂತೆ ಎಂಈಎಸ್ ಮತ್ತು ಶಿವಸೇನೆಯ ಕಿತಾಪತಿ ಮುಂದುವರೆದಿದೆ,ಈ ನಾಡದ್ರೋಹಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ಕಾಲು ಕೆರೆದು ಜಗಳಕ್ಕೆ ಬರ್ತಿರುವ ಎಂಇಎಸ್, ಶಿವಸೇನೆ ಪುಂಡರು ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಇಂದೂ ಸಹ ಪುಂಡಾಟಿಕೆ ಪ್ರದರ್ಶಿಸಿದರು. …
Read More »ಪಾಲಿಕೆ ಎದುರು ಭಗವಾ ಧ್ವಜ ಹಾರಿಸಲು ಯತ್ನ,ಎಂಈಎಸ್ ಕಾರ್ಯಕರ್ತೆಯರ ವಶಕ್ಕೆ
ಬೆಳಗಾವಿ- ಮಹಾನಗರ ಪಾಲಿಕೆಯ ಎದರು ಭಗವಾ ಧ್ವಜ ಹಾರಿಸಲು ಯತ್ನಿಸಿದ ಐವರು ಮಹಿಳಾ ಕಾರ್ಯಕರ್ತೆಯರನ್ನು ಪೋಲೀಸರು ವಶಕ್ಕೆ ಪಡೆದಿದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ಎದರು ಕನ್ನಡಿಗರು ಕನ್ನಡ ಧ್ವಜ ಹಾರಿಸಿದ್ದನ್ನು ವಿರೋಧಿಸಿ,ಎಂಈಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿರುವಾಗ,ಇನ್ನೊಂದೆಡೆ ಮಹಿಳಾ ಕಾರ್ಯಕರ್ತೆಯರು ಪಾಲಿಕೆ ಎದರು ಭಗವಾ ಧ್ವಜ ಹಾರಿಸುವ ವಿಫಲ ಯತ್ನ ನಡೆಸಿದ್ದಾರೆ. ಸುಮಾರು ಐದು ಜನ ಮಹಿಳಾ ಕಾರ್ಯಕರ್ತೆ ಯರು ಘೋಷಣೆ ಕೂಗುತ್ತ …
Read More »ಬೆಳಗಾವಿಯಲ್ಲಿ 6.675 ಟನ್ ಸ್ಪೋಟಕ ಪತ್ತೆ
ಬೆಳಗಾವಿ-ನಿಯಮಗಳನ್ನು ಉಲಂಘಿಸಿ ನಿರ್ಲಕ್ಷ್ಯತನ ಹಾಗೂ ಮಾನವ ಪ್ರಾಣಕ್ಕೆ ಅಪಾಯವಾಗುವತೆ ಸಾಗಿಸುತ್ತಿದ ಅಂದಾಜು ಸುಮಾರು 4 ಲಕ್ಷ ಮೌಲ್ಯದ 6.675 ಟನ್ ಬಾರಿ ಸ್ಪೋಟಕ ವಸ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಕಾಕತಿ ಪೊಲೀಸ್ ನಿರೀಕ್ಷಕರು ಹಳ್ಳೂರ ರವರ ನೇತ್ರತ್ವದ ತಂಡವು ಸ್ಪೋಟಕ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ವಾಗಿ ಹಾಗೂ ಮಾನವ ಪ್ರಾಣಕ್ಕೆ ಅಪಾಯವಾಗುವಂತೆ ಸಾಗಿಸುತ್ತಿದ್ದ ಅಂದಾಜು 4 ಲಕ್ಷ ಮೌಲ್ಯದ 6.675 ಟನ್ ಸ್ಪೋಟಕ ವಸ್ತುಗಳನ್ನು ಹೊನಗಾ ಗ್ರಾಮದ ಸ್ಪೂರ್ತಿ ದಾಬಾದ …
Read More »ಆಸ್ತಿಗಾಗಿ ತಂದೆಯನ್ನೇ ಮರ್ಡರ್ ಮಾಡಿದ ಕಿರಾತಕ ಮಗ..!
ಬೆಳಗಾವಿ- ಆಸ್ತಿಗಾಗಿ,ದುಡ್ಡಿಗಾಗಿ ತಂದೆಯನ್ನೇ ಮಗನೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿತ್ತು,ಮಗ ಮಾಡಿದ ಹಲ್ಲೆಯಿಂದ ತಂದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು,ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಪಾಟೀಲ ಮಾಳಾದಲ್ಲಿ ವಾಸವಿರುವ ಲಕ್ಷ್ಮಣ ಲಕ್ಕಪ್ಪ ಶಿರೂರ, ವಯಾ-50 ವರ್ಷ ಇವರ ಮಗ ಆರೋಪಿ ಸೋಮನಾಥ ಲಕ್ಷ್ಮಣ ಶಿರೂರ, ಸಾ-ಕೊತ್ವಾಲ್ ಗಲ್ಲಿ, ಬೆಳಗಾವಿ ಇವನು …
Read More »