Breaking News

Breaking News

ಉದ್ಧವ ಠಾಖ್ರೇ ನಿಂದೇನ್ ಐತಿ….ಮುಂಬಯಿ ನಮ್ದ ಐತಿ….!!!

ಬೆಳಗಾವಿ- ಗಡಿ ಬೆಳಗಾವಿಯಲ್ಲಿ ಕನ್ನಡದ ಹುಡುಗ್ರು ಈಗ ಹೊಸ ಘೋಷಣೆ ಹಾಕುತ್ತಿದ್ದಾರೆ.ಅದೇಂದ್ರೆ,ಯಾರಪ್ಪಂದ್ ಏನ್ ಐತಿ,ಮುಂಬಯಿ ನಮ್ದ ಐತಿ..ಉದ್ಧವ ಠಾಖ್ರೇದ ಏನ್ ಐತಿ,ಮುಂಬಯಿ ನಮ್ದ ಐತಿ ಎನ್ನುವ ಘೋಷಣೆಗಳು ಈಗ ಬೆಳಗಾವಿಯಲ್ಲಿ ಮೊಳಗುತ್ತಿವೆ. ಕರುನಾಡ ಯುವ ಸೇನೆ ಕಾರ್ಯಕರ್ತರು ಇಂದು ಬೆಳಗಾವಿಯ ಚನ್ನಮ್ಮ ಸರ್ಕಲ್‌ ನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತ ಪಡಿಸಿದರು,ಮುಂಬಯಿ- ಕರ್ನಾಟಕ ಪ್ರದೇಶವನ್ನು ಕನ್ನಡದ ರಾಜರೇ ಆಳಿದ್ದಾರೆ.ಮುಂಬಯಿ ಕೂಡಾ ಕರ್ನಾಟಕ ರಾಜ್ಯಕ್ಕೆ ಸೇರಬೇಕು …

Read More »

ರೇಲ್ವೆ ಟ್ರ್ಯಾಕ್ ಮೇಲೆ ಮಲಗಿ ಒಂದೇ ಕುಡುಂಬದ ನಾಲ್ವರ ಆತ್ಮಹತ್ಯೆ…..

ಬೆಳಗಾವಿ-ಇತ್ತೀಚಿಗೆ ಬೆಳಗಾವಿ ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಅದರಲ್ಲಿಯೂ,ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನಡೆಯುತ್ತಿರುವದು ಆತಂಕದ ಸಂಗತಿಯಾಗಿದೆ. ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ,ಬೆಳಗಾವಿ ಜಿಲ್ಲೆ ರಾಯಬಾಗ ರೈಲುನಿಲ್ದಾಣ ಬಳಿ ನಡೆದಿದೆ. ವೃದ್ಧ ತಂದೆ, ತಾಯಿ, ಇಬ್ಬರು ಗಂಡು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು,ನಿನ್ನೆ ರಾತ್ರಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು …

Read More »

ಹೆಸರು ನೊಂದಾಯಿಸಿದ ಎಲ್ಲರಿಗೂ ಇಂಜೆಕ್ಷನ್ ಕೊಡಿ…

ಬೆಳಗಾವಿ, ಕೋವಿಡ್-೧೯ ಲಸಿಕಾಕರಣ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ಕೈಗೊಂಡು ನೋಂದಾಯಿತ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಜ.27) ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬೀಜ-ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಕೆಲವು ದೂರುಗಳು ಬಂದಿರುತ್ತವೆ. ಈ ಬಗ್ಗೆ …

Read More »

ಮುಂಬಯಿ ಯಲ್ಲಿ ಬೆಳಗಾವಿ ಲಡಾಯಿ….!!

ಬೆಳಗಾವಿ-ಮುಂಬೈನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಬೆಳಗಾವಿ ಗಡಿವಿವಾದದ ಕುರಿತು ಸರ್ಕಾರವೇ ರಚಿಸಿದ ಪುಸ್ತಕ ಬಿಡುಗಡೆ ಮಾಡಿ ಮತ್ತೇ ಕಾಲು ಕೆದರಿ ಜಗಳ ಶುರು ಮಾಡಿದ್ದಾರೆ. ಮಹಾರಾಷ್ಟ್ರ ಕರ್ನಾಟಕ ಸೀಮಾವಾದ ಸಂಘರ್ಷ ಅನೀ, ಸಂಕಲ್ಪ ಪುಸ್ತಕ ಬಿಡುಗಡೆಗೊಳಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಮುಗ್ಧ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಪ್ರಚೋದನಾತ್ಮಕ ಪುಸ್ತಕ ಬಿಡುಗಡೆ ಮಾಡಿ ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ …

Read More »

ಮಹಾರಾಷ್ಟ್ರ ಸರ್ಕಾರದಿಂದ ಮತ್ತೇ ಗಡಿ ಕ್ಯಾತೆ….

ಬೆಳಗಾವಿ-ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದಿಂದ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಖ್ರೆ ಮತ್ತೊಂದು ಕ್ಯಾತೆ ತೆಗೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಕಾಲು ಕೆದರಿ ಜಗಳಕ್ಕೆ ಬರೋಕೆ ಮಹಾರಾಷ್ಟ್ರ ಸಿದ್ಧ ಮಾಡಿಕೊಂಡಿದ್ದು, ಗಡಿ ವಿವಾದಿತ ವಿಚಾರ ಒಳಗೊಂಡ ಪುಸ್ತಕ ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮಹಾರಾಷ್ಟ್ರ ಸರ್ಕಾರದಿಂದಲೇ ಸಿದ್ಧಗೊಂಡಿರೋ ಗಡಿ ವಿವಾದ ಕುರಿತ ಪುಸ್ತಕವನ್ನು ನಾಳೆ ಬಿಡುಗಡೆಯಾಗಲಿದೆ.ವಿಚಾರ ಒಗ್ಗಟ್ಟು ತೋರಿಸಲು ಮಹಾ ನಾಯಕರ …

Read More »

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ರೂ ನೀಡಿದ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಎರಡು ಲಕ್ಷ ರೂ ದೇಣಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಭಾರತೀಯ ಜನತಾ ಪಕ್ಷ ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುತ್ತಿದ್ದು,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎರಡು ಲಕ್ಷ ರೂ ದೇಣಿಗೆ ನೀಡುವ ಮೂಲಕ ಭಕ್ತಿಯ ಭಂಡಾರ ಹರಿಸಿದ್ದಾರೆ. ದೇಶಾದ್ಯಂತ ಶ್ರೀ ರಾಮ ಮಂದಿರ ನಿರ್ಮಾಣಕ್ಕೊಸ್ಕರ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ …

Read More »

ಬೆಳಗಾವಿಯಲ್ಲಿ ಜಿಲಿಟೀನ್ ಸ್ಪೋಟಕ ವಶ..

ಬೆಳಗಾವಿ-ಶಿವಮೊಗ್ಗ ಜಿಲ್ಲೆಯ ಹುಣಸೋಡಿ ಗ್ರಾಮದಲ್ಲಿ ಜಿಲಿಟೀನ್ ಸ್ಪೋಟಕ ಹಲವಾರು ಜನರನ್ನು ಬಲಿ ಪಡೆದ ಬೆನ್ನಲ್ಲಿಯೇ ಬೆಳಗಾವಿ ಆಂತರಿಕ ಭದ್ರತೆ ವಿಭಾಗದ ಪೋಲೀಸರು ಜಿಲಿಟೀನ್ ಸ್ಪೋಟಕ ವಶ ಪಡಿಸಿಕೊಂಡಿದ್ದಾರೆ. ಗೋಕಾಕ ತಾಲ್ಲೂಕಿನ ಕುಲಗೋಡ ಠಾಣಾ ವ್ಯಾಪ್ತಿಯಲ್ಲಿ,ಮನ್ನಿಕೇರಿ ಗ್ರಾಮದ ಹದ್ದಿಯಲ್ಲಿ ಆಂತರಿ ಭದ್ರತಾ ವಿಭಾಗದ ಪೋಲೀಸರು ಪೆಟ್ರೋಲೀಂಗ್ ಮಾಡುವಾಗ ಟ್ರ್ಯಾಕ್ಟರ್ ನಲ್ಲಿ ಜಿಲಿಟೀನ್ ಸ್ಪೋಟಕ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ ಜಿಲೀಟೀನ್ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿ 49 ಜಿಲಿಟೀನ್ ಕಡ್ಡಿಗಳು,23 ಈಡಿ ಕೇಬಲ್ …

Read More »

ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಹಿತಿಯೇ ನನಗಿರಲಿಲ್ಲ

ಬೆಳಗಾವಿ-ರೆಸಾರ್ಟ್ ವಾಸ್ತವ್ಯ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ‌ ಸ್ಪಷ್ಟನೆ ನೀಡಿದ್ದು,ಚಿಕ್ಕಮಗಳೂರು ಪ್ರವಾಸ ಒಂದು ವಾರದ ಮೊದಲೇ ನಿಗದಿಯಾಗಿತ್ತು,ನನ್ನ ಪ್ರವಾಸದ ಮಾಹಿತಿ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮೊದಲೇ ಕಳುಹಿಸಲಾಗಿತ್ತು,ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಹಿತಿಯೇ ನನಗಿರಲಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಹೇಳಿದ್ದಾರೆ. ಗಣರಾಜ್ಯೋತ್ಸವ ಧ್ವಜಾರೋಹಣ ಬಳಿಕ ಸಚಿವ ರಮೇಶ್ ಜಾರಕಿಹೊಳಿ‌ ಸುದ್ದಿಗೋಷ್ಠಿ ನಡೆಸಿದ ಅವರು,ಆದರೆ ನಮಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ವರದಿ ಬಂದವು,ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.ಮಾರ್ಚ್ ನಂತರ …

Read More »

ಬೆಳಗಾವಿಯಲ್ಲಿ ಪರೇಡ್ ಮಾಡಲು ಗೌಡ್ರು 300 ಟ್ರ್ಯಾಕ್ಟರ್ ತರ್ತಾರಂತೆ…..!!

ಬೆಳಗಾವಿ- ದಿಲ್ಲಿ ಬಾಳ ದೂರ ಐತಿ ಅದಕ್ಕೆ ನಾವು ಬೆಳಗಾವಿಯಲ್ಲೇ ಪರೇಡ್ ಮಾಡ್ತೀವಿ,ಬೆಳಗಾವಿಗೆ ಪರೇಡ್ ಮಾಡಲು 300 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬರ್ತಾವ್ ಎಂದು ರೈತ ಮುಖಂಡ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಹೇಳಿದ್ದಾರೆ. ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಖಂಡಿಸಿ ನಾಳೆ ಬೆಳಗಾವಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಮಾಡುತ್ತೇವೆ,ಕೇವಲ ದೆಹಲಿಯಲ್ಲಿ ಅಷ್ಟೇ ಅಲ್ಲ,ಬೆಳಗಾವಿಯಲ್ಲೂ ಪರೇಡ್ ನಡೆಯಲಿದೆ ಎಂದರು …

Read More »

ಇಂದಿನಿಂದ ಬೆಳಗಾವಿ- ನಾಸೀಕ್ ನಡುವೆ ನೇರ ವಿಮಾನ ಸೇವೆ…

ಬೆಳಗಾವಿ:ಎರಡನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸ್ಟಾರ್ ಏರ್ಲೈನ್ಸ್ ಸಂಸ್ಥೆ ಇಂದಿನಿಂದ ಬೆಳಗಾವಿ-ನಾಸಿಕ್ ಮಾರ್ಗ ಮಧ್ಯೆ ನೇರ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಸ್ಟಾರ್ ಏರ್ಲೈನ್ಸ್ ನಿರ್ದೇಶಕ ಶ್ರೇಣಿಕ್ ಘೋಡಾವತ್ ತಿಳಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ಅವರು,‌ ಇಂದಿನಿಂದಲೇ ವಿಮಾನ ಸೇವೆ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ಸ್ಟಾರ್ ಏರ್ಲೈನ್ಸ್ ತನ್ನ ಸೇವೆ ವಿಸ್ತರಿಸುತ್ತಿದೆ ಎಂದರು. ಸ್ಟಾರ್ ಏರ್ಲೈನ್ಸ್ ಈಗಾಗಲೇ ಅಹ್ಮದಾಬಾದ್, ಅಜ್ಮೀರ್, ಬೆಂಗಳೂರು, ದೆಹಲಿ, ಬೆಳಗಾವಿ, ಹುಬ್ಬಳ್ಳಿ, ತಿರುಪತಿ, ಇಂದೋರ್, ಕಲಬುರ್ಗಿ, …

Read More »