ಬೆಳಗಾವಿ- ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲಿಸುವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವನ್ನು ಮಾದ್ಯಮಗಳು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದಾಗ, ನಿಲ್ಲಾವ್ರು ಗಟ್ಟಿ ಇದಾರೆ, ನಮ್ಮ ಕ್ಯಾಂಡಿಡೇಟ್ ಗಟ್ಟಿ ಇದೆ, ನಮ್ಮ ಕ್ಯಾಂಡಿಡೇಟ್ ಕೂಡಾ ಅದ್ರ ಇಲ್ಲಾ ಬಿಡಿ ನಮ್ಮದು ಕ್ಯಾಂಡಿಡೇಟ್ ಕೂಡಾ ಗಟ್ಟಿ ಇದೆ ಎಂದು ಸತೀಶ್ ಜಾರಕಿಹೊಳಿ ಉತ್ತರಿಸಿದರು. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಲಕ್ಷ್ಮೀ …
Read More »ಐದಾರು ತಿಂಗಳಲ್ಲಿ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ ಮಾಡೋಣ.
ಗೋಕಾಕ್ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ವಿಚಾರ ; ಗೋಕಾಕ್ ನ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಚಿವ ರಮೇಶ್ ಜಾರಕಿಹೋಳಿ ಭೇಟಿ. ಗೋಕಾಕ್ ನಿವಾಸದಲ್ಲಿ ಸಚಿವರನ್ನ ಭೇಟಿ ಮಾಡಿ ಮಾತುಕತೆ.ಭೇಟಿ ನಂತರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಹೇಳಿಕೆ ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಗೋಕಾಕ್- ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ನಿರ್ಣಯ ಮಾಡಲಾಗಿತ್ತು ಬೈಲಹೊಂಗಲದವರು ನಮಗೂ ಪ್ರತ್ಯೇಕ ಜಿಲ್ಲೆ ಕೊಡಿ ಅಂತ ಹೇಳಿದ್ದರಿಂದ ಈ …
Read More »ಬೇಟೆಯಾಡಿ, ಓಡಿಹೋಗಿದ್ದ,ಬೇಟೆಗಾರ,ಇವತ್ತೂ ಪರಾರಿಯಾದ…!!!
ಬೆಳಗಾವಿ- ಕಿತ್ತೂರು ಸಮೀಪದ ಕುಲ್ಲಹಳ್ಳಿ ಜಂಗಲ್ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ತಲೆಮರಿಸಿಕೊಂಡಿದ್ದ ಬೇಟೆಗಾರನ ಮನೆಗೆ ಇಂದು ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಾವಿಯ ಅಶೋಕ ನಗರದಲ್ಲಿ ಮೆಹಮೂದ್ ಅಲಿ ಖಾನ್ (50) ವರ್ಷದ ಬೇಟೆಗಾರನ ಮನೆಗೆ ದಾಳಿ ಮಾಡಿರುವ ಅರಣ್ಯ ಅಧಿಕಾರಿಗಳು ಬೇಟೆ ಆಡಲು ಬಳಿಸುವ ರೈಫಲ್,ಜೀವಂತ ಗುಂಡು,ಚಾಕೂ,ಚೂರಿ,ಟಾರ್ಚ್..ವಾಕಿ ಟಾಕಿ,ಮತ್ತು ದುರ್ಬಿನ್,ಮತ್ತು ವಾಹನಕ್ಕೆ ಅಳವಡಿಸುವ ಸರ್ಚ ಲೈಟ್ ,ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಇಂದು ಬೆಳಗ್ಗೆ ಬೇಟೆಗಾರನ …
Read More »ಮಚ್ಛೆ ಗ್ರಾಮದಲ್ಲಿ ಬಿಗ್ ಗ್ಯಾಂಬಲಿಂಗ್ ಬಿಗ್ ರೇಡ್….!!!
ಬೆಳಗಾವಿ- ಬೆಳಗಾವಿ ಪಕ್ಕದ ಮಚ್ಛೇ ಗ್ರಾಮದಲ್ಲಿ ಅತೀ ದೊಡ್ಡ ಇಸ್ಪೀಟ್ ಆಟ ನಡೆದಿತ್ತು ದಾಳಿ ಮಾಡಿದ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಪೋಲೀಸರು, 83 ಸಾವಿರ ನಗದು,16 ಬೈಕ್, 16 ಮೋಬೈಲ್, ವಶಪಡಿಸಿಕೊಂಡು, 12 ಜನರನ್ನು ಬಂಧಿಸಿದ್ದಾರೆ. 1)ಇಮ್ತಿಯಾಜ್ ಅಬ್ದುಲ್ ಲತಿಫ್ ಅತ್ತಾರ, ವಯಾ :30 ವರ್ಷ ಸಾ, ಗಾಂಧಿನಗರ ಖಾನಪುರ ಜಿ, ಬೆಳಗಾವಿ 2)ಸಮೀರ್ ಚಾನಂದ ಸಾಬ್ ಬಾಳೆಕುಂದ್ರಿ, ವಯಸ್ಸು, 42 ವರ್ಷ ಸಾ, ಅಂಬೇಡ್ಕರ್ ನಗರ ಅನಾಗೋಲ್ …
Read More »ಅಪ್ಪಾಜೀ, ಫೀಲ್ಡೀಂಗ್….ರಾಹುಲ್ ಬ್ಯಾಟೀಂಗ್…!!
ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಕ್ರೀಯಾಶೀಲರಾಗಿದ್ದಾರೆ.ಇಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಕ್ರೀಯವಾಗಿರುವ ರಾಹುಲ್ ಈ ಕ್ಷೇತ್ರದಲ್ಲಿ ತಂದೆಯ ಪರವಾಗಿ ಬ್ಯಾಟೀಂಗ್ ನಡೆಸಿದ್ದಾರೆ…. ಬೆಳಗಾವಿ : ‘ಕ್ರೀಡೆಯಲ್ಲಿ ನಿರಂತರ ಪ್ರಯತ್ನದಿಂದ ಹಂತ ಹಂತವಾಗಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಯಾವುದೇ ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದ್ರೆ, ಕಠಿಣ ಪರಿಶ್ರಮ ಮುಖ್ಯ. ಕ್ರೀಡಾಪಟುಗಳು ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು’ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಕಡೋಲಿ …
Read More »ಕೋವೀಡ್ ವ್ಯಾಕ್ಸೀನ್ ತುರ್ತು ಬಳಕೆಗೆ ಸಿಕ್ಕಿತು ಕೇಂದ್ರದ ಪರ್ಮಿಷನ್..!!
ಬೆಳಗಾವಿ- ಕೊವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಸಂತಸ ತಂದಿದೆ ಎಂದುಬೆಳಗಾವಿಯಲ್ಲಿ ಡಾಕ್ಟರ್ ಅಮಿತ್ ಭಾತೆ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು, ಕೋವ್ಯಾಕ್ಸಿನ್ ಬಳಕೆ ಅನುಮತಿ ಕೊಟ್ಟಿದ್ದು ಸಂತಸ ತಂದಿದೆ, ಕೊರೊನಾ ವಾರಿಯರ್ಸ್ ಗೆ ಮೊದಲ ಹಂತದಲ್ಲಿ ಲಸಿಕೆ ನಂತರ 50 ವರ್ಷದ ಮೇಲ್ಪಟ ಹಿರಿಯ ನಾಯಕರಿಗೆ ಲಸಿಕೆ ಮೊದಲು ಹಂತ ಲಸಿಕೆ ಪ್ರಯೋಗ ಮಾಡಿದಾಗ ತುಂಬ ಕಷ್ಟ ಇತ್ತು ಮೊದಲು ಸ್ವಯಂ …
Read More »ಗೋಕಾಕಿನಲ್ಲಿ ಸಾವಿತ್ರಿಬಾಯಿ ಪುಲೆ ಸ್ಮರಣೆ….
ಗೋಕಾಕ : ಸಾವಿತ್ರಿ ಬಾಯಿ ಫುಲೆ ಅವರು ಮೇಲ್ವರ್ಗ ಜಾತಿ, ವ್ಯಕ್ತಿಗಳಿಗೆ ಮೀಸಲಾಗಿದ್ದ ಶಿಕ್ಷಣವನ್ನು ಶೋಷಿತ ಸಮುದಾಯಗಳಿಗೆ ಮುಟ್ಟಿಸುವಲ್ಲಿ ಶ್ರಮಿಸಿದವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಹಿಲ್ ಗಾರ್ಡನ್ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಸಾವಿತ್ರಿ ಬಾಯಿ ಫುಲೆ ಅವರ 190ನೇ ಜಯಂತಿ ಅಂಗವಾಗಿಯೇ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಸಾವಿತ್ರಿ ಬಾಯಿ ಫುಲೆ ಅವರ ಹೋರಾಟ, ಜೀವನ ಚರಿತ್ರೆ …
Read More »ಸುರೇಶ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಡಲಿ
ಗೋಕಾಕ : ಬೆಳಗಾವಿ ಲೋಕಸಭಾ ಉಪಚುನಾವಣಾ ಬಿಜೆಪಿ ಟಿಕೆಟ್ ದಿ.ಸುರೇಶ ಅಂಗಡಿ ಕುಟುಂಬದವರಿಗೆ ನೀಡಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಅಂತಾ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಬೆಂಬಲಿತ ನೂತನ ಗ್ರಾ.ಪಂ. ಸದಸ್ಯರಿಗೆ ಸತ್ಕಾರ್ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಟಿಕೆಟ್ ಅಂಗಡಿ ಕುಟುಂಬದವರಿಗೆ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ. ಆದ್ರೆ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾನು ಬದ್ಧನಾಗಿರುತ್ತೇನೆ …
Read More »ಬೆಳಗಾವಿಯಲ್ಲಿ,ಹುಲಿ,ಸಿಂಹ ,ಚಿರತೆ,ಕರಡಿ ತಂದು ಬಿಡಿ….!!!
ಬೆಳಗಾವಿ :ಮೈಸೂರು ಮೃಗಾಲಯ ಮಾದರಿಯಲ್ಲೇ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಕಿತ್ತೂರು ಚನ್ನಮ್ಮ ಮೃಗಾಲಯ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಶನಿವಾರ ಸಚಿವ ರಮೇಶ ಜಾರಕಿಹೊಳಿಗೆ ಮನವಿ ಸಲ್ಲಿಸಿದರು. ಬೆಳಗಾವಿ ನಗರ ಸ್ಮಾರ್ಟ್‌ಸಿಟಿಯಾಗುತ್ತಿದೆ. ಜಿಲ್ಲೆಯಲ್ಲಿ ಗೋಕಾಕ ಫಾಲ್ಸ್, ಗೊಡಚಿನಮಲ್ಕಿ ಫಾಲ್ಸ್, ಭೀಮಗಡ ಅಭಿಯಾರಣ್ಯ, ಘಟಪ್ರಭಾ ಜಲಾಶಯ, ಶಿರೂರ ಜಲಾಶಯ, ಮಲಪ್ರಭಾ ಜಲಾಶಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ …
Read More »ಹಳ್ಳದಲ್ಲಿ ಮುಳುಗಿ ಯುವಕನ ಸಾವು…
ಬೆಳಗಾವಿ-ಹಳ್ಳದಲ್ಲಿ ಮುಳುಗಿ ಯುವಕನೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿ ತಾಲ್ಲೂಕಿನ ಮುತ್ನಾಳ ಗ್ರಾಮದಲ್ಲಿ ನಡೆದಿದೆ. ವಿಠ್ಠಲ ಉದಯ ಉಪರಿ 20 ವರ್ಷದ ಯುವಕ ಇಂದು ಮುತ್ನಾಳ ಗ್ರಾಮದ ಹದ್ದಿಯಲ್ಲಿರುವ ಹಳ್ಳದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.ಮೃತಯುವಕನಿಗೆ ಈಜಲು ಬರುತ್ತಿರಲಿಲ್ಲ ಎಂದು ಗೊತ್ತಾಗಿದೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Read More »