Breaking News

Breaking News

ಮರವಣಿಗೆ,ಐತೇನ್ರೀ…ಡಾಲಬೀ ಬರತೈತಿ ಏನ್ರೀ….ನಾವೂ ಬೆಳಗಾವಿಗೆ ಬರಬಹುದೇನ್ರೀ….???

ಬೆಳಗಾವಿ- ಕೋವೀಡ್ ಹಿನ್ನಲೆಯಲ್ಲಿ ಈ ಬಾರಿ ಬೆಳಗಾವಿ ನಗರದಲ್ಲಿ ಮೆರವಣಿಗೆಯೂ ಇಲ್ಲ,ಡಾಲಬೀ ಸೌಂಡು ಇಲ್ಲ,ಡ್ಯಾನ್ಸೂ ಇಲ್ಲ, ಅಂತಾ ಹೋ ಕೊಂಡ್ರೂ ನಮ್ಮ ಹುಡುಗೋರು,ಫೋನ್ ಮಾಡಿ,ಬೆಳಗಾವಿ ಬಂದು ಚನ್ನಮ್ಮನ ಮೂರ್ತಿಗೆ ಹೂವಿನ ಹಾರ ಹಾಕಿ,ಹೋದ್ರ ನಡಿತೈತಿ ಏನ್ರೀ ಅಂತ ಫೋನ್ ಮಾಡಾಕ ಹತ್ಯಾರ….. ರಾತ್ರಿ ಹನ್ನೆರಡ ಗಂಟೆಗೆ ಕೈಯ್ಯಾಗ ಝೇಂಡಾ ಹಿಡ್ಕೊಂಡ ಗಾಡಿ ಎಕ್ಸಿಲೇಟರ್ ತಿರವಿ ಜೈ..ಜೈ ಅಂತ ಕೂಗುತ್ತ ನಮ್ಮ ಹುಡುಗೋರ ,ಚನ್ನಮ್ಮ ಸರ್ಕಲ್ ಕಡೆ ಬರೋದನ್ನ ನೋಡಿದ್ರ,ಅಭಿಮಾನವನ್ನು ಯಾರೂ …

Read More »

ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಕಿತ್ತೂರು ಕೋಟೆಯ ಲುಕ್….!

  ಬೆಳಗಾವಿ- ಮೈಸೂರಿನಲ್ಲಿ ಪಳಗಿ ಬಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಅವರು ಸದ್ದಿಲ್ಲದೇ ಬೆಳಗಾವಿಯ ಐತಿಹಾಸಿಕ ಚನ್ನಮ್ಮ ವೃತ್ತಕ್ಕೆ ವೀರರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಸೂಚಿಸು ಲುಕ್ ನೀಡುತ್ತಿದ್ದಾರೆ. ಮೈಸೂರು ಮಾದರಿಯಲ್ಲೇ ಚನ್ನಮ್ಮಾಜಿಯ ಹೋರಾಟದ ಚಿತ್ರಣ,ಕಿತ್ತೂರು ಕೋಟೆಯ ಗತವೈಭವ ಮರಕಳಿಸುವ ಅಲಂಕಾರವನ್ನು ಚನ್ನಮ್ಮನ ಮೂರ್ತಿಯ ನಾಲ್ಕು ದಿಕ್ಕುಗಳಲ್ಲಿ ಬೇರೆ,ಬೇರೆ ಚಿತ್ರಗಳನ್ನು ಅಳವಡಿಸಿ,ಈ ವೃತ್ತಕ್ಕೆ ಹೊಸ ಮೆರಗು ನೀಡುತ್ತಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಈ ವರ್ಷ …

Read More »

ಬಳಸಿದಷ್ಟು ಬೆಳೆದೀತು ಕನ್ನಡ ಭಾಷೆ” ಸಾಹಿತಿಗಳ ಅಭಿಮತ

ಬೆಳಗಾವಿ, -ಇಂಗ್ಲಿಷ್ ಮೋಹದಲ್ಲಿ‌ ಕನ್ನಡದ ಅಸ್ಮಿತೆ ಕಳೆದುಹೋಗಬಾರದು; ಬರೀ ಹೋರಾಟ, ಭಾಷಣದಿಂದ ಭಾಷೆ ಬೆಳೆಯುವುದಿಲ್ಲ; ಅದರ ಜತೆಗೆ ಬಳಕೆಯಿಂದ ಭಾಷೆ ಉಳಿಸೋಣ; ಗಡಿ ಗಟ್ಟಿಗೊಳಿಸಲು ಕನ್ನಡ ಶಾಲೆ ಗಟ್ಟಿಗೊಳಿಸುವುದರ ಜತೆಗೆ ಇಂಗ್ಲಿಷ್ ನ ಮಮ್ಮಿಯ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಕನ್ನಡದ “ಅವ್ವ”ನನ್ನು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸೋಣ….! ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶನಿವಾರ (ಅ.31) ನಡೆದ ” ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಾಗಿರುವುದು …

Read More »

ಡಿಸಿಸಿ ಬ್ಯಾಂಕ್ ಚುನಾವಣೆ, ಮೂರು ಕ್ಷೇತ್ರಗಳಲ್ಲಿ ಡಿಶ್ಯುಂ ಡಿಶ್ಯುಂ

ಬೆಳಗಾವಿ-ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ‌ ಜಂಟಿ ಸುದ್ದಿಗೋಷ್ಠಿ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ‌ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಕಳೆದ ಒಂದು ವಾರದಿಂದ ಬ್ಯಾಂಕ್ ಚುನಾವಣೆ ಅವಿರೋಧ ಆಯ್ಕೆ ಮಾಡಲು ಕಸರತ್ತು ನಡೆಸಿದ್ದೇವು. ವೈಮನಸ್ಸು ತಪ್ಪಿಸಲು ಅವಿರೋಧ ಆಯ್ಕೆ ಒತ್ತು ಕೊಟ್ಟಿದ್ದೇವು. ಪಕ್ಷದ ಮುಖಂಡರು ಇದೇ ಸೂಚನೆಯನ್ನು ನೀಡಿದ್ದರು. ಜಾರಕಿಹೊಳಿ‌, ಸವದಿ ಹಾಗೂ ಕತ್ತಿ ಕುಟುಂಬ ಒಟ್ಟಿಗೆ ಬರಬೇಕು ನಿರ್ಧಾರ …

Read More »

ರಾಜಕೀಯ ಬದ್ಧ ವೈರಿಗಳ ಮುಖಾಮುಖಿ

ಬೆಳಗಾವಿ- ಬೆಳಗಾವಿ ರಾಜಕೀಯ ಬದ್ಧ ವೈರಿಗಳ ಮುಖಾಮುಖಿ ಆಗಿದ್ದಾರೆ.ಬೆಳಗಾವಿ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಇಬ್ಬರು ಮುಖಾಮುಖಿ ಆಗುವ ಮೂಲಕ ಮೂರು ವರ್ಷಗಳ ವೈರತ್ವಕ್ಕೆ ಅಂತ್ಯ ಹಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಾವು- ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದ ಈ ಇಬ್ಬರು ನಾಯಕರು ಒಂದೇ ವೇದಿಕೆಗೆ ಬರಬೇಕೆನ್ನುವದು ಬಿಜೆಪಿ ಕಾರ್ಯಕರ್ತರ ಅಪೇಕ್ಷೆಯಾಗಿತ್ತು ,ಡಿಸಿಸಿ ಬ್ಯಾಂಕ್ ಚುನಾವಣೆ ಈ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಡಿಸಿಸಿ ಬ್ಯಾಂಕಿನಲ್ಲಿ ಮುಖಾಮುಖಿಯಾದ ಇಬ್ಬರು ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಸಚಿವ …

Read More »

ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಹೊಸ ಎಂಟ್ರಿ

ಬೆಳಗಾವಿ-ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಗೆ ಸಚಿವ ರಮೇಶ ಜಾರಕಿಹೊಳಿ‌ ಅವರು ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ್ ಜತೆಗೆ ಡಿಸಿಸಿ ಬ್ಯಾಂಕಿಗೆ ಆಗಮಿಸಿದ್ದಾರೆ. ಖಾನಾಪುರ ನಿರ್ದೇಶಕ ಸ್ಥಾನಕ್ಕೆ ಇಬ್ಬರ ನಡುವೆ ಪವರ್ ಫುಲ್ ಫೈಟ್ ನಡೆಯುತ್ತಿದೆ. ಮಾಜಿ ಶಾಸಕ ಅರವಿಂದ ಪಾಟೀಲ್, ಶಾಸಕಿ ಅಂಜಲಿ ನಿಂಬಾಳ್ಕರ್ ನಡುವೆ ಫೈಟ್ ನಡೆಯುತ್ತಿದ್ದು ಅರವಿಂದ ಪಾಟೀಲ್ ಜತೆಗೆ ರಮೇಶ ಜಾರಕಿಹೊಳಿ‌ ಮಾತುಕತೆ ಆರಂಭವಾಗಿದೆ. ಈ ಚರ್ಚೆಯಲ್ಲಿ ರಮೇಶ್ …

Read More »

ಬ್ಲ್ಯಾಕ್ ಡೇ ಗೆ ಕರೆ ಕೊಟ್ಟ ಮಹಾರಾಷ್ಟ್ರ ಸರ್ಕಾರ…!

ಬೆಳಗಾವಿ- ಕನ್ನಡಿಗರು ಹಬ್ಬದ ದಿನ ರಾಜ್ಯೋತ್ಸವದ ದಿನ ಮಹಾರಾಷ್ಟ್ರ ಸರ್ಕಾರವೇ ಕಪ್ಪು ದಿನ ಆಚರಿಸುವ ಮೂಲಕ ಎಂಈಎಸ್ ಗೆ ಬೆಂಬಲ ನೀಡಲು ನಿರ್ಧರಿಸಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತಕ್ಕ ಉತ್ತರ ಕೊಡಬೇಕಾದ ನಮ್ಮ ಸರ್ಕಾರ ಮಲಗಿದೆಯಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಕಪ್ಪು ಪಟ್ಟಿ ಧರಿಸಿ,ಕಪ್ಪು ದಿನ ಆಚರಣೆಗೆ ಬೆಂಬಲ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿ ಈ ಕುರಿತು ಮಹಾರಾಷ್ಟ್ರ ಗಡಿ …

Read More »

ನಾ ಅಂದ್ರ ಏನ್ ತಿಳ್ಕೊಂಡೇರ್ರೀ.! ನಾನ ಬ್ಯಾರೇ…ನನ್ನ ಸ್ಟೈಲ ಬ್ಯಾರೇ…!

ಚಿತ್ರ ಕೃಪೆ- ಪಿ.ಕೆ ಬಡಿಗೇರ ಬೆಳಗಾವಿ- ರಮೇಶ್ ಕತ್ತಿ ಮಾತನಾಡಲು ಶುರು ಮಾಡಿದ್ರ ಜನ ಬಹಳ ಕುತೂಹಲ ದಿಂದ ಕೆಳ್ತಾ ಇದ್ರು ಆದ್ರೆ ಈಗ ರಮೇಶ್ ಕತ್ತಿ ಅವರ ಲೈಫ್ ಸ್ಟೈಲ್ ಬದಲಾಗಿದೆ.ಯಾವಾಗಲೂ ಮೀಸೆ ತಿರುವುತ್ತಲೇ ಮಾತು ಶುರು ಮಾಡ್ತಾರೆ. ಡಿಸಿಸಿ ಬ್ಯಾಂಕಿನಲ್ಲಿ ಜಿಲ್ಲೆಯ ಘಟಾನುಘಟಿ ನಾಯಕರು ಸೇರಿದ್ದರು ಎಲ್ಲರ ನಡುವೆ,ಎಲ್ಲರ ಗಮನ ಸೆಳೆದಿದ್ದು ರಮೇಶ್ ಕತ್ತಿ ಅವರ ಮೀಸೆ,ಯಾಕಂದ್ರೆ ರಮೇಶ್ ಕತ್ತಿ ಅವರ ಮಾತಿಗಿಂತಲೂ ಅವರ ಮೀಸೆ ಚೂಪಾಗಿತ್ತು …

Read More »

ರಾಜಿ ಸಂಧಾನ,ಅಂಜಲಿ ನಿಂಬಾಳ್ಕರ್ ಗೆ ವರದಾನ ….?

ಬೆಳಗಾವಿ-ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯಿತು,ಹಲವಾರು ವರ್ಷಗಳಿಂದ ಕಿತ್ತಾಡುತ್ತಿದ್ದ ,ಲಕ್ಷ್ಮಣ ಸವದಿ ಮತ್ತು ಕತ್ತಿ ಸಹೋದರರು ಒಂದಾದ್ರು ಇಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಸವದಿ,ಉಮೇಶ್ ಕತ್ತಿ ,ರಮೇಶ್ ಕತ್ತಿ,ಮಹಾಂತೇಶ ಕವಟಗಿಮಠ,ಶಶಿಕಲಾ ಜೊಲ್ಲೆ,ಅಣ್ಣಾ ಸಾಹೇಬ್ ಜೊಲ್ಲೆ,ಉಪ ಸಭಾಪತಿ ಮಾಮನಿ,ಈರಣ್ಣಾ ಕಡಾಡಿ ಸಂಜಯ ಪಾಟೀಲ ಅವರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ,ನಮ್ಮಲ್ಲಿರುವ ಗೊಂದಲಗಳಿಗೆ ತೆರೆ ಬಿದ್ದಿದೆ.ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ನೀಡಿದ್ರು ಈ ಬಾರಿ ಡಿಸಿಸಿ ಬ್ಯಾಂಕಿನ …

Read More »

ಡಿಸಿಸಿ ಬ್ಯಾಂಕಿನ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡುವ ಪ್ರಯತ್ನ- ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಏಳಿಗೆಗಾಗಿ,ರೈತರ ಹಿತಕ್ಕಾಗಿ,ಬ್ಯಾಂಕಿನ ಒಳಿತಿಗಾಗಿ,ಈ ಬಾರಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಬೇಕು ಎಂದು ಪಕ್ಷದ ವರಿಷ್ಠರು ಸೂಚಿಸಿದ ಹಿನ್ನಲೆಯಲ್ಲಿ ಎಲ್ಲ ಭಿನ್ನಾಭಿಪ್ರಾಯ ಬದಿಗಿಟ್ಟು ಜಿಲ್ಲೆಯ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುತ್ತಿದೆ.ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಬಹುತೇಕ 7 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದಾರೆ ಅಧಿಕೃತ ಘೋಷಣೆ …

Read More »